
ಗಂಗೊಳ್ಳಿ: ತೆಂಗಿನ ಮರಕ್ಕೆ ರಿಕ್ಷಾ ಢಿಕ್ಕಿ; ಸಾವು
Team Udayavani, May 30, 2023, 12:36 AM IST

ಗಂಗೊಳ್ಳಿ: ಆಟೋ ರಿಕ್ಷಾ ತೆಂಗಿನ ಮರಕ್ಕೆ ಢಿಕ್ಕಿಯಾಗಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಕುಂದಾಪುರದ ನಿವಾಸಿ ಭಾಸ್ಕರ (33) ಅವರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಮೇ 28ರಂದು ರಾತ್ರಿ 9.45ರ ಸುಮಾರಿಗೆ ತ್ರಾಸಿ- ಮೊವಾಡಿ ರಸ್ತೆಯಲ್ಲಿ ಸಂಭವಿಸಿದೆ.
ಗುರುರಾಜ ಪೂಜಾರಿ ರಿಕ್ಷಾ ಚಾಲಕರಾಗಿದ್ದು, ವೇಗವಾಗಿ ಬಂದು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ತೆಂಗಿನ ಮರಕ್ಕೆ ಢಿಕ್ಕಿಯಾಗಿದೆ. ರಿಕ್ಷಾದಲ್ಲಿ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಭಾಸ್ಕರ ಅವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯರಾದ ಆಲ್ಟನ್, ಶಬರೀಶ ದೇವಾಡಿಗ, ವಿವೇಕಾನಂದ ಪೂಜಾರಿ ಅವರು ಉಪಚರಿಸಿ, ಆ್ಯಂಬುಲೆನ್ಸ್‌ನಲ್ಲಿ ಕುಂದಾಪುರದ ಆಸ್ಪತ್ರೆಗೆ ಕರೆತಂದಿದ್ದಾರೆ.
ಆದರೆ ಅಷ್ಟರಲ್ಲಿ ಸಾವನ್ನಪ್ಪಿರು ವುದಾಗಿ ವೈದ್ಯರು ತಿಳಿಸಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್

Women’s Hockey : ಸಂಗೀತಾ ಹ್ಯಾಟ್ರಿಕ್; ಸಿಂಗಾಪುರ ವಿರುದ್ಧ 13-0 ಗೆಲುವು

Karnataka: ಬರ ನಿರ್ವಹಣೆ: ಕೇಂದ್ರ, ರಾಜ್ಯ ಸರಕಾರಗಳು ಕಾರ್ಯೋನ್ಮುಖವಾಗಲಿ

Assam-Meghalaya: ಗಡಿ ಸಂಘರ್ಷ ಬಿಲ್ಲು-ಬಾಣದ ದಾಳಿ, ವ್ಯಕ್ತಿಗೆ ಗಾಯ

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ