

Team Udayavani, Jul 13, 2024, 11:34 AM IST
ಬೆಂಗಳೂರು: ಅತ್ತೆಯ ಮನೆಯಲ್ಲೇ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಅಳಿಯ ರಾಜಗೋಪಾಲನಗರ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಆರೋಪಿಯಿಂದ 3.8 ಲಕ್ಷ ಮೌಲ್ಯದ 70 ಗ್ರಾಂ. ತೂಕದ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಕಮಲನಗರದ ನಿವಾಸಿ ಪರಶುರಾಮ (29) ಬಂಧಿತ.
ಠಾಣಾ ವ್ಯಾಪ್ತಿಯ ಲಗ್ಗೆರೆಯಲ್ಲಿ ವಾಸವಿದ್ದ ನಾಗಮ್ಮ ತಮ್ಮ ಮಗಳನ್ನು ಆರೋಪಿ ಪರಶುರಾಮನಿಗೆ ವಿವಾಹ ಮಾಡಿಕೊಟ್ಟಿದ್ದರು. ಪರಶುರಾಮ್ ಯಾವುದೇ ಕೆಲಸವಿಲ್ಲದೆ ಓಡಾಡಿಕೊಂಡಿದ್ದ.
ಜುಲೈ 6 ರಂದು ನಾಗಮ್ಮ ಹಾಗೂ ಮಗಳು ದೇವಾಲಯಕ್ಕೆ ಹೋಗಿದ್ದರು. ಆ ವೇಳೆ ಸಮಯ ಸಾಧಿಸಿ ಆರೋಪಿಯು ಮನೆಯದ್ದ 70 ಗ್ರಾಂ. ಚಿನಾಭರಣ ಕಳವು ಮಾಡಿ ಪರಾರಿಯಾಗಿದ್ದ.
ಇತ್ತ ಮನೆಗೆ ಬಂದ ತಾಯಿ-ಮಗಳು ಪರಶುರಾಮ್ ಕೃತ್ಯದ ಬಗ್ಗೆ ತಿಳಿದುಕೊಂಡು ರಾಜಗೋಪಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಗ್ಗೆರೆ ಮುಖ್ಯರಸ್ತೆಯ ಏಟ್ರಿಯಾ ಹೋಟೆಲ್ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Ad
ಎಲ್.ಕೆ.ಆಡ್ವಾಣಿ ಯಾತ್ರೆಗೂ ಮುನ್ನ ಸ್ಫೋಟ ನಡೆಸಿದ್ದ ಉಗ್ರ ವಿಜಯಪುರದಲ್ಲಿ ಸೆರೆ
ದಿಲ್ಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ ಜತೆ ಸಿಎಂ ಸಿದ್ದರಾಮಯ್ಯ ಮಾತುಕತೆ
ಗಣೇಶೋತ್ಸವ ಇನ್ನು ಮಹಾರಾಷ್ಟ್ರದ “ರಾಜ್ಯಹಬ್ಬ’: ಸರ್ಕಾರ
Congress Govt: ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ: ಶಿವಲಿಂಗೇಗೌಡ
World Population Day: ಜನಸಂಖ್ಯೆ ಹೊರೆ ಅಲ್ಲ ವರವಾಗಿ ಪರಿವರ್ತಿಸೋಣ
You seem to have an Ad Blocker on.
To continue reading, please turn it off or whitelist Udayavani.