ಕೋಟ: ಮಗುಚಿ ಬಿದ್ದ ದೋಣಿ: ಯುವಕ ಸಾವು

Team Udayavani, Jul 23, 2022, 12:37 AM IST

ಮಗುಚಿ ಬಿದ್ದ ದೋಣಿ: ಯುವಕ ಸಾವು

ಕೋಟ: ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಮೂವರು ಯುವಕರಲ್ಲಿ ಓರ್ವ ನೀರು ಪಾಲಾಗಿ ಸಾವನ್ನಪ್ಪಿದ್ದು, ಇಬ್ಬರು ಅಪಾಯದಿಂದ ಪಾರಾದ ಘಟನೆ ಸಾಲಿಗ್ರಾಮದ ಪಾರಂಪಳ್ಳಿ ಪಡುಕರೆ ಕಡಲ ಕಿನಾರೆಯಲ್ಲಿ ಶುಕ್ರವಾರ ಸಂಭವಿಸಿದೆ.

ಸ್ಥಳೀಯ ಪಡುಕೆರೆ ನಿವಾಸಿ ಭಾಸ್ಕರ್‌ ಮೊಗವೀರ ಅವರ ಪುತ್ರ ಸುಮಂತ್‌ (23) ಮೃತ ಯುವಕ. ಸ್ಥಳೀಯರಾದ ಸಂದೀಪ್‌, ಪ್ರಜ್ವಲ್‌ ಅಪಾಯದಿಂದ ಪಾರಾಗಿದ್ದಾರೆ. ಈ ಮೂವರು ಯುವಕರು ಸಣ್ಣ ದೋಣಿಯಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ಭಾರೀ ಗಾತ್ರದ ಅಲೆಗಳಿಗೆ ಸಿಕ್ಕಿ ದೋಣಿ ನಿಯಂತ್ರಣಕ್ಕೆ ಸಿಗದೆ ಮಗುಚಿಕೊಂಡಿದೆ.

ಈ ವೇಳೆ ದೋಣಿಯಲ್ಲಿದ್ದ ಸಂದೀಪ್‌ ಮತ್ತು ಪ್ರಜ್ವಲ್‌ ಈಜಿ ದಡ ಸೇರಿದ್ದು, ಅಲೆಗಳ ಹೊಡೆತಕ್ಕೆ ಸಿಕ್ಕಿದ ಸುಮಂತ್‌ ಸಾಕಷ್ಟು ಹೊತ್ತು ಈಜಾಡಿ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದ. ಆದರೆ ಕೊನೆಗೂ ಕೈ ಸೋತು ನೀರು ಪಾಲಾಗಿದ್ದಾನೆ. ಸ್ಥಳೀಯರು ಬಲೆ ಮೂಲಕ ಆತನನ್ನು ಮೇಲೆತ್ತಿ ಜೀವನ್‌ಮಿತ್ರ ಆ್ಯಂಬುಲೆನ್ಸ್‌ ಮೂಲಕ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಕೋಟ ಪೊಲೀಸ್‌ ಠಾಣಾಧಿಕಾರಿ ಮಧು ಬಿ. ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದೇಶಕ್ಕೆ ತೆರಳುವವನಿದ್ದ
ಭಾಸ್ಕರ್‌ ಮೊಗವೀರ ಅವರ ಇಬ್ಬರು ಮಕ್ಕಳಲ್ಲಿ ಮೃತ ಸುಮಂತ್‌ ಹಿರಿಯವನಾಗಿದ್ದು, ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾನೆ. ಬಡ ಕುಟುಂಬದವನಾದ ಈತ ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಮುಂದಿನ ತಿಂಗಳು ವೀಸಾ ದೊರೆತು ವಿದೇಶಕ್ಕೆ ತೆರಳುವವನಿದ್ದ. ಅಷ್ಟರಲ್ಲೇ ಈ ರೀತಿಯ ದುರ್ಘ‌ಟನೆ ಸಂಭವಿಸಿದೆ.

ಟಾಪ್ ನ್ಯೂಸ್

1-bhup

ಭೂಪೇಂದ್ರ ಪಟೇಲ್ 2ನೇ ಬಾರಿಯ ಪ್ರಮಾಣವಚನಕ್ಕೆ ಮುಹೂರ್ತ ನಿಗದಿ

ಗುಜರಾತ್ ಫಲಿತಾಂಶ: ಬಿಜೆಪಿ ಟಿಕೆಟ್ ನಿಂದ ಗೆದ್ದ ರವೀಂದ್ರ ಜಡೇಜಾ ಪತ್ನಿ ರಿವಾಬಾ

ಗುಜರಾತ್ ಫಲಿತಾಂಶ: ಬಿಜೆಪಿ ಟಿಕೆಟ್ ನಿಂದ ಗೆದ್ದ ರವೀಂದ್ರ ಜಡೇಜಾ ಪತ್ನಿ ರಿವಾಬಾ

ಸಿಎಂ ಬೊಮ್ಮಾಯಿ

ಗುಜರಾತ್ ಚುನಾವಣಾ ಫಲಿತಾಂಶವು ಸುಶಾಸನದ ಫಲ: ಸಿಎಂ ಬೊಮ್ಮಾಯಿ

ಹಿಮಾಚಲ ಪ್ರದೇಶದಲ್ಲಿ ಫಲಿತಾಂಶದ ಮುನ್ನವೇ ಆಪರೇಷನ್ ಕಮಲದ ಭೀತಿ

ಹಿಮಾಚಲ ಪ್ರದೇಶದಲ್ಲಿ ಫಲಿತಾಂಶದ ಮುನ್ನವೇ ಆಪರೇಷನ್ ಕಮಲದ ಭೀತಿ

ಸಿದ್ದರಾಮಯ್ಯ

ಸುಮ್ಮನೆ ಇದ್ದರೂ ರಾಜ್ಯದಲ್ಲಿ ನಾವೇ ಗೆಲ್ಲುತ್ತೇವೆ: ಸಿದ್ದರಾಮಯ್ಯ

ಹಿಮಾಚಲ ಫಲಿತಾಂಶ: ಟ್ರೆಂಟ್ ಬದಲಿಸುತ್ತಾ ಕಾಂಗ್ರೆಸ್; ಭರ್ಜರಿ ಮುನ್ನಡೆ

ಹಿಮಾಚಲ ಫಲಿತಾಂಶ: ಟ್ರೆಂಡ್ ಬದಲಿಸುತ್ತಾ ಕಾಂಗ್ರೆಸ್; ಭರ್ಜರಿ ಮುನ್ನಡೆ

ಗುಜರಾತ್ ನಲ್ಲಿ 41 ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದ್ರೂ… ಮೋದಿ, ಶಾ ರಣತಂತ್ರ ಯಶಸ್ವಿ!

ಗುಜರಾತ್ ನಲ್ಲಿ 41 ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದ್ರೂ… ಮೋದಿ, ಶಾ ರಣತಂತ್ರ ಯಶಸ್ವಿ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟ್ರಾಫಿಕ್‌ ನಿಯಮಾವಳಿ ಉಲ್ಲಂಘನೆ: ನಗರದಲ್ಲಿ 63 ಲ.ರೂ. ದಂಡ ಸಂಗ್ರಹ!

ಟ್ರಾಫಿಕ್‌ ನಿಯಮಾವಳಿ ಉಲ್ಲಂಘನೆ: ನಗರದಲ್ಲಿ 63 ಲ.ರೂ. ದಂಡ ಸಂಗ್ರಹ!

ಎಪಿಎಲ್‌ಗೆ ಸಿಗುತ್ತಿಲ್ಲ ಅಕ್ಕಿ; 3 ತಿಂಗಳುಗಳಿಂದ ಅವ್ಯವಸ್ಥೆ ; ಶೀಘ್ರ ಸರಿಪಡಿಸುವ ಭರವಸೆ

ಎಪಿಎಲ್‌ಗೆ ಸಿಗುತ್ತಿಲ್ಲ ಅಕ್ಕಿ; 3 ತಿಂಗಳುಗಳಿಂದ ಅವ್ಯವಸ್ಥೆ ; ಶೀಘ್ರ ಸರಿಪಡಿಸುವ ಭರವಸೆ

ಅಮಾಯಕನಿಗೆ ಹಲ್ಲೆ ಪ್ರಕರಣ: ಎಸ್‌ಐ, ಇನ್‌ಸ್ಪೆಕ್ಟರ್‌ ವಿರುದ್ಧ ಜಾಮೀನು ರಹಿತ ವಾರಂಟ್‌

ಅಮಾಯಕನಿಗೆ ಹಲ್ಲೆ ಪ್ರಕರಣ: ಎಸ್‌ಐ, ಇನ್‌ಸ್ಪೆಕ್ಟರ್‌ ವಿರುದ್ಧ ಜಾಮೀನು ರಹಿತ ವಾರಂಟ್‌

ಸೀಮೆಎಣ್ಣೆ ವಿತರಣೆ ಸದ್ದಿಲ್ಲದೆ ಸ್ತಬ್ಧ : ಉತ್ಪಾದನೆಯೂ ಕಡಿಮೆಯಾಗಿದೆ

ಸೀಮೆಎಣ್ಣೆ ವಿತರಣೆ ಸದ್ದಿಲ್ಲದೆ ಸ್ತಬ್ಧ : ಉತ್ಪಾದನೆಯೂ ಕಡಿಮೆಯಾಗಿದೆ

ಉಡುಪಿ: ಸುಳ್ಳು ದಾಖಲೆ ಸೃಷ್ಠಿಸಿ ಪಾಸ್ ಪೋರ್ಟ್ ಪಡೆದ ಆರೋಪಿಗಳಿಗೆ ಶಿಕ್ಷೆ

ಉಡುಪಿ: ಸುಳ್ಳು ದಾಖಲೆ ಸೃಷ್ಠಿಸಿ ಪಾಸ್ ಪೋರ್ಟ್ ಪಡೆದ ಆರೋಪಿಗಳಿಗೆ ಶಿಕ್ಷೆ

MUST WATCH

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

ಹೊಸ ಸೇರ್ಪಡೆ

1-bhup

ಭೂಪೇಂದ್ರ ಪಟೇಲ್ 2ನೇ ಬಾರಿಯ ಪ್ರಮಾಣವಚನಕ್ಕೆ ಮುಹೂರ್ತ ನಿಗದಿ

ಗುಜರಾತ್ ಫಲಿತಾಂಶ: ಬಿಜೆಪಿ ಟಿಕೆಟ್ ನಿಂದ ಗೆದ್ದ ರವೀಂದ್ರ ಜಡೇಜಾ ಪತ್ನಿ ರಿವಾಬಾ

ಗುಜರಾತ್ ಫಲಿತಾಂಶ: ಬಿಜೆಪಿ ಟಿಕೆಟ್ ನಿಂದ ಗೆದ್ದ ರವೀಂದ್ರ ಜಡೇಜಾ ಪತ್ನಿ ರಿವಾಬಾ

1

ಕಂಪ್ಲಿ ಕ್ಷೇತ್ರಕ್ಕೆ ಯಾರಿಗೆ ಹೈಕಮಾಂಡ್ ಟಿಕೆಟ್‌ ನೀಡುತ್ತೋ ನೋಡಿ ಬೆಂಬಲ ನೀಡುವೆ: ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ

ಸಿಎಂ ಬೊಮ್ಮಾಯಿ

ಗುಜರಾತ್ ಚುನಾವಣಾ ಫಲಿತಾಂಶವು ಸುಶಾಸನದ ಫಲ: ಸಿಎಂ ಬೊಮ್ಮಾಯಿ

ಹಿಮಾಚಲ ಪ್ರದೇಶದಲ್ಲಿ ಫಲಿತಾಂಶದ ಮುನ್ನವೇ ಆಪರೇಷನ್ ಕಮಲದ ಭೀತಿ

ಹಿಮಾಚಲ ಪ್ರದೇಶದಲ್ಲಿ ಫಲಿತಾಂಶದ ಮುನ್ನವೇ ಆಪರೇಷನ್ ಕಮಲದ ಭೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.