ಕೃಷಿ ಚಟುವಟಿಕೆ: ಸುಮಾರು 250 ಎಕ್ರೆಗೂ ಅಧಿಕ ಕೃಷಿಭೂಮಿಯಲ್ಲಿ ಚಾಪೆ ನೇಜಿಗೆ ಸಕಲ ಸಿದ್ದತೆ


Team Udayavani, Jun 11, 2022, 12:01 PM IST

ಕೃಷಿ ಚಟುವಟಿಕೆ: ಸುಮಾರು 250 ಎಕ್ರೆಗೂ ಅಧಿಕ ಕೃಷಿಭೂಮಿಯಲ್ಲಿ ಚಾಪೆ ನೇಜಿಗೆ ಸಕಲ ಸಿದ್ದತೆ

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಳ್ಳಾಡಿ ಹರ್ಕಾಡಿ ಗ್ರಾಮದ ಹಿರಿಯ ಸಾಂಪ್ರದಾಯಿಕ ಕೃಷಿಕ ಗಾವಳಿ ಪದ್ಮನಾಭ ಕಿಣಿ ಅವರು ಭತ್ತದ ಬೀಜದ ಬಿತ್ತನೆ ಮಾಡಿ ,ಸುಮಾರು 3ಸಾವಿರಕ್ಕೂ ಅಧಿಕ ಚಾಪೆ ಮಾದರಿಯಲ್ಲಿ ಭತ್ತದ ಸಸಿ ಸಿದ್ದಪಡಿಸಿಕೊಂಡು. ವೈಜ್ಞಾನಿಕ ಯಂತ್ರೋಪಕರಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಚಾಪೆ ನೇಜಿಯ ಕಾರ್ಯವನ್ನು ಜೂ.10 ರಂದು ಚಾಲನೆ ನೀಡಲಾಗಿದೆ.

ಚಾಪೆ ನೇಜಿಯಲ್ಲಿ ವಿಶಿಷ್ಟ ಆವಿಷ್ಕಾರ :  ಬಾಲ್ಯದಿಂದಲೂ ತಂದೆ ಶ್ರೀಧರ ಕಿಣಿ ಅವರ ಮಾರ್ಗದರ್ಶನದಂತೆ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ತಳೆದ ಕೃಷಿಕ ಗಾವಳಿ ಪದ್ಮನಾಭ ಕಿಣಿ ಅವರು ಎಂಓ4, ಎಂಓ13, ಐಶ್ವರ್ಯ ಸೇರಿದಂತೆ ವಿವಿಧ ಭತ್ತದ ತಳಿಗಳನ್ನು ಸಂಗ್ರಹಿಸಿ, ಹೊಸ ತಳಿಗಳ ಬೀಜೋತ್ಪಾದನೆ ಹಾಗೂ ತನ್ನ ಮನೆಯ ಅಂಗಣದಲ್ಲಿಯೇ ಭತ್ತದ ಬೀಜದ ಬಿತ್ತನೆ ಮಾಡಿ ಸುಮಾರು 3ಸಾವಿರಕ್ಕೂ ಅಧಿಕ ಚಾಪೆ ಮಾದರಿಯಲ್ಲಿ (ಪ್ಲಾಸ್ಟಿಕ್‌ ಟ್ರೇ) ಭತ್ತದ ಸಸಿ ಸಿದ್ದಪಡಿಸಿಕೊಂಡು, ಚಾಪೆ ನೇಜಿಯ ಮೂಲಕವೇ ಕೃಷಿಯಲ್ಲಿ ವಿಭಿನ್ನ ಪ್ರಯೋಗ ಮಾಡಿ ಜಿಲ್ಲೆಯಲ್ಲಿಯೇ ಚಾಪೆ ನೇಜಿ ಕೃಷಿ ಪದ್ದತಿಗೊಂದು ಹೊಸ ಭಾಷ್ಯ ಬರೆದಿದ್ದಾರೆ. ಬದಲಾದ ತಾಂತ್ರಿಕ ಯುಗದಲ್ಲಿ ಕೃಷಿ ಚಟುವಟಿಕೆಗೆ ಎದುರಾದ ಕೂಲಿ ಕಾರ್ಮಿಕರ ಸಮಸ್ಯೆಗೆ ದೃತಿಗೆಡದ ಇವರು ಸುಮಾರು 6 ವೈಜ್ಞಾನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು, ಈಗಾಗಲೇ ತಾಲೂಕಿನಾದ್ಯಂತ ಚಾಪೆನೇಜಿ ಕಾರ್ಯಕ್ಕೆ ಸರ್ವ ಸನ್ನದ್ಧರಾಗಿದ್ದಾರೆ.

ವರ್ಷಕ್ಕೆ ಸುಮಾರು 250 ಎಕ್ರೆಗೂ ಅಧಿಕ ಕೃಷಿಭೂಮಿಯಲ್ಲಿ ಚಾಪೆ ನೇಜಿ :  

ಇವರ ಬಳಿ ಸುಮಾರು 6 ವೈಜ್ಞಾನಿಕ ನಾಟಿ ಯಂತ್ರಗಳಿದ್ದು , 10 ಮಂದಿ ಆಂಧ್ರ ಹಾಗೂ ಗಂಗಾವತಿ ಮೂಲದ ನುರಿತ ನಾಟಿ ಯಂತ್ರಗಳ ಚಾಲಕರು ಜಿಲ್ಲೆಯಾದ್ಯಂತ ವರ್ಷಕ್ಕೆ ಸುಮಾರು 250 ಎಕ್ರೆ ಗೂ ಅಧಿಕ ಕೃಷಿಭೂಮಿಗೆ ಬೇಕಾಗುವಷ್ಟು , 3ಸಾವಿರಕ್ಕೂ ಅಧಿಕ ಚಾಪೆ ಮಾದರಿಯಲ್ಲಿ (ಪ್ಲಾಸ್ಟಿಕ್‌ ಟ್ರೇ )ಸಿದ್ದಪಡಿಸುವ ಜತೆಗೆ ಅಗತ್ಯವಿರುವ ಕೃಷಿಕರಿಗೆ ಸ್ಥಳಕ್ಕೆ ತೆರಳಿ ಸುಗ್ಗಿ ಹಾಗೂ ಕಾತೆ ಬೆಳೆಗಳಿಗಾಗಿ ಚಾಪೆ ನೇಜಿ ಮಾಡಲು ಕಾರ್ಯೋನ್ಮುಖರಾಗಿದ್ದಾರೆ.

ಮುಂಗಾರು ಆಗಮನವಾದ್ದರಿಂದ ಈಗಾಗಲೇ ಸುಮಾರು 250 ಎಕ್ರೆ ಗೂ ಅಧಿಕ ಕೃಷಿಭೂಮಿಗೆ ಬೇಕಾಗುವಷ್ಟು ಚಾಪೆ ನೇಜಿ ಶೀಟ್‌ಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಒಂದು ಎಕರೆ ಕೃಷಿಭೂಮಿಗೆ ಸುಮಾರು 20 ಕೆಜಿ ಭತ್ತದ ಬೀಜ, ಸುಮಾರು 80 ಶೀಟ್‌ಗಳನ್ನು (2ಫೀಟ್‌ ಅಗಲ ಹಾಗೂ 1ಫೀಟ್‌ ಎತ್ತರದ ಪ್ಲಾಸ್ಟಿಕ್‌ ಟ್ರೇ) ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮೇ.10 ಶುಕ್ರವಾರದಂದು ಸುಮಾರು 4 ಎಕರೆ ವಿಸ್ತೀರ್ಣದ ಕೃಷಿಭೂಮಿಯಲ್ಲಿ ಈಗಾಗಲೇ ಚಾಪೆ ನೇಜಿ ಕಾರ್ಯವನ್ನು ಆರಂಭಿಸಿದ್ದೇವೆ. – ಗಾವಳಿ ಪದ್ಮನಾಭ ಕಿಣಿ  ಹಿರಿಯ ಸಾಧಕ ಕೃಷಿಕರು.

 

-ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

ಟಾಪ್ ನ್ಯೂಸ್

1-asdsadd

ರಷ್ಯಾ-ಉಕ್ರೇನ್ ಮಾನವ ಹಕ್ಕು ಸಂಸ್ಥೆಗಳು, ಬಿಲಿಯಾಟ್ಸ್ಕಿ ಗೆ ಜಂಟಿಯಾಗಿ ಶಾಂತಿ ನೊಬೆಲ್

ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

ನಾನು ಸೋನಿಯಾ ಗಾಂಧಿಯ ರಿಮೋಟ್ ಕಂಟ್ರೋಲ್ ಅಲ್ಲ; ಬಿಜೆಪಿಗೆ ಖರ್ಗೆ ತಿರುಗೇಟು

ನಾನು ಸೋನಿಯಾ ಗಾಂಧಿಯ ರಿಮೋಟ್ ಕಂಟ್ರೋಲ್ ಅಲ್ಲ; ಬಿಜೆಪಿಗೆ ಖರ್ಗೆ ತಿರುಗೇಟು

jds

SSC: 20,000 ಹುದ್ದೆ ಆಯ್ಕೆಗೆ ಕನ್ನಡದಲ್ಲೂ ಪರೀಕ್ಷೆ ನಡೆಸಲು ಹೆಚ್ ಡಿಕೆ ಆಗ್ರಹ

web baby corner

Easy recipes: ಬೇಬಿ ಕಾರ್ನ್ ಮಂಚೂರಿಯನ್‌ ಟ್ರೈ ಮಾಡಿ ಟೇಸ್ಟ್ ನೋಡಿ…

ಪ.ಜಾತಿಗೆ 17% ಪ. ಪಂಗಡಕ್ಕೆ 7% ಮೀಸಲಾತಿ ಹೆಚ್ಚಿಸಲು ತೀರ್ಮಾನ: ಸಿಎಂ ಬೊಮ್ಮಾಯಿ

ಪ.ಜಾತಿಗೆ 17%, ಪ. ಪಂಗಡಕ್ಕೆ 7% ಮೀಸಲಾತಿ ಹೆಚ್ಚಿಸಲು ತೀರ್ಮಾನ: ಸಿಎಂ ಬೊಮ್ಮಾಯಿ

1-adasas-dsa

ಮಂಗಳೂರು : ಲಂಚ ಪಡೆದ ಭೂಮಾಪಕನಿಗೆ 3 ವರ್ಷ ಶಿಕ್ಷೆ, ದಂಡ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಕೋಟಿತೀರ್ಥ ಪುಷ್ಕರಿಣಿಯ ಮೀನುಗಳ ಸಾವು, ಗ್ರಾಮಸ್ಥರ ಆಕ್ರೋಶ

9

ಕುಂದಾಪುರ: ಇನ್ನೂ ಆಗಿಲ್ಲ ಸರ್ವಿಸ್‌ ರಸ್ತೆ ಭೂಸ್ವಾಧೀನ!

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ರಥೋತ್ಸವ ಸಂಪನ್ನ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ರಥೋತ್ಸವ ಸಂಪನ್ನ

news-1

ಗುಜ್ಜಾಡಿ ಶಾಲೆಯಲ್ಲಿ ತರಕಾರಿ ತೋಟ: ಮಕ್ಕಳಿಗೆ ಕೃಷಿ ಪಾಠ

1

ಮಕ್ಕಳು ಬೆಳೆಸಿದ ಹೂವಿನ ಕೋಲು

MUST WATCH

udayavani youtube

ಯುವಕನಾದ ಸಿದ್ದರಾಮಯ್ಯ… ರಾಹುಲ್ ಜತೆ ರೇಸ್ …. ವಿಡಿಯೋ ವೈರಲ್

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

ಹೊಸ ಸೇರ್ಪಡೆ

ಪಾದಯಾತ್ರೆ; ಸಂವಾದದಲ್ಲಿ ಸಮಸ್ಯೆ ಹೇಳಿಕೊಂಡು ರೈತ ಮಹಿಳೆಯರ ಕಣ್ಣೀರು

ಪಾದಯಾತ್ರೆ; ಸಂವಾದದಲ್ಲಿ ಸಮಸ್ಯೆ ಹೇಳಿಕೊಂಡು ರೈತ ಮಹಿಳೆಯರ ಕಣ್ಣೀರು

1-asdsadd

ರಷ್ಯಾ-ಉಕ್ರೇನ್ ಮಾನವ ಹಕ್ಕು ಸಂಸ್ಥೆಗಳು, ಬಿಲಿಯಾಟ್ಸ್ಕಿ ಗೆ ಜಂಟಿಯಾಗಿ ಶಾಂತಿ ನೊಬೆಲ್

ಕಣ್ಮನ ಸೆಳೆದ ಅರಕಲಗೂಡು ದಸರಾ ಉತ್ಸವ

ಕಣ್ಮನ ಸೆಳೆದ ಅರಕಲಗೂಡು ದಸರಾ ಉತ್ಸವ

ನರೇಗಾ ಮೂಲಕ ಜೈವಿಕ ಅನಿಲ ಸ್ಥಾಪನೆಗೆ ಒತ್ತು

ನರೇಗಾ ಮೂಲಕ ಜೈವಿಕ ಅನಿಲ ಸ್ಥಾಪನೆಗೆ ಒತ್ತು

ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.