
ಅಂಪಾರು: ಬೈಕ್ ಅಪಘಾತ; ಅಂಚೆ ಪಾಲಕ ಭಾಸ್ಕರ ಶೆಟ್ಟಿ ಸಾವು
Team Udayavani, Aug 18, 2022, 7:38 PM IST

ಸಿದ್ದಾಪುರ: ರಾಜ್ಯ ಹೆದ್ದಾರಿಯ ಅಂಪಾರು ಗ್ರಾಮದ ಮೂಡುಬಗೆ ಕೋಟೆಬೆಟ್ಟು ಕ್ರಾಸ್ ಬಳಿ ಸಿದ್ದಾಪುರ ಕಡೆಯಿಂದ ಅತೀ ವೇಗವಾಗಿ ಬಂದ ಬುಲೆಟ್ ಬೈಕ್ ಎದುರು ಕಡೆಯಿಂದ ಬರುತ್ತಿದ್ದ ಬೈಕಿಗೆ ನೇರವಾಗಿ ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಢಿಕ್ಕಿ ಪರಿಣಾಮ ಬೈಕ್ ಸವಾರ ಕೆ. ಭಾಸ್ಕರ ಶೆಟ್ಟಿ (53) ಅವರು ರಸ್ತೆಗೆ ಬಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡು ಕುಂದಾಪುರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ.
ಹೆಲ್ಮೆಟ್ ಧರಿಸಿದ್ದರೂ ಉಳಿಯದ ಪ್ರಾಣ: ಭಾಸ್ಕರ ಶೆಟ್ಟಿ ಅವರು ಕೋಟೆಬೆಟ್ಟುವಿನಲ್ಲಿ ನೂತನವಾಗಿ ಮನೆ ನಿರ್ಮಿಸುತ್ತಿದ್ದು, ಈ ಹಿನ್ನಲೆಯಲ್ಲಿ ಕರ್ತವ್ಯದಿಂದ ಸ್ವಲ್ಪ ಬೇಗ ಮನೆಗೆ ಬಂದಿದ್ದರು. ಮನೆ ನಿರ್ಮಾಣಕ್ಕೆ ಬೇಕಾಗುವ ಮರದ ಬಗ್ಗೆ ಮಾತನಾಡಲು ಮನೆಯಿಂದ ನೇರವಾಗಿ ಸಿದ್ದಾಪುರಕ್ಕೆ ಹೊರಟಿದ್ದರು. ಮನೆ ರಸ್ತೆಯಿಂದ ಮುಖ್ಯ ರಸ್ತೆ ಕ್ರಾಸ್ ಆಗುತ್ತಿದ್ದಂತೆ ಎದುರು ಕಡೆಯಿಂದ ಅತೀ ವೇಗವಾಗಿ ಬಂದ್ ಬುಲೆಟ್ ಬೈಕ್ ಢಿಕ್ಕಿ ಹೊಡೆದಿದೆ. ಭಾಸ್ಕರ ಶೆಟ್ಟಿ ಅವರು ಹೆಲ್ಮೆಟ್ ಧರಿಸಿದ್ದರೂ, ಅಪಘಾತದಲ್ಲಿ ಹೆಲ್ಮೆಟ್‌ಸಂಪೂರ್ಣ ಒಡೆದು ಹೋಗಿದೆ. ತಲೆ ರಸ್ತೆಗೆ ತಾಗಿ ತಲೆ ಒಡೆದು, ರಕ್ತಸ್ರಾವವಾಗಿ ಆಸ್ಪತ್ರೆ ಸಾಗಿಸುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ.
ಮೃತರು ಓರ್ವ ಪುತ್ರಿ ಪತ್ನಿಯನ್ನು ಅಗಲಿದ್ದಾರೆ.
ಸ್ಥಳೀಯರಾದ ಸಂಜೀವ ಮೊಗವೀರ ಅವರು ಅಪಘಾತದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Love: ಗೆಳೆಯನನ್ನು ವಿವಾಹವಾಗಲು ಪಾಕ್ ಗೆ ತೆರಳಿದ್ದ ಅಂಜು 5 ತಿಂಗಳ ಬಳಿಕ ಭಾರತಕ್ಕೆ ವಾಪಸ್

Karnataka; ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದ: ಸಿದ್ದರಾಮಯ್ಯ

Medical College : ವೈದ್ಯಕೀಯ ಕಾಲೇಜು ವೆಚ್ಚದ ತನಿಖೆ ಏನಾಯಿತು?

Vijayapura; ಭ್ರೂಣ ಹತ್ಯೆ ಅಕ್ಷಮ್ಯ ಅಪರಾಧ: ಸಚಿವ ಎಂ.ಬಿ.ಪಾಟೀಲ

State government: ಮೊಟ್ಟೆಗೆ ಸರ್ಕಾರ ನೀಡುವ ಹಣ ಸಾಲುತ್ತಿಲ್ಲ