
ಪತ್ನಿಯ ಹಣದಾಹಕ್ಕೆ ಪತಿ ಆತ್ಮಹತ್ಯೆ
ಎಷ್ಟು ದುಡಿದರೂ ಹಣಕ್ಕೆ ಪೀಡಿಸುತ್ತಿದ್ದ ಹೆಂಡತಿ; ಪತ್ನಿಯ ಜಗಳಕ್ಕೆ ಬೇಸತ್ತು ಪತಿ ನೇಣಿಗೆ ಶರಣು
Team Udayavani, Nov 17, 2022, 1:23 PM IST

ಬೆಂಗಳೂರು: ಪತಿಯ ಕಾಟಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪ್ರಕರಣಗಳೇ ಹೆಚ್ಚು. ಆದರೆ, ಇಲ್ಲೊಂದು ಪ್ರಕರಣದಲ್ಲಿ ಪತ್ನಿಯ ಹಣದಾಹಕ್ಕೆ ಪತಿ ಡೆತ್‌ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹನುಮಂತ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅಣ್ಣಯ್ಯ ಮತ್ತು ಉಮಾ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ 3 ವರ್ಷದ ಮಗ ಇದೆ. ಅಣ್ಣಯ್ಯ ಬನಶಂಕರಿಯ ಬಾರ್‌ವೊಂದರಲ್ಲಿ ಕ್ಯಾಶಿಯರ್ ಆಗಿದ್ದ. ಉಮಾ ಮನೆಯಲ್ಲೇ ಇರುತ್ತಿದ್ದರು. ದಂಪತಿ ಶ್ರೀನಿವಾಸನಗರದಲ್ಲಿ ವಾಸವಾಗಿದ್ದರು. ಈ ಮಧ್ಯೆ ಪತ್ನಿ ಉಮಾ ಹೆಚ್ಚಿನ ಹಣಕ್ಕಾಗಿ ಪತಿ ಅಣ್ಣಯ್ಯಗೆ ಪೀಡಿಸುತ್ತಿದ್ದಳು. ಅದೇ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಅದರಿಂದ ಬೇಸತ್ತ ಅಣ್ಣಯ್ಯ ಡೆತ್‌ನೋಟ್ ಬರೆದಿಟ್ಟು ಮನೆಯಲ್ಲಿ ಫ್ಯಾನ್‌ಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎಂದು ಪೊಲೀಸರು ಹೇಳಿದರು.
ಡೆತ್‌ನೋಟ್‌ನಲ್ಲಿ ಏನಿದೆ?
ಅಣ್ಣಯ್ಯ ಆತ್ಮಹತ್ಯೆಗೂ ಮೊದಲು ಡೆತ್‌ನೋಟ್ ಬರೆದಿಟ್ಟಿದ್ದು, ಅದು ವೈರಲ್ ಆಗಿದೆ. “ಪತ್ನಿಗೆ ಹಣದಾಹ ಹೆಚ್ಚು. ಎಷ್ಟು ದುಡಿದರೂ ಆಕೆಗೆ ಇನ್ನಷ್ಟು ಹಣಬೇಕಾಗಿತ್ತು. ಜೀವನದಲ್ಲಿ ನೆಮ್ಮದಿಯೇ ಇಲ್ಲ. ಜೀವನದಲ್ಲಿ ಇಂತಹ ಹೆಂಗಸು ನನಗೆ ಬೇಡ. ಮಗನೇ ಅಮ್ಮ ಸರಿಯಿಲ್ಲ. ಆಕೆ ಜತೆ ಇರಬೇಡ’ ಎಂದೆಲ್ಲ ಉಲ್ಲೇಖೀಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಡೆತ್‌ನೋಟ್ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಮತ ಎಣಿಕೆಗೆ ಎರಡು ದಿನ ಬೇಕೆ ?! ;ಏನು ಕಾಮೆಂಟ್ಸ್ ಗಳು?! ; ಕಿಡಿ ಕಾರಿದ ಉಪೇಂದ್ರ

ಚುನಾವಣೆ ಘೋಷಣೆ: ಉಡುಪಿ ಮಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲು ಸೂಚನೆ

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

ನೀರಿನಲ್ಲಿ ಮುಳುಗುತ್ತಿದ್ದ ಮೂವರ ಪ್ರಾಣ ಉಳಿಸಿದ ನಾಲ್ಕನೇ ತರಗತಿ ವಿದ್ಯಾರ್ಥಿ

ಐಸಿಸಿ ಏಕದಿನ ರ‍್ಯಾಂಕಿಂಗ್ : ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಪ್ರಗತಿ