
ಉಪ್ಪುಂದ: 3-4 ದಿನದ ಗಂಡು ಕರುಗಳನ್ನು ಬಿಟ್ಟು ಹೋದ ಅಪರಿಚಿತರು… ಆಹಾರ ಇಲ್ಲದೆ ಕರು ಸಾವು
Team Udayavani, Jun 1, 2023, 6:37 AM IST

ಉಪ್ಪುಂದ: ಹೇರೂರು ಗ್ರಾಮದ ಯರುಕೋಣೆ ಸಮೀಪದ ಆಲ್ ಗೆದ್ದಕೇರಿಯಲ್ಲಿ ಮೇ 31ರಂದು 3-4 ದಿನಗಳ ಗಂಡು ಕರುಗಳನ್ನು ಬಿಟ್ಟು ಘಟನೆ ನಡೆದಿದೆ.
ಹೈಬ್ರಿಡ್ ಜಾನುವಾರುಗಳಿಗೆ ಹುಟ್ಟಿದ 3-4 ದಿನಗಳ ಸುಮಾರು 10-12 ಗಂಡು ಕರುಗಳನ್ನು ಅಪರಿಚಿತರು ವಾಹನದಲ್ಲಿ ತಂದು ಆಲ್ ಗೆದ್ದಕೇರಿಯ ಕಲ್ಲುಪಾರಿಗಳ ಮಧ್ಯೆ ಬಿಟ್ಟು ಹೋಗಿದ್ದಾರೆ.
ಸ್ಥಳೀಯ ನಿವಾಸಿ ಶಿಕ್ಷಕ ಜಯಪ್ರಕಾಶ ಶೆಟ್ಟಿ ಅವರು ಶಾಲೆಯಿಂದ ಮನೆಗೆ ಬರುವ ಸಮಯ ಕರುಗಳ ಕೂಗಾಟ ಕೇಳಿಸಿದ್ದು ಹತ್ತಿರ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.
ಒಂದು ಕರು ನೀರು ಆಹಾರ ಇಲ್ಲದೆ ಹಸಿವಿನಿಂದ ಸತ್ತು ಹೋಗಿದೆ. ಕೆಲವು ಕರುಗಳು ಹಸಿವಿನಿಂದ ನಿತ್ರಾಣ ಗೊಂಡಿದ್ದು ಸ್ಥಳೀಯರು ನೀರು ಕುಡಿಸಿ, ಹುಲ್ಲು ನೀಡಿ ಉಪಚರಿಸಿದರು.
10-12 ಕರುಗಳನ್ನು ಬಿಟ್ಟು ಹೋಗಿರುವುದಾಗಿ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು 5 ಕರುಗಳು ಕಲ್ಲುಪಾರಿಗಳ ಮಧ್ಯೆ ಸಿಕ್ಕಿದೆ. ಇನ್ನುಳಿದ ಕರುಗಳಿಗೆ ಹುಡುಕಾಟ ನಡೆಸಲಾಗುತ್ತಿದೆ.
ನಾಗೇಶ್ ಯರುಕೋಣೆ ಅವರುಸಿಕ್ಕಿದ ಕರುಗಳನ್ನು ಮನೆಗೆ ತಂದು ತಾತ್ಕಾಲಿಕವಾಗಿ ಉಪ ಚರಿಸುತ್ತಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Shivamogga Case ಸಾರ್ವತ್ರಿಕ ಆಕ್ರೋಶ: ಸಮಾಜದ ಸ್ವಾಸ್ಥ್ಯ ಯಾರೂ ಕೆಡಿಸಬಾರದು: ಪೇಜಾವರ ಶ್ರೀ

World Animal Welfare Day: ಪ್ರಾಣಿಗಳ ಕ್ಷೇಮಕ್ಕಾಗಿ ಶ್ರಮಿಸುವ ಜಗತ್ತು ಸೃಷ್ಟಿಯಾಗಲಿ

Malaria : ಮಲೇರಿಯಾ ಲಸಿಕೆಗೆ ಡಬ್ಲ್ಯುಎಚ್‌ಒ ಅಸ್ತು
Vande Bharat: ವಂದೇ ಭಾರತ್ ರೈಲು ಸೇವೆ ದೇಶಾದ್ಯಂತ ವಿಸ್ತರಣೆ

Kundapura ಪ್ರಸಿದ್ಧ ಯಾತ್ರಾ ಸ್ಥಳಗಳಾದ ತಿರುಪತಿ, ವಾರಾಣಸಿ ರೈಲಿಗೆ ಬೇಡಿಕೆ