ಕುಂದಾಪುರ ಪುರಸಭೆ: ಖಾರ್ವಿಕೇರಿ ಹಕ್ಕುಪತ್ರಕ್ಕೆ ಬಿಡದ ಗ್ರಹಣ

ಅಂದು ಮೀನುಗಾರಿಕಾ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದರು

Team Udayavani, Mar 28, 2023, 3:48 PM IST

ಕುಂದಾಪುರ ಪುರಸಭೆ: ಖಾರ್ವಿಕೇರಿ ಹಕ್ಕುಪತ್ರಕ್ಕೆ ಬಿಡದ ಗ್ರಹಣ

ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ಖಾರ್ವಿಕೇರಿಯ 150ಕ್ಕೂ ಅಧಿಕ ಮಂದಿಗೆ ನಿವೇಶನವೇ ಇಲ್ಲ. ಈ ಕುರಿತು ಸಾಕಷ್ಟು ಹೋರಾಟಗಳಾಗಿವೆ. ಪುರಸಭೆಗೂ ಬೇಡಿಕೆ ಪಟ್ಟಿ ಮಂಡಿಸಲಾಗಿದೆ. ಆದರೆ ಬೇಡಿಕೆ ಈಡೇರಿಲ್ಲ. ಈ ನಿಟ್ಟಿನಲ್ಲಿ ನಡೆದ ಪ್ರಯತ್ನಗಳನ್ನು ಬೆನ್ನತ್ತುವ ಕಾರ್ಯ ನಡೆಯದ ಹಿನ್ನೆಲೆಯಲ್ಲಿ ಇನ್ನೂ ಹಕ್ಕುಪತ್ರ ದೊರೆಯಲಿಲ್ಲ.

ಪುರಸಭಾ ಖಾರ್ವಿಕೇರಿ ವಾರ್ಡ್‌ ಸದಸ್ಯರಾಗಿದ್ದ ರವಿರಾಜ್‌ ಖಾರ್ವಿ, ಈಗಿನ ಸದಸ್ಯ ಚಂದ್ರಶೇಖರ್‌ ಖಾರ್ವಿ ನಿವೇಶನ ರಹಿತರ ಹೋರಾಟದ ಜತೆಗೆ ಅವರೂ ನೇತೃತ್ವ ವಹಿಸಿ ನಿವೇಶನ ದೊರಕಿಸಿಕೊಡಲು ಪ್ರಯತ್ನಿಸಿದ್ದರು. ಹಿಂದೆ ಮುಖ್ಯಾಧಿಕಾರಿಯಾಗಿದ್ದ ಗೋಪಾಲಕೃಷ್ಣ ಶೆಟ್ಟಿ ಅವರ ಪ್ರಯತ್ನವಿತ್ತು.

ಭರವಸೆ ಇತ್ತು
ಈ ಹಿಂದಿನ ಎಸಿ ಭೂಬಾಲನ್‌ ಅವರು ಖಾರ್ವಿಕೇರಿ ಜನರಿಗೆ ಹಕ್ಕುಪತ್ರ ಕೊಡಿಸಬೇಕೆಂದು ಪ್ರಯತ್ನಿಸಿದ್ದರು. 127 ಮಂದಿ ಅರ್ಜಿ ನೀಡಿದ್ದು ಜಿಲ್ಲಾಧಿಕಾರಿಗೆ ಮುಂದಿನ ಕ್ರಮಕ್ಕೆ ಕಳುಹಿಸಿದ್ದರು. ಅಲ್ಲಿಂದ ಕಡತ ಎಸಿ ಕಚೇರಿಗೆ ಬಂದಿದ್ದು ಎಸಿ ಆಗಿದ್ದ ಕೆ. ರಾಜು ಅವರು ತನಿಖೆ ಮಾಡಿ ವರದಿ ಸಲ್ಲಿಸುವಂತೆ ತಹಶೀಲ್ದಾರ್‌ ಅವರಿಗೆ ರವಾನಿಸಿದ್ದರು.

8-10 ಮಾತ್ರ ಆಕ್ಷೇಪಣೆಗಳು ಬಂದಿದ್ದು ಇತರ ಅರ್ಜಿಗಳಿಗೆ ಸಮಸ್ಯೆಯಿರಲಿಲ್ಲ. ಖುದ್ದು ಕಂದಾಯ ಸಚಿವ ಆರ್‌. ಅಶೋಕ್‌ ಅವರು ಕೂಡ ಅಧಿಕಾರಿಗಳ ಬಳಿ ಈ ಸಮಸ್ಯೆ ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದ್ದರು. 94ಡಿ ಸೌಲಭ್ಯವನ್ನು ಕರಾವಳಿ ಜಿಲ್ಲೆಗೆ ಒದಗಿಸಿಕೊಡಲು ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ಮಾಡಬೇಕಾಗುತ್ತದೆ. 10 ಮನೆಗಳಿಗಿಂತ ಹೆಚ್ಚು ಇರುವ ತಾಂಡಾದಂತಹ ಪ್ರದೇಶ ಈ ಭಾಗದಲ್ಲಿ ಇಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸುತ್ತೇನೆ ಎಂದು ಅಂದು ಮೀನುಗಾರಿಕಾ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದರು. ಈಗ ಎಸಿಯೂ ಬದಲು, ತಹಶೀಲ್ದಾರರೂ ಬದಲು. ಪುರಸಭೆಯಿಂದ ಹೋದ ಪಟ್ಟಿ ಕಂದಾಯ ಇಲಾಖೆಯಲ್ಲಿ ಬಾಕಿಯೇ ಆಗಿದೆ.

94 ಡಿ ಸೌಲಭ್ಯ
ಸಿದ್ದರಾಮಯ್ಯ ನೇತೃತ್ವದ ಸರಕಾರ ಇದ್ದಾಗ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಮಹತ್ವಾಕಾಂಕ್ಷೆಯಿಂದ ಮಾಡಿದ 94 ಡಿ ಸೌಲಭ್ಯ ಕರಾವಳಿಗರ ಪಾಲಿಗೆ ಗಗನಕುಸುಮವಾಗಿದೆ. ಇಲ್ಲಿನ ಖಾರ್ವಿಕೇರಿ ನಿವಾಸಿಗಳು ವರ್ಷಾನುಗಟ್ಟಲೆಯಿಂದ ಹಕ್ಕುಪತ್ರ ವಂಚಿತರಾಗಿದ್ದರೂ ಜನಪ್ರತಿನಿಧಿಗಳಿಂದ, ಅಧಿಕಾರಿಗಳಿಂದ ಸಕಾಲದಲ್ಲಿ ಕೊಡಿಸಲಾಗುತ್ತಿಲ್ಲ.

ಏನಿದು 94 ಡಿ
2017 ಡಿ. 16ರಂದು ಆದೇಶವಾಗಿದ್ದು, ವಾಸಿಸುವವನೇ ಮನೆಯ ಒಡೆಯ ಉದ್ದೇಶದ 1964ರ ಕಲಂ 94 ಕರ್ನಾಟಕ ಭೂ ಕಂದಾಯ ಕಾಯ್ದೆಗೆ 94ಡಿ ತಿದ್ದುಪಡಿ ತರುವ ಮೂಲಕ ಸರಕಾರಿ ಒಡೆತನದ ಜಾಗವನ್ನೂ ಕಂದಾಯ ಗ್ರಾಮರಹಿತ ಜನವಸತಿಗಳಲ್ಲಿ ಹಾಲಿ ವಾಸವಿರುವವರಿಗೆ ಹಸ್ತಾಂತರಿಸಲು ಅವಕಾಶ ಕಲ್ಪಿಸಲಾಗಿದೆ. ಕಂದಾಯ ಗ್ರಾಮವಲ್ಲದ ಅನಧಿಕೃತ ಬಡಾವಣೆಗಳಾದ ಲಂಬಾಣಿ ತಾಂಡಾ, ಗೊಲ್ಲರ ಹಟ್ಟಿ, ವಡ್ಡರಹಟ್ಟಿ, ಕುರುಬರ ಹಟ್ಟಿ, ನಾಯಕರಹಟ್ಟಿ, ಮಜಾರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್‌, ಕಾಲನಿಯಂತಹ ರಾಜ್ಯದ 58 ಸಾವಿರಕ್ಕೂ ಅಧಿಕ ಜನವಸತಿ ಪ್ರದೇಶಗಳ ಮನೆಗಳು ಸರಕಾರಿ ಭೂಮಿಯಾಗಿದ್ದಲ್ಲಿ ಈಗಾಗಲೇ ವಾಸಿಸುತ್ತಿರುವವರಿಗೆ ಷರತ್ತಿಗೆ ಒಳಪಟ್ಟು ವಿತರಿಸಲು, 1979ರ ಪೂರ್ವದಲ್ಲಿ ವಾಸಿಸುತ್ತಿರುವವರ ಮನೆಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಮಂಜೂರಾತಿಯು 4 ಸಾವಿರ ಚ. ಅಡಿ ಮಿತಿಗೆ ಒಳಪಟ್ಟಿದೆ.

ಕರಾವಳಿಗಿಲ್ಲ
ನಿಯಮದಲ್ಲಿ ವಿವರಿಸಿದ ಮಾದರಿಯ ಪಂಗಡ ದ.ಕ., ಉಡುಪಿ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ದೊರೆಯದ ಕಾರಣ ಯಾವುದೇ ಹಕ್ಕುಪತ್ರ ವಿತರಣೆಯಾಗಿಲ್ಲ. ಜನಪ್ರತಿನಿಧಿಗಳು ಖುದ್ದು ಆಸಕ್ತಿ ವಹಿಸಿ ಈ ಕಾಯ್ದೆಯಲ್ಲಿ ಸ್ವಲ್ಪ ತಿದ್ದುಪಡಿಗೆ ಸೂಚಿಸುತ್ತಿದ್ದರೂ ಸಾವಿರಾರು ಮಂದಿಗೆ ಇದು ಪ್ರಯೋಜನಕ್ಕೆ ದೊರೆಯುತ್ತಿತ್ತು. ಕೃಷಿಕೂಲಿ ಕಾರ್ಮಿಕರು, ಮೀನುಗಾರ ಕುಟುಂಬದವರು, ಆದಿವಾಸಿಗಳು ಮೊದಲಾದವರನ್ನು ಸೇರಿಸುತ್ತಿದ್ದರೆ ಇಲ್ಲಿಯೂ ಅರ್ಹರ ಸಂಖ್ಯೆ ಇತ್ತು.

ಪಟ್ಟಿ ಸಿದ್ಧ
2019ರ ಜೂನ್‌ನಲ್ಲಿ ಡಿಸಿ, 2019ರ ಡಿಸೆಂಬರ್‌ ನಲ್ಲಿ ಎಸಿ ಬರೆದ ಪತ್ರದಂತೆ 2022ರ ಅಕ್ಟೋಬರ್‌ನಲ್ಲಿ ತಹಶೀಲ್ದಾರರು ಪುರಸಭೆಯಿಂದ ದಾಖಲೆಗಳಿಲ್ಲದೇ ಮನೆ ನಿರ್ಮಿಸಿದವರ ಪಟ್ಟಿ ಕೇಳಿದ್ದರು. ಪುರಸಭೆ ಯಿಂದ ಖಾರ್ವಿಕೇರಿ, ಮದ್ದುಗುಡ್ಡೆ, ಕೋಡಿ ಪ್ರದೇಶಗಳ 135 ಮನೆಗಳ ಪಟ್ಟಿ ಸಿದ್ಧಪಡಿಸಿ2023 ಜ.16ರಂದು ಕಳುಹಿಸಲಾಗಿದೆ. ಇನ್ನು ಅಧಿಸೂಚನೆ ಹೊರಡಿಸಿ ನಂತರ ಹಕ್ಕುಪತ್ರ ನೀಡುವ ಪ್ರಕ್ರಿಯೆ ನಡೆಯಬೇಕು. ಒಂದು ಕಡೆಯಿಂದ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಹಕ್ಕುಪತ್ರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಆಗುತ್ತಿದ್ದರೆ ಇನ್ನೊಂದು ಕಡೆಯಿಂದ ಉದಾಸೀನ ಮಾಡುವ ಬೆನ್ನತ್ತದ ಜನಪ್ರತಿನಿಧಿ, ಅಧಿಕಾರಿಗಳಿಂದಾಗಿ ಜನರ ಕೆಲಸಗಳು ವಿಳಂಬವಾಗುತ್ತಿವೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಇದನ್ನು ಆದ್ಯತೆ ನೆಲೆಯಲ್ಲಿ ಮಾಡುವಂತೆ ಪುರಸಭೆಗೆ ಸೂಚನೆ ನೀಡಿದ್ದಾರೆ.

ಡಿಸಿಯಿಂದ ಪತ್ರ
ಇಲ್ಲಿನ ಖಾರ್ವಿಕೇರಿಯಲ್ಲಿ ವಾಸಿಸುವವರಿಗೆ ಹಕ್ಕುಪತ್ರ ಇಲ್ಲದಿದ್ದರೂ ಅವರಿಗೆ ಈ ನಿಯಮದಡಿ ಭೂಮಿ ನೀಡಲು ಕಾನೂನಿನ ತೊಡಕಿದೆ. ಪುರಸಭೆ ವ್ಯಾಪ್ತಿಯಲ್ಲಿ 94ಸಿಸಿ ಅಸ್ತಿತ್ವದಲ್ಲಿರುವುದು. 94ಡಿಯಲ್ಲಿ ಮೀನುಗಾರ ಕುಟುಂಬಗಳಿಗೆ ನೀಡಲು ಅವಕಾಶ ಇಲ್ಲ. ತಾಂಡಾ ಪ್ರದೇಶ ಗುರುತಿಸಿ ನೋಟಿಫಿಕೇಶನ್‌ ಮಾಡಿದರಷ್ಟೇ ನಿವೇಶನ ಹಂಚಲು ಸಾಧ್ಯ. ಈ ಬದಲಾವಣೆ ಮಾಡಬೇಕು ಎಂದು ಉಡುಪಿ ಡಿಸಿ ಸರಕಾರಕ್ಕೆ ಪತ್ರ ಬರೆದಿದ್ದರು.

ಪಟ್ಟಿ ಕಳುಹಿಸಲಾಗಿದೆ
ಕಂದಾಯ ಇಲಾಖೆಯಿಂದ ಪಟ್ಟಿ ಕೇಳಲಾಗಿದ್ದು ಖಾರ್ವಿಕೇರಿ, ಮದ್ದುಗುಡ್ಡೆ, ಕೋಡಿ ಪ್ರದೇಶದವರ ಪಟ್ಟಿ ಕಳುಹಿಸಲಾಗಿದೆ. -ವೀಣಾ ಭಾಸ್ಕರ ಮೆಂಡನ್‌
ಅಧ್ಯಕ್ಷೆ, ಪುರಸಭೆ

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-asasa

Doordarshan ಖ್ಯಾತ ಟಿವಿ ನಿರೂಪಕಿ ಗೀತಾಂಜಲಿ ಅಯ್ಯರ್ ವಿಧಿವಶ

rain

ಬಿಪೊರ್ ಜಾಯ್ ಚಂಡಮಾರುತ: ಕರಾವಳಿಯಲ್ಲಿ ಎಚ್ಚರ ವಹಿಸಲು ಸೂಚನೆ

1-wewqew

Manipur ಆಂಬ್ಯುಲೆನ್ಸ್‌ಗೆ ದುಷ್ಕರ್ಮಿಗಳಿಂದ ಬೆಂಕಿ; 8 ವರ್ಷದ ಬಾಲಕ ಸೇರಿ ಮೂವರು ಬಲಿ

1-kabini

Kabini ಹಿನ್ನೀರಲ್ಲಿ 3.5 ಟನ್‌ ತ್ಯಾಜ್ಯ ಸಂಗ್ರಹಿಸಿದ ಅರಣ್ಯ ಸಿಬಂದಿ, ಸ್ವಯಂಸೇವಕರು

1-sadasd

Wrestlers ಪ್ರತಿಭಟನೆ ಜೂನ್ 15 ರವರೆಗೆ ಸ್ಥಗಿತಕ್ಕೆ ಒಪ್ಪಿಗೆ; ಕಾಯುವಂತೆ ಸರ್ಕಾರ ಒತ್ತಾಯ

sunil-kkl

Education ಗುಲಾಮಿ ಚಿಂತನೆಯನ್ನು ತುರುಕುತ್ತೀರಾ?:ಸಿಎಂ ಸಿದ್ದರಾಮಯ್ಯರಿಗೆ ಸುನಿಲ್ ಪ್ರಶ್ನೆ

BJP Symbol

2024 Election; ಬಿಜೆಪಿಯ ಎನ್‌ಡಿಎ ವಿಸ್ತರಣೆ ಅಜೆಂಡಾ ಕಾರ್ಯಗತವಾಗಬಹುದೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura: ವಾರದಿಂದ ಕುಡಿಯಲು ಉಪ್ಪುನೀರು

Kundapura: ವಾರದಿಂದ ಕುಡಿಯಲು ಉಪ್ಪುನೀರು

ಕೋಡಿ ಕಡಲತೀರದಲ್ಲಿ ಜಿಡ್ಡಿನ ಚೆಂಡುಗಳು!

ಕೋಡಿ ಕಡಲತೀರದಲ್ಲಿ ಜಿಡ್ಡಿನ ಚೆಂಡುಗಳು!

Forest Department; 2.43 ಲಕ್ಷ ಸಸಿಗಳ ವಿತರಣೆ ಗುರಿ

Forest Department; 2.43 ಲಕ್ಷ ಸಸಿಗಳ ವಿತರಣೆ ಗುರಿ

shಕೃಷಿ ಸಖಿಯರಿಂದ ಹಡಿಲು ಭೂಮಿ ಹಸನು: ಉಡುಪಿ ಜಿಲ್ಲೆಯಲ್ಲಿ ಆರಂಭವಾಗಿದೆ ರಾಜ್ಯದ ಮೊದಲ ಪ್ರಯೋಗ

ಕೃಷಿ ಸಖಿಯರಿಂದ ಹಡಿಲು ಭೂಮಿ ಹಸನು: ಉಡುಪಿ ಜಿಲ್ಲೆಯಲ್ಲಿ ಆರಂಭವಾಗಿದೆ ರಾಜ್ಯದ ಮೊದಲ ಪ್ರಯೋಗ

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

1-scrain

ಕುಳಗೇರಿ ಕ್ರಾಸ್: ಕ್ರೇನ್ ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು

1-asasa

Doordarshan ಖ್ಯಾತ ಟಿವಿ ನಿರೂಪಕಿ ಗೀತಾಂಜಲಿ ಅಯ್ಯರ್ ವಿಧಿವಶ

rain

ಬಿಪೊರ್ ಜಾಯ್ ಚಂಡಮಾರುತ: ಕರಾವಳಿಯಲ್ಲಿ ಎಚ್ಚರ ವಹಿಸಲು ಸೂಚನೆ

1-wewqew

Manipur ಆಂಬ್ಯುಲೆನ್ಸ್‌ಗೆ ದುಷ್ಕರ್ಮಿಗಳಿಂದ ಬೆಂಕಿ; 8 ವರ್ಷದ ಬಾಲಕ ಸೇರಿ ಮೂವರು ಬಲಿ

1——–asasdasd

Gangavathi ನಗರಸಭೆ ಸಾಮಾನ್ಯಸಭೆ: ಶಾಸಕ ರೆಡ್ಡಿ ಅವರಿಂದ ಅಧಿಕಾರಿಗಳ ತರಾಟೆ