ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲ: ಜ. 14ರಿಂದ 16: ಮಕರ ಸಂಕ್ರಮಣ ಉತ್ಸವ
Team Udayavani, Jan 13, 2023, 5:50 AM IST
ವಂಡ್ಸೆ: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದಲ್ಲಿ ಜ. 14ರಿಂದ ಜ. 16ರ ವರೆಗೆ ಮಕರ ಸಂಕ್ರಮಣ ಉತ್ಸವ ನಡೆಯಲಿದೆ.
ಜ. 14ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಹಾಮಂಗಳಾರತಿ, ರಾತ್ರಿ 10.30ಕ್ಕೆ ಕೆಂಡಸೇವೆ ನಡೆಯಲಿದೆ. ಜ. 15 ಹಾಗೂ 16ರಂದು ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿಯ ಅನಂತರ ಮಂಡಲ ಸೇವೆ ನಡೆಯಲಿದೆ. ರಾತ್ರಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮೇಳದವರಿಂದ ಯಕ್ಷಗಾನ ಸೇವೆ ಆಟ ಜರಗಲಿದೆ.
ಜ. 17ರಂದು ಬೆಳಗ್ಗೆ 9 ಗಂಟೆಗೆ ಸಂಪ್ರೋಕ್ಷಣೆ ನಡೆಯಲಿದೆ ಎಂದು ಆನುವಂಶೀಯ ಆಡಳಿಯ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ ಅವರು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.