ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಖಾಯಂ ವೈದ್ಯರಿಲ್ಲ

ಮರವಂತೆ: ನದಿ-ಸಮುದ್ರ ದಂಡೆಯ ಊರಿಗೆ ಬೇಕು ಹಲವು ಮೂಲಸೌಕರ್ಯ

Team Udayavani, Jul 11, 2022, 11:08 AM IST

2

ಮರವಂತೆ: ವಿಶ್ವ ಪ್ರಸಿದ್ಧ ಕಡಲ ಕಿನಾರೆ, ಮೀನುಗಾರಿಕಾ ಬಂದರು, ಕೃಷಿ ಹಾಗೂ ಮೀನುಗಾರಿಕೆಯನ್ನು ಸಮಾನವಾಗಿ ನೆಚ್ಚಿಕೊಂಡಿರುವ, ನಿರಂತರ 3 ಬಾರಿ “ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಪಾತ್ರವಾಗಿದೆ ಮರವಂತೆ ಗ್ರಾಮ.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲ, ಸರ್ವಿಸ್‌ ರಸ್ತೆ, ಮರವಂತೆ ಬೀಚ್‌ನಲ್ಲಿ ಪ್ರವಾಸಿಗರಿಂದ ಕಸ ಎಸೆಯುವುದು, ಅರೆಬರೆ ಬಂದರು ಕಾಮಗಾರಿ, ಬ್ರೇಕ್‌ ವಾಟರ್‌ ಕಾಮಗಾರಿ ಇವೆಲ್ಲ ಗ್ರಾಮದ ಪ್ರಮುಖ ಸಮಸ್ಯೆಗಳು.

ಮರವಂತೆಯ ಸದ್ಯದ ಪ್ರಮುಖ ಸಮಸ್ಯೆಯೆಂದರೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರೇ ಇಲ್ಲ. ಇದರಿಂದ ಇಲ್ಲಿಗೆ ಬರುವ ರೋಗಿಗಳಿಗೆ ಸಮಸ್ಯೆಯಾಗಿದೆ. ಪ್ರಭಾರ ನೆಲೆಯಲ್ಲಿ ದಿನಕ್ಕೊಬ್ಬರನ್ನು ಇಲ್ಲಿಗೆ ನಿಯೋಜಿಸಲಾಗುತ್ತಿದೆ. ಅವರು ಬಂದರೆ ಬಂದ್ರು, ಇಲ್ಲದಿದ್ದರೆ ಇಲ್ಲ ಅನ್ನುವ ಪರಿಸ್ಥಿತಿ.

ಈ ಪ್ರಾಥಮಿಕ ಕೇಂದ್ರವು ಮರವಂತೆಯೊಂದಿಗೆ ನಾವುಂದ, ತ್ರಾಸಿ, ಗುಜ್ಜಾಡಿ ಹಾಗೂ ಹೊಸಾಡು ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದೆ. ನಿತ್ಯ ನೂರಾರು ಮಂದಿ ಇಲ್ಲಿಗೆ ತಪಾಸಣೆ, ಔಷಧಕ್ಕಾಗಿ ಬರುತ್ತಾರೆ. ಅದರಲ್ಲೂ ಈಗ ಮಳೆಗಾಲ ಆರಂಭವಾಗಿರುವುದರಿಂದ ಜ್ವರ, ಶೀತ, ಕೆಮ್ಮು, ಡೆಂಗ್ಯೂ ಮತ್ತಿತರ ಕಾಯಿಲೆಗಳಿಗೆ ವೈದ್ಯರ ತಪಾಸಣೆ ಅಗತ್ಯವಾಗಿದೆ. ಖಾಯಂ ವೈದ್ಯರ ನೇಮಿಸಿ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ಕಡಲ್ಕೊರೆತ ಭೀತಿ

ಮರವಂತೆ ಗ್ರಾಮದ ಕಡಲ ತೀರದ ನಿವಾಸಿಗಳಿಗೆ ಮಳೆಗಾಲ ಬಂತೆಂದರೆ ಸಾಕು ಭಯ ಆವರಿಸುತ್ತದೆ. ಪ್ರತೀ ವರ್ಷದ ಮಳೆಗಾಲದಲ್ಲಿ ಕಡಲ್ಕೊರೆತ ಭೀತಿಯಿರುತ್ತದೆ. ಕಳೆದ ವರ್ಷದ ತೌಖ್ತೆ ಚಂಡಮಾರುತದ ವೇಳೆಯೂ ಸಾಕಷ್ಟು ಹಾನಿಯಾಗಿತ್ತು. ಈಗಲೂ ಸುಮಾರು 200ರಷ್ಟು ಮನೆಗಳಿಗೆ ಕಡಲ್ಕೊರೆತ ಭೀತಿಯಿದೆ. ಇಲ್ಲಿ ಸುಮಾರು 1 ಕಿ.ಮೀ. ನಷ್ಟು ದೂರದವರೆಗೆ ಬೀಚ್‌ ಬದಿ “ಟಿ’ ಆಕಾರದ ತಡೆಗೋಡೆ ನಿರ್ಮಿಸಲಿ ಎನ್ನುವುದು ಇಲ್ಲಿನ ಜನರ ಬೇಡಿಕೆ.

ಹೆದ್ದಾರಿ ಅವ್ಯವಸ್ಥೆ

ಮರವಂತೆಯಲ್ಲಿ ಹಾದು ಹೋಗುವ ಹೆದ್ದಾರಿಯನ್ನು ಪ್ರವಾಸಿ ಸ್ನೇಹಿಯಾಗಿಸುವಲ್ಲಿ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಈ ಬಗ್ಗೆ ಸಂಸದರು, ಶಾಸಕರು ಮುಂದಾಗಿದ್ದು, ಅದಿನ್ನೂ ಆರಂಭಿಕ ಹಂತದಲ್ಲಿದೆ. ಸರ್ವಿಸ್‌ ರಸ್ತೆಯೂ ಆಗಿಲ್ಲ. ಬಸ್‌ ನಿಲ್ದಾಣವೂ ನಿರ್ಮಾಣವಾಗಿಲ್ಲ. ಮಾರಸ್ವಾಮಿ ದೇವಸ್ಥಾನದ ಬಳಿಯ ಸೇತುವೆಗೆ ಹೆದ್ದಾರಿಯಿಂದ ಸಂಪರ್ಕ ರಸ್ತೆ ನಿರ್ಮಾಣವಾಗದೆ ನಿತ್ಯ ನೂರಾರು ಮಂದಿ ಸಮಸ್ಯೆ ಅನುಭವಿಸುವಂತಾಗಿದೆ.

ಇನ್ನಿತರ ಸಮಸ್ಯೆಗಳು

ಮರವಂತೆ ಗ್ರಾಮದಲ್ಲಿ 5,263 ಗ್ರಾಮಸ್ಥರಿದ್ದು, 1,163 ಮನೆಗಳಿವೆ. ಗ್ರಾಮದ ಶೇ. 50ರಷ್ಟು ಕೃಷಿಕರು, ಶೇ. 35ರಷ್ಟು ಮೀನುಗಾರರಿದ್ದಾರೆ. ಮರವಂತೆಯು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದರೂ, ಪ್ರವಾಸೋದ್ಯಮದ ನೆಲೆಯಲ್ಲಿ ಸಮರ್ಪಕ ಬಳಕೆಯಾಗುತ್ತಿಲ್ಲ. ಪ್ರವಾಸಿಗರು ಬೀಚ್‌ನಲ್ಲಿ ಕಸ ಎಸೆಯುತ್ತಿದ್ದರೂ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ದೊಡ್ಡ ತೋಡುಗಳ ನಿರ್ವಹಣೆ ಸರಿಯಿಲ್ಲದೆ ಕೃಷಿಗೆ ನೆರೆ ಹಾವಳಿ ಸಮಸ್ಯೆಯಿದೆ. ಗ್ರಾಮೀಣ ರಸ್ತೆಗಳ ಪಾಡಂತೂ ಹೇಳತೀರದಾಗಿದೆ. ಹೊರಬಂದರು ಕಾಮಗಾರಿ ಅರೆಬರೆಯಾಗಿದ್ದು, ಮೀನುಗಾರಿಕೆಗೆ ತೊಡಕಾಗಿದೆ.

ಮರವಂತೆಯ ವಿಶೇಷತೆ

ಶ್ರೀ ವಿಷ್ಣು, ಶ್ರೀ ವರಾಹ ಮತ್ತು ಶ್ರೀ ನರಸಿಂಹ ಈ ಮೂರು ಮೂರ್ತಿಗಳು ಒಂದೇ ಗರ್ಭಗುಡಿಯಲ್ಲಿರುವುದು ಮರವಂತೆಯ ಮಹಾರಾಜಸ್ವಾಮಿ ಶ್ರೀ ವರಾಹ ದೇವಸ್ಥಾನದ ವೈಶಿಷ್ಟ್ಯ. ಕ್ಷಾತ್ರ ವಂಶಸ್ಥನಾದ ಅರಸನೊಬ್ಬ ತನ್ನ ವಿಚಾರ ಹೀನತನದಿಂದ ಪುತ್ರ ಹತ್ಯೆಯ ಪಾಪಕ್ಕೊಳಗಾಗಿ ಅದರ ಪ್ರಾಯಶ್ಚಿತ್ತಕ್ಕಾಗಿ ಈ ದೇಗುಲ ಸ್ಥಾಪಿಸಿದ ಎನ್ನುವ ಹಿನ್ನೆಲೆಯಿದೆ. ಮರವಂತೆ ಪ್ರದೇಶವು ಅರಬಿ ಸಮುದ್ರ ಮತ್ತು ಸೌಪರ್ಣಿಕಾ ನದಿಗಳ ನಡುವಿನ ಕಿರಿದಾದ ಭೂಭಾಗ. ದೇಗುಲ ನದಿಯ ದಂಡೆಯಲ್ಲಿದ್ದರೆ, ಅಲ್ಲಿಂದ ಸಮುದ್ರಕ್ಕಿರುವ ಅಂತರ ಕೇವಲ 150 ಮೀ. ಸಮುದ್ರ ಮತ್ತು ನದಿಗಳ ನಡುವೆ ರಾಷ್ಟ್ರೀಯ ಹೆದ್ದಾರಿ ಸಾಗುತ್ತದೆ.

ತುಂಬಾ ಸಮಸ್ಯೆಯಾಗುತ್ತಿದೆ: ಮಮರವಂತೆಯಲ್ಲಿ ಖಾಯಂ ವೈದ್ಯರಿಲ್ಲದೆ ತುಂಬಾ ಸಮಸ್ಯೆಯಾಗುತ್ತಿದೆ. ಬೀಚ್‌ನಲ್ಲಿ ಕಸ ಎಸೆಯುವವರ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಹೆದ್ದಾರಿ ಅವ್ಯವಸ್ಥೆಗಳನ್ನು ಆದಷ್ಟು ಸರಿಪಡಿಸಲಿ. ಮಾರಸ್ವಾಮಿ ದೇಗುಲ ಸಮೀಪ ರಸ್ತೆ ಸರಿಯಿಲ್ಲದೆ, ಅನೇಕ ಅವಘಡಗಳಾಗಿವೆ. ಈಗಲಾದರೂ ಸಮರ್ಪಕ ರಸ್ತೆ ನಿರ್ಮಾಣವಾಗಲಿ. –ಕರುಣಾಕರ್‌ ಆಚಾರ್ಯ, ಮರವಂತೆ

ಮನವಿ ಮಾಡಲಾಗಿದೆ: ಖಾಯಂ ವೈದ್ಯರ ನೇಮಕ ಕುರಿತಂತೆ ಈಗಾಗಲೇ ಸಂಬಂಧಪಟ್ಟ ಆರೋಗ್ಯ ಇಲಾಖೆಯ ಮೇಲಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಮಾರಸ್ವಾಮಿ ದೇಗುಲದ ಬಳಿಯ ರಸ್ತೆ ಸಂಪರ್ಕಿಸುವ ಜಾಗದ ತಕರರಾರು ಈಗ ಇತ್ಯರ್ಥಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆಗಲಿದೆ. ಬ್ರೇಕ್‌ ವಾಟರ್‌ ಬೇಡಿಕೆ ಬಗ್ಗೆ ಶಾಸಕರು, ಸಂಸದರು, ಸಚಿವರಿಗೆ ಮನವಿ ಮಾಡಿದ್ದೇವೆ. –ಲೋಕೇಶ್‌ ಖಾರ್ವಿ, ಮರವಂತೆ ಗ್ರಾ.ಪಂ. ಉಪಾಧ್ಯಕ್ಷರು

– ಪ್ರಶಾಂತ್‌ ಪಾದೆ

 

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.