ಜ. 14ರಿಂದ ಮಾರಣಕಟ್ಟೆ – ಹಾಲಾಡಿ ಬಸ್‌ ಆರಂಭ ; ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ

ಸಂಜೆ ಹಾಲಾಡಿಯಿಂದ ಶಂಕರನಾರಾಯಣ ಮೂಲಕ ಮಾರಣಕಟ್ಟೆಯವರೆಗೆ ಸಂಚರಿಸಲಿದೆ.

Team Udayavani, Jan 14, 2023, 11:10 AM IST

ಜ. 14ರಿಂದ ಮಾರಣಕಟ್ಟೆ – ಹಾಲಾಡಿ ಬಸ್‌ ಆರಂಭ ; ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ

ಕುಂದಾಪುರ: ಮಾರಣಕಟ್ಟೆ ಕಡೆಯಿಂದ ಶಂಕರನಾರಾಯಣ ಕಾಲೇಜಿಗೆ ಹೋಗುವ ಮಕ್ಕಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಬಹು ಬೇಡಿಕೆಯ ಮಾರಣಕಟ್ಟೆ – ಹಾಲಾಡಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಜ. 14ರಂದು ಆರಂಭ ಗೊಳ್ಳಲಿದೆ. ಇದರಿಂದ ಈ ಭಾಗದ ನೂರಾರು ಮಂದಿ ಶಾಲಾ – ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಮಾರಣಕಟ್ಟೆ ಹಾಗೂ ಸುತ್ತಮುತ್ತಲಿನ ಊರಿನ ನೂರಾರು ವಿದ್ಯಾರ್ಥಿಗಳು ಶಂಕರನಾರಾಯಣ ಕಾಲೇಜಿಗೆ ತೆರಳಲು ಬಸ್‌ ಇಲ್ಲದೆ ಸಮಸ್ಯೆ ಅನುಭವಿಸುತ್ತಿರುವ ಕುರಿತು ಶಾಸಕ ಸುಕುಮಾರ್‌ ಶೆಟ್ಟರಲ್ಲಿ ಬಸ್‌ಆರಂಭಿಸಲು ಆಗ್ರಹಿಸಿದ್ದರು. ಈ ಕುರಿತಂತೆ ಕಾರ್ಯಪ್ರವೃತ್ತರಾದ ಶಾಸಕರು, ಕೆಎಸ್‌ಆರ್‌ಟಿಸಿ ಡಿಸಿ, ಪ್ರಾದೇಶಿಕ ಸಾರಿಗೆ ಆಯುಕ್ತ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತುರ್ತಾಗಿ ಬಸ್‌ ಆರಂಭಿಸಲು ಸೂಚಿಸಿದರು. ಅದರಂತೆ ಜ. 14ರಿಂದ ಮಾರಣಕಟ್ಟೆ- ಶಂಕರ ನಾರಾಯಣ – ಹಾಲಾಡಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಗೊಳ್ಳಲಿದ್ದು ದಿನ ಗಳಲ್ಲಿ 4 ಟ್ರಿಪ್‌ ಗಳಲ್ಲಿ ಬಸ್‌ ಸಂಚರಿಸಲಿದೆ.

ಮಾರ್ಗ ಯಾವುದು?
ಮಾರಣಕಟ್ಟೆಯಿಂದ ಬೆಳಗ್ಗೆ 8ಕ್ಕೆ ಬಸ್‌ ಹೊರಟು, ವಂಡ್ಸೆ, ನೆಂಪು, ನೇರಳಕಟ್ಟೆ, ಅಂಪಾರು, ಕ್ರೋಢಬೈಲೂರು, ಶಂಕರನಾರಾಯಣ ಆಗಿ ಹಾಲಾಡಿಯವರೆಗೆ ಸಂಚರಿಸಲಿದೆ. ಮಧ್ಯದ ಅವಧಿಯಲ್ಲಿ ಒಂದೆರಡು ಟ್ರಿಪ್‌ ಹಾಗೆಯೇ ಸಂಜೆ ಹಾಲಾಡಿಯಿಂದ ಶಂಕರನಾರಾಯಣ ಮೂಲಕ ಮಾರಣಕಟ್ಟೆಯವರೆಗೆ ಸಂಚರಿಸಲಿದೆ. ಇದರಿಂದ ಕ್ರೋಢ ಬೈಲೂರಿನ ಮಕ್ಕಳು, ಸಾರ್ವಜನಿಕರಿಗೂ ಅನುಕೂಲವಾದಂತಾಗಿದೆ.

ಇಲ್ಲಿಗೆ ಯಾವುದೇ ಬಸ್‌ ಸಂಚಾರವಿರಲಿಲ್ಲ. ಇದರಿಂದ ಶಂಕರ ನಾರಾಯಣ ಪ್ರಥಮ ದರ್ಜೆ ಕಾಲೇಜಿಗೆ ಹೋಗುವ 170 ಮಂದಿ ಮಕ್ಕಳು, ಮದರ್‌ ಥೆರೆಸಾ ಶಿಕ್ಷಣ ಸಂಸ್ಥೆಗೆ ತೆರಳುವ 90 ಮಂದಿ ಮಕ್ಕಳು, ಇನ್ನುಳಿದ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ಮಕ್ಕಳಿಗೂ ಅನುಕೂಲವಾಗಲಿದೆ. ಕೆಲವರು ನಿಗದಿತ ಸಮಯಕ್ಕೆ ಬಸ್‌ ಇಲ್ಲದೆ ಕುಂದಾಪುರಕ್ಕೆ ಹೋಗಿ ಶಂಕರನಾರಾಯಣಕ್ಕೆ, ಮತ್ತೆ ಕೆಲವರು ಸಿದ್ದಾಪುರಕ್ಕೆ ತೆರಳಿ ಶಂಕರನಾರಾಯಣಕ್ಕೆ ಸುತ್ತು ಬಳಸಿ ಬರುತ್ತಿದ್ದರು.

ಸುದಿನ ವರದಿ
ಕುಂದಾಪುರದ ಗ್ರಾಮೀಣ ಭಾಗದ ವಿವಿಧೆಡೆಗಳಿಗೆ ಬಸ್‌ ಸಂಪರ್ಕ ಇಲ್ಲದಿರುವುದ ರಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ತೊಂದರೆ ಬಗ್ಗೆ, ವಂಡ್ಸೆ – ನೆಂಪು – ನೇರಳಕಟ್ಟೆ – ಅಂಪಾರು – ಶಂಕರನಾರಾಯಣ ಮಾರ್ಗದಲ್ಲಿ ಬಸ್‌ ಆರಂಭಿಸುವಂತೆ “ಉದಯವಾಣಿ ಸುದಿನ’ವು ನಿರಂತರ ವರದಿ ಪ್ರಕಟಿಸಿತ್ತು.

ಶೀಘ್ರ ಆರಂಭ
ನೂರಾರು ಮಂದಿ ಮಕ್ಕಳು ನನ್ನಲ್ಲಿಗೆ ಬಂದು ಮನವಿ ಸಲ್ಲಿಸಿ, ಅವರ ಸಮಸ್ಯೆ ಹೇಳಿಕೊಂಡಿದ್ದು, ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಅಗುತ್ತಿದ್ದುದನ್ನು ಮನಗಂಡು, ತತ್‌ ಕ್ಷಣ ಅಧಿಕಾರಿಗಳ ಸಭೆ ಕರೆದು, ಕೂಡಲೇ ಬಸ್‌ ಆರಂಭಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದೆ. ಜ. 14ರಂದು ಬಸ್‌ ಸಂಚಾರ ಆರಂಭವಾಗಲಿದೆ. ಶಂಕರನಾರಾಯಣ ಕಾಲೇಜಿಗೆ ಹೋಗುವ ಮಕ್ಕಳಿಗೆ ಇದು ಅನುಕೂಲ ಆಗಲಿದೆ.
-ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

ಟಾಪ್ ನ್ಯೂಸ್

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್‌ನಿಂದ ಸುಳ್ಳಿನ ರಾಜಕಾರಣ: BYR

LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್‌ನಿಂದ ಸುಳ್ಳಿನ ರಾಜಕಾರಣ: BYR

13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!

Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!

Kota; 1 ಕೋಟಿ ರೂ. ಮೌಲ್ಯದ 1.2 ಕೆಜಿ ಚಿನ್ನ ವಶ: ಚಿತ್ರ ನಿರ್ಮಾಪಕನ ಮನೆಯಿಂದ ಕದ್ದಾತ ಸೆರೆ

Kota; 1 ಕೋಟಿ ರೂ. ಮೌಲ್ಯದ 1.2 ಕೆಜಿ ಚಿನ್ನ ವಶ: ಚಿತ್ರ ನಿರ್ಮಾಪಕನ ಮನೆಯಿಂದ ಕದ್ದಾತ ಸೆರೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.