
Maranakatte ಶ್ರೀ ಬ್ರಹ್ಮಲಿಂಗೇಶ್ವರ ದೇಗುಲ: ಯಕ್ಷಗಾನ ಮೇಳಗಳ ಪ್ರಥಮ ಸೇವೆ ಆಟ
Team Udayavani, Nov 21, 2023, 1:08 AM IST

ವಂಡ್ಸೆ: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದ ಮೂರು ಮೇಳಗಳ ದೇವರ ಪ್ರಥಮ ಸೇವೆ ಆಟ ನ. 19ರಂದು ದೇಗುಲದ ಆವರಣದಲ್ಲಿ ನಡೆಯಿತು.
ಅರ್ಚಕ ವಿಘ್ನೇಶ್ವರ ಮಂಜ ಅವರ ನೇತೃತ್ವದಲ್ಲಿ ನಡೆದ ಗಣಪತಿ ಪೂಜೆಯಲ್ಲಿ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ, ಸಿ. ರಘುರಾಮ ಶೆಟ್ಟಿ, ಸಿ. ಸುರೇಂದ್ರ ಶೆಟ್ಟಿ, ಸಿ. ಮಂಜಯ್ಯ ಶೆಟ್ಟಿ, ಸಿ. ಶಂಕರ ಶೆಟ್ಟಿ, ಸಿ. ದಿವಾಕರ ಶೆಟ್ಟಿ, ಸಿ. ಆದರ್ಶ ಶೆಟ್ಟಿ, ಗೋರ್ವಧನ ಶೆಟ್ಟಿ, ಕೊಲ್ಲೂರು ದೇಗುಲದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ಚಿತ್ತೂರು ಗ್ರಾ. ಪಂ.ಅಧ್ಯಕ್ಷ ರವಿರಾಜ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ಸಮ್ಮಾನ: ಈ ವೇಳೆ ಜಿಲ್ಲಾ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಉಪ್ಪುಂದ ನಾಗೇಂದ್ರ ರಾವ್ ಅವರನ್ನು ದೇಗುಲದ ವತಿಯಿಂದ ಸಮ್ಮಾನಿಸಲಾಯಿತು.
ಟಾಪ್ ನ್ಯೂಸ್
