ಉಡುಪಿಯ ಹಲವೆಡೆ ಉರಿಯದ ಬೀದಿದೀಪಗಳು

ಕತ್ತಲಿನಲ್ಲಿ ಓಡಾಡಲು ಭಯಪಡುವ ಪರಿಸ್ಥಿತಿ !

Team Udayavani, Dec 15, 2020, 4:50 AM IST

Udupiಉಡುಪಿಯ ಹಲವೆಡೆ ಉರಿಯದ ಬೀದಿದೀಪಗಳು

ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳಲ್ಲಿ ಒಂದಾದ ಬೀದಿದೀಪಗಳ ನಿರ್ವಹಣೆ ಹಲವೆಡೆ ಸಮರ್ಪಕವಾಗಿಲ್ಲದ ಕಾರಣ ಜನರು ಕತ್ತಲಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿವೆ. ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಪ್ರತಿ ವಾರ್ಡ್‌ನ ಬೀದಿಯಲ್ಲೂ ವಿದ್ಯುತ್‌ ಕಂಬಗಳಿದ್ದು, ಅವುಗಳಲ್ಲಿ ದೀಪಗಳೂ ಇವೆ. ಆದರೆ ಅವುಗಳಲ್ಲಿ ಹಲವು ರಾತ್ರಿಯಾದರೆ ಬೆಳಗುವುದಿಲ್ಲ. ರಸ್ತೆ ಬದಿ ಅಂಗಡಿಗಳು, ಮನೆಗಳ ದೀಪ ಗಳ ಬೆಳಕನ್ನೇ ರಸ್ತೆಯಲ್ಲಿ ಸಂಚರಿಸುವವರು ನಿರೀಕ್ಷಿಸುವಂತಾಗಿದೆ.

17,800 ದೀಪಗಳು
ನಗರಸಭೆ ವ್ಯಾಪ್ತಿಯಲ್ಲಿ 17,800 ವಿವಿಧ ಬೀದಿ ದೀಪಗಳಿವೆ. ಸುಮಾರು 815 ಕಂಟ್ರೋಲಿಂಗ್‌ ಪಾಯಿಂಟ್‌ಗಳಿವೆ. ನಿಯಮದ ಪ್ರಕಾರ ಪ್ರತಿನಿತ್ಯ ಸಂಜೆ 6ರಿಂದ ಬೆಳಗ್ಗೆ 6ರ ವರೆಗೆ ವಿದ್ಯುತ್‌ ದೀಪಗಳು ಬೆಳಗಬೇಕು. ಅದರೆ ಇಲ್ಲಿ ಬಹುತೇಕ ಬೀದಿದೀಪಗಳು ಉರಿಯುತ್ತಿಲ್ಲ.

ಎನ್‌.ಎಚ್‌. 169ಎ
ಕುಂಜಿಬೆಟ್ಟಿನಿಂದ ಮಣಿಪಾಲದವರೆಗೂ ಬೀದಿದೀಪಗಳು ಕಾಣ ಸಿಗುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಕಾಂಕ್ರೀಟ್‌ ಕೆಲಸ ಎಂಐಟಿ ವರೆಗೆ ಪೂರ್ಣಗೊಂಡು ವರ್ಷ ಸಮೀಪಿಸುತ್ತಿದ್ದರೂ ದಾರಿದೀಪಗಳ ಅಳವಡಿಕೆ ಬಾಕಿ ಇದೆ. ರಾತ್ರಿ ಹೊತ್ತು ವಾಹನ ದಟ್ಟಣೆ ಈ ಭಾಗದಲ್ಲಿ ಹೆಚ್ಚಿರುವುದರಿಂದ ಸಹಜವಾಗಿ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

ಪೆರಂಪಳ್ಳಿ -ಮಣಿಪಾಲ ರಸ್ತೆ
ಅಂಬಾಗಿಲಿನಿಂದ ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲಕ್ಕೆ ತೆರಳುವ ರಸ್ತೆಯಲ್ಲೂ ಇದೇ ಸ್ಥಿತಿ ಇದೆ. ಕಾಲೇಜು, ಆಸ್ಪತ್ರೆ, ಕೈಗಾರಿಕಾ ಪ್ರದೇಶಕ್ಕೆ ನೂರಾರು ವಾಹನಗಳು ಓಡಾಡುತ್ತವೆ. ರಾತ್ರಿ ಹೊತ್ತು ಈ ರಸ್ತೆಯಲ್ಲಿ ದೀಪಗಳ ಬೆಳಕು ಗೋಚರಿಸುತ್ತಿಲ್ಲ. ಇದೀಗ ಈ ಪ್ರದೇಶದಲ್ಲಿ ರಸ್ತೆ ವಿಸ್ತರೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸಲೂ ಭಯವಾಗುತ್ತಿದೆ ಎನ್ನುತ್ತಾರೆ ಮಣಿಪಾಲದ ರವೀಂದ್ರ ಅವರು.

ಮಣಿಪಾಲ -ಅಲೆವೂರು
ಮಣಿಪಾಲ ಎಂಜೆಸಿ- ಅಲೆವೂರು ಮಾರ್ಗದ ಬಹುತೇಕ ಕಡೆಗಳಲ್ಲಿ ವಿದ್ಯುತ್‌ ದೀಪಗಳು ಬೆಳಗುತ್ತಿಲ್ಲ. ಇಂಡಸ್ಟ್ರಿಯಲ್‌ ಏರಿಯಾ ಸೇರಿದಂತೆ ವಿವಿಧ ಕಡೆಗಳಲ್ಲಿ ರಾತ್ರಿ ಪಾಳಿ ಮುಗಿಸಿ ಮನೆಗೆ ಹೋಗುವವರು, ರಾತ್ರಿ- ಮುಂಜಾನೆ ವಾಕಿಂಗ್‌ ಹೋಗುವವರು ಆತಂಕದಲ್ಲಿ ಓಡಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ದುರಸ್ತಿ ಮಾಡುವ ಕುರಿತು ನಗರಸಭೆ ಭರವಸೆ ನೀಡುತ್ತಾ ಬಂದಿದೆ. ಆದರೆ ಇದುವರೆಗೂ ದುರಸ್ತಿಯಾಗಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಮಣಿಪಾಲ ಎಂಜೆಸಿ ಸನಿಹದ ನಿವಾಸಿ ಚಂದ್ರಶೇಖರ್‌.

ಅನುಮಾನದ ನೋಟ!
ರಾತ್ರಿಯಾದರೆ ಬೀದಿದೀಪಗಳು ಉರಿಯದ ಕಾರಣದಿಂದ ಬೀದಿಯಲ್ಲಿ ಹಿಂಡಾಗಿ ತಿರುಗುವ ನಾಯಿಗಳು ಮತ್ತು ಗಿಡ ಗಂಟಿಗಳು ಬೆಳೆದಿರುವ ಕಡೆಯಲ್ಲಿ ಹಾವು, ಇನ್ನೊಂದೆಡೆ ಕಳವಿನ ಭಯದಿಂದ ಓಡಾಡುವುದು ಕಷ್ಟವಾಗಿದೆ. ರಾತ್ರಿ ವೇಳೆ ಯಾರೇ ಓಡಾಡಿದರೂ ಅನುಮಾನದಿಂದ ನೋಡುವಂತಾಗಿದೆ.

ಶೀಘ್ರ ದುರಸ್ತಿಗೊಳಿಸಿ
ವಿಪಿ ನಗರದಲ್ಲಿ ವಿದ್ಯುತ್‌ ದೀಪಗಳು ಉರಿಯುತ್ತಿಲ್ಲ. ಇಲ್ಲಿ ಬೆಳಗ್ಗೆ-ರಾತ್ರಿ ವಾಕಿಂಗ್‌ಗೆಂದು ತೆರಳುವ ಹಿರಿಯರಿಗೆ ಸಮಸ್ಯೆ ಆಗಿದೆ. ಶೀಘ್ರದಲ್ಲಿ ದುರಸ್ತಿಗೊಳಿಸಬೇಕು.
-ಪ್ರೊ| ಉದಯ ಶೆಟ್ಟಿ, ವಿಪಿ ನಗರ ನಿವಾಸಿ

ಹಂತ ಹಂತವಾಗಿ ಅಳವಡಿಕೆ
ನಗರಸಭೆ ವ್ಯಾಪ್ತಿಯಲ್ಲಿ ಬೀದಿ ದೀಪ ಅಳವಡಿಕೆಗೆ ಟೆಂಡರ್‌ ಆಗಿದೆ. ವಿವಿಧ ಕಡೆಗಳಲ್ಲಿ ಕೆಲಸಗಳು ಭರದಿಂದ ಸಾಗುತ್ತಿವೆ. ಎನ್‌ಎಚ್‌ 169 (ಎ) ಮಾರ್ಗ, ಮಣಿಪಾಲ, ಅಲೆವೂರು, ವಿಪಿ ನಗರ ಸೇರಿದಂತೆ ಇತರ ಪ್ರದೇಶದ ಬೀದಿದೀಪಗಳನ್ನು ಹಂತ ಹಂತವಾಗಿ ಅಳವಡಿಸಲಾಗುವುದು.
-ಡಾ| ಉದಯ ಶೆಟ್ಟಿ, ಪೌರಾಯುಕ್ತರು, ನಗರಸಭೆ ಉಡುಪಿ

35 ಒಟ್ಟು ವಾರ್ಡ್‌ಗಳು
17,800 ನಗರದಲ್ಲಿರುವ ಬೀದಿ ದೀಪಗಳ ಸಂಖ್ಯೆ
815 ಕಂಟ್ರೋಲಿಂಗ್‌ ಪಾಯಿಂಟ್‌ಗಳು

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.