ಉಡುಪಿ ನಗರ: ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ
Team Udayavani, Oct 30, 2022, 9:17 AM IST
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅ.31 ಮತ್ತು ನ.1ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಬಗ್ಗೆ ನಗರಸಭೆ ಪ್ರಕಟಣೆ ನೀಡಿದ್ದು, ಬಜೆ ನೀರು ಸರಬರಾಜು ರೇಚಕ ಸ್ಥಾವರದಲ್ಲಿ ಪ್ಯಾನೆಲ್ ಬೋರ್ಡ್ ಟ್ರಾನ್ಸ್ ಫಾರ್ಮರ್ ಹಾಗೂ ಮೋಟಾರ್ ಬದಲಾವಣೆ ಮಾಡುವ ಕಾಮಗಾರಿ ನಡೆಯಲಿದೆ. ಈ ಕಾರಣದಿಂದ ಸೋಮವಾರ ಮತ್ತು ಮಂಗಳವಾರ ಉಡುಪಿ ನಗರ ಸಭಾ ವ್ಯಾಪ್ತಿಯ 35 ವಾರ್ಡುಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಇದನ್ನೂ ಓದಿ:ಪುತ್ತೂರಿನ ವಿದ್ಯಾರ್ಥಿಯ ಆಂಗ್ಲ ಕವನ 8ನೇ ತರಗತಿ ಪಠ್ಯದಲ್ಲಿ
ಹೀಗಾಗಿ ಸಾರ್ವಜನಿಕರು ಇಂದೇ ಅಗತ್ಯ ನೀರು ಶೇಖರಿಸಿಡಬೇಕು ಎಂದು ಸೂಚಿಸಲಾಗಿದೆ.