
ಕಾರವಾರ-ಬೆಂಗಳೂರು ರೈಲನ್ನು ನಿಲ್ಲಿಸಿದ ಇಲಿ! ಪ್ರಯಾಣಿಕರಲ್ಲಿ ಆತಂಕ
Team Udayavani, Nov 16, 2022, 7:25 AM IST

ಬೈಂದೂರು: ಕಾರವಾರದಿಂದ ಬೆಂಗಳೂರಿಗೆ ತೆರಳುವ ರೈಲಿನಲ್ಲಿ ನಡುರಾತ್ರಿಯಲ್ಲಿ ಸೈರನ್ ಮೊಳಗಿ ಪ್ರಯಾಣಿಕರು ಆತಂಕಕ್ಕೊಳಗಾದ ಘಟನೆ ಹಾಸನ ಜಂಕ್ಷನ್ ಬಳಿ ಸಂಭವಿಸಿದೆ.
ಬೆಂಗಳೂರಿಗೆ ತೆರಳುವ ರೈಲು ರಾತ್ರಿ ಒಂದು ಗಂಟೆಗೆ ಹಾಸನದ ಬಳಿ ಸಾಗುತ್ತಿದ್ದಾಗ ಬಿ1 ಬೋಗಿಯಲ್ಲಿ ಬೆಂಕಿ ಎಚ್ಚರಿಕೆಯ ಸೈರನ್ ಮೊಳಗ ತೊಡಗಿತು. ಅಪಾಯದ ಸೂಚನೆ ಘೋಷಣೆ ಆದ ಕಾರಣ ನಿದ್ರೆಯಲ್ಲಿದ್ದ ಪ್ರಯಾಣಿಕರು ಒಮ್ಮೆಲೇ ಆತಂಕದಿಂದ ಬಾಗಿಲ ಬಳಿ ಜಮಾಯಿಸಿದರು.
ತಾಂತ್ರಿಕ ಸಿಬಂದಿ ಪರಿಶೀಲಿಸಿದಾಗ ವಿದ್ಯುತ್ ಬೋರ್ಡ್ ಒಳಗಡೆ ಇಲಿ ನುಸುಳಿ ಅವಾಂತರ ಸೃಷ್ಟಿಸಿರುವುದು ಗೊತ್ತಾಯಿತು. ಹಾಸನದಲ್ಲಿ ರೈಲನ್ನು ನಿಲ್ಲಿಸಿ ದುರಸ್ತಿ ಮಾಡಲಾಯಿತು. ತಾಂತ್ರಿಕ ಸಿಬಂದಿ ಇಲಿಯನ್ನು ಹೊರತೆಗೆದ ಬಳಿಕ ಪ್ರಯಾಣಿಕರಿಗೆ ಹೋದ ಜೀವ ಬಂದಂತಾಯಿತು. ಒಟ್ಟಾರೆ ಇಲಿಯೊಂದರ ಅವಾಂತರ ಪ್ರಯಾಣಿಕರಲ್ಲಿ ಜೀವಭಯ ಮೂಡಿಸಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಕಲಬುರಗಿ ಗ್ರಾಮೀಣ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ

ಬೈಂದೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಮುನಿಯಾಲು ಉದಯಕುಮಾರ್ ಶೆಟ್ಟಿ ಹೆಸರು ಪ್ರಸ್ತಾಪ

ಜೈಲು ಶಿಕ್ಷೆ ವಿರುದ್ಧ ರಾಹುಲ್ ಗಾಂಧಿ ನಾಳೆ ಸೂರತ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ

ಉತ್ತರಾಖಂಡದಲ್ಲಿ ಕಂದಕಕ್ಕೆ ಬಿದ್ದ 22 ಪ್ರಯಾಣಿಕರಿದ್ದ ಬಸ್