ರಾಜಧಾನಿ ಮತ್ತಷ್ಟು ಬಂಧ ಮುಕ್ತ

Team Udayavani, Jun 8, 2020, 6:46 AM IST

relaxattion

ಬೆಂಗಳೂರು: ಲಾಕ್‌ಡೌನ್‌ ಬಹುತೇಕ ಎಲ್ಲ ಕ್ಷೇತ್ರಗಳಿಗೂ ಸಡಿಲಿಕೆಯಾಗಿದ್ದು, ಸೋಮವಾರದಿಂದ ನಗರ ಸುಮಾರು ಎರಡೂವರೆ ತಿಂಗಳ ನಂತರ ಸಂಪೂರ್ಣ ಸಹಜ ಸ್ಥಿತಿಯತ್ತ ಮರಳುತ್ತಿದೆ. ಧಾರ್ಮಿಕ ಆಚರಣೆ, ಮನರಂಜನೆ,  ವ್ಯಾಪಾರ-ವಹಿವಾಟು ಸೇರಿದಂತೆ ಎಲ್ಲ ಕ್ಷೇತ್ರವೂ ಇನ್ಮುಂದೆ ನಿರ್ಬಂಧದಿಂದ ಮುಕ್ತವಾಗಲಿದೆ. ಅತ್ತ ಲಾಕ್‌ಡೌನ್‌ ತೆರವಿಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಇತ್ತ ಮಂದಿರ, ಮಸೀದಿ, ಚರ್ಚ್‌ ಗಳು ಭಕ್ತರನ್ನು ಬರಮಾಡಿಕೊಳ್ಳಲು  ಸಜ್ಜಾಗುತ್ತಿವೆ.

ಅದೇ ರೀತಿ, ಹೋಟೆಲ್‌, ರೆಸ್ಟೋರೆಂಟ್‌ಗಳು, ಲಾಡ್ಜಿಂಗ್‌, ಪ್ರವಾಸಿ ತಾಣಗಳು ಎಂದಿನಂತೆ ಅತಿಥಿಗಳ ಆತಿಥ್ಯಕ್ಕೆ ಸಿದಟಛಿಗೊಂಡಿವೆ. ಇನ್ನು ಈಗಾಗಲೇ ಸರ್ಕಾರಿ ಬಸ್‌ಗಳು ರಸ್ತೆಗಿಳಿದಿದ್ದು, ಸಮಯ ನಿರ್ಬಂಧವೂ  ತೆರವಾಗುವ ಸಾಧ್ಯತೆ ಇದೆ. ಆದರೆ, “ಬಂಧ ಮುಕ್ತ’ದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಆಗಿರಲಿದೆ. ಸ್ವಲ್ಪ ನಿರ್ಲಕ್ಷಿಸಿದರೂ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆ ಇದೆ.

ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳಿಗೂ ಇದು ಸವಾಲಾಗಿದೆ. ಸಾರ್ವಜನಿಕರು ಭೇಟಿ ನೀಡುವ ಎಲ್ಲ ಸ್ಥಳಗಳಲ್ಲಿ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ರೀನಿಂಗ್‌, ಸಾಮಾಜಿಕ ಅಂತರಕ್ಕಾಗಿ ಮಾರ್ಕ್‌ ಮಾಡುವುದು, ಹೋಟೆಲ್‌ಗ‌ಳಲ್ಲಿ ಮತ್ತಷ್ಟು ಶುಚಿತ್ವ ಕಾಪಾಡುವುದು,  ಹೆಚ್ಚುವರಿ ಸೇವೆಗೆ ಸಿಬ್ಬಂದಿ ಮತ್ತು ಬಸ್‌ಗಳ ನಿಯೋಜನೆ ಒಳಗೊಂಡಂತೆ ಹಲವು ರೀತಿಯ ಪೂರ್ವಸಿದತೆಗಳು ನಗರದಲ್ಲಿ ಭಾನುವಾರ ಕಂಡುಬಂತು.

ಆದರೆ, ಈ ಭಾಗ್ಯ ಕಂಟೈನ್ಮೆಂಟ್‌ ವಲಯದಲ್ಲಿರುವ 40ಕ್ಕೂ ಹೆಚ್ಚು ವಾರ್ಡ್‌  ಗಳಿಗೆ ಸದ್ಯಕ್ಕೆ ಇಲ್ಲ. ಹಂತ-ಹಂತವಾಗಿ ಅಲ್ಲಿ ಸಡಿಲಿಕೆ ಆಗಲಿದೆ. ಒಂದು ವೇಳೆ ಕಂಟೈನ್ಮೆಂಟ್‌ ವಲಯಗಳ ನಿವಾಸಿಗಳು ಲಾಕ್‌ಡೌನ್‌ ಮುಕ್ತ ಜಾಗಗಳಲ್ಲಿ ಕಾಣಿಸಿಕೊಂಡರೆ, ಅವರನ್ನು ಗುರುತಿಸುವುದು ಕಷ್ಟ. ಹೆಜ್ಜೆ-ಹೆಜ್ಜೆಗೂ  ಪೊಲೀಸರು ತಪಾಸಣೆ ಮಾಡುವುದು ಕೂಡ ಅಸಾಧ್ಯ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜವಾಬ್ದಾರಿಯೂ ಇಲ್ಲಿ ಮುಖ್ಯವಾಗಿದೆ.

ಸೂಚನೆ ಪಾಲಿಸಲು ಮನವಿ: ಸರ್ಕಾರ ಲಾಕ್‌ ಡೌನ್‌ ತೆರವುಗೊಳಿಸಿ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ  ಮಾತ್ರ ಅವಕಾಶ ಮಾಡಿಕೊಟ್ಟಿದೆ. ಈಗಾಗಲೇ ಮುಜರಾಯಿ ಇಲಾಖೆಯು ದೇವಾಲಯಗಳಲ್ಲಿ ಜನಸಂದಣಿಯಿಂದ ಸೋಂಕು  ತಡೆಗಟ್ಟಲು ಹಲವು ಷರತ್ತುಗಳನ್ನು ವಿಧಿಸಿ ಸರ್ಕಾರ ದೇವಾಲಯಗಳ ಬಾಗಿಲು ತೆರೆಯಲು ಅನುಮತಿ ನೀಡಿದೆ. ಎಲ್ಲ ದೇವಾಲಯಗಳಲ್ಲಿನ ಅರ್ಚಕರು ಸರ್ಕಾರದ ಸೂಚನೆಗಳನ್ನು ಪಾಲಿಸಬೇಕು. ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟ  ನಾಗರಿಕರಿಗೆ ದೇವಾಲಯ ಪ್ರವೇಶಕ್ಕೆ ಸರ್ಕಾರ ಅವಕಾಶ ನೀಡಿಲ್ಲ.

ಆದರೆ ಬಹುತೇಕ ಹಿರಿಯರು ತಮ್ಮ ಇಳಿವಯಸ್ಸಿನಲ್ಲಿ ದೇವಾಲಯಗಳಿಗೆ ಹೋಗುವುದು ರೂಢಿ. ಆದ್ದರಿಂದ ಮಕ್ಕಳಿಗೆ ಪ್ರವೇಶ ಇಲ್ಲದಿದ್ದರೂ ಹಿರಿಯ ನಾಗರಿಕರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅಖೀಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ,ಉಪಾದಿವಂತರ ಒಕ್ಕೂಟದ ಪ್ರಧಾನ ಕಾರ್ಯ ದರ್ಶಿ ಡಾ.ಕೆ.ಎಸ್‌.ಎನ್‌. ದೀಕ್ಷಿತ್‌ ಒತ್ತಾಯಿಸಿದ್ದಾರೆ.

ಬಂಧ ಮುಕ್ತ; ಇರಲಿ ಮುನ್ನೆಚ್ಚರಿಕೆ: ಪ್ರತಿಯೊಂದು ಕಡೆ ಜನ ಸ್ವಯಂಪ್ರೇರಿತ ಸಾಮಾಜಿಕ ಅಂತರ ಹಾಗೂ ಸರದಿಯಲ್ಲಿ ನಿಂತು ಮಾಲ್‌ಗ‌ಳಲ್ಲಿ ಪ್ರವೇಶ, ಸ್ಯಾನಿಟೈಸರ್‌ ಬಳಕೆ, ಸಡಿಲಿಕೆಯಾಗಿದೆ ಎಂಬ ಕಾರಣಕ್ಕೆ ಅನಗತ್ಯ  ಸಂಚರಿಸದಿರುವುದು ಸೂಕ್ತ. ಅದೇ ರೀತಿ, ಕಂಟೈನ್ಮೆಂಟ್‌ ವಲಯದಲ್ಲಿರುವವರು ನಿಯಮ ಉಲ್ಲಂ ಸಿ ಹೊರಬರದಂತೆ ಎಚ್ಚರ ವಹಿಸುವ ಅವಶ್ಯಕತೆ ಇದೆ. ಆಗ ಮಾತ್ರ ಈ ಸಡಿಲಿಕೆ ಯಶಸ್ವಿಯಾಗಲು ಸಾಧ್ಯ.

ಇಲ್ಲವಾದರೆ, ನಿರ್ಬಂಧಗಳು  ಮತ್ತೆ ಕಟ್ಟಿಹಾಕಿದರೂ ಅಚ್ಚರಿ ಇಲ್ಲ. ಸಡಿಲಿಕೆ ಬೆನ್ನಲ್ಲೇ ಕಚೇರಿ, ಕಂಪನಿಗಳು, ಸಂಘ-ಸಂಸ್ಥೆಗಳು ಬಹುತೇಕ ತಮ್ಮ ಎಲ್ಲ ಸಿಬ್ಬಂದಿ ಈಗಾಗಲೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಸೋಮವಾರದಿಂದ ಸಂಪೂರ್ಣ ತೆರವಿನಿಂದ ಎಲ್ಲ  ಕ್ಷೇತ್ರಗಳು ಕಾರ್ಯಾರಂಭ ಮಾಡಲಿವೆ. ಇದರಿಂದ ಎರಡೂವರೆ ತಿಂಗಳ “ಗೃಹ ಬಂಧನ’ದಿಂದ ಬಿಡುಗಡೆಗೊಂಡು ಸ್ನೇಹಿತರು, ಸಹೋದ್ಯೋಗಿಗಳು ಮುಖಾಮುಖೀ  ಆಗಲಿದ್ದಾರೆ. ಉದ್ಯಾನಗಳಲ್ಲಿ ವಾಯುವಿಹಾರ ಮಾಡಲಿದ್ದಾರೆ.  ಸಹಭೋಜನ ನಡೆಸಲಿದ್ದಾರೆ. ಆದರೆ, ಇದೆಲ್ಲದರ ನಡುವೆ ಸಾಮಾಜಿಕ ಅಂತರ ಮಾತ್ರ ಮುಂದುವರಿಯಲಿದೆ.

ಮುಕ್ತ ಅವಕಾಶ
– ಮಾಲ್‌
– ಚಲನಚಿತ್ರ ಚಿತ್ರೀಕರಣ
– ತಾರಾ ಹೋಟೆಲ್‌, ಕ್ಲಬ್‌, ರೆಸಾರ್ಟ್‌
– ಮಂದಿರ, ಮಸೀದಿ, ಚರ್ಚ್‌ ಪ್ರವೇಶ
– ಬಿಎಂಟಿಸಿ ಬಸ್‌, ಆಟೋ, ಕ್ಸಿ,ಮ್ಯಾಕ್ಸಿಕ್ಯಾಬ್‌
– ಅಂಗಡಿ ಮುಂಗಟ್ಟು, ಸಲೂನ್‌, ಬ್ಯೂಟಿ ಪಾರ್ಲರ್‌, ಜ್ಯುಯಲರ್, ವಾಣಿಜ್ಯ ಸಂಕೀರ್ಣಗಳಲ್ಲಿನ ಮಳಿಗೆಗಳು
– ಹೋಟೆಲ್‌
– ಬೀದಿ ಬದಿ ವ್ಯಾಪಾರ
– ಎಂಆರ್‌ಪಿ ಮದ್ಯದ ಮಳಿಗೆ, ಪಬ್‌, ಬಾರ್‌
– ತರಕಾರಿ ಮಾರುಕಟ್ಟೆ, ಎಪಿಎಂಸಿ ಮಂಡಿ, ಕಿರಾಣಿ ಆಂಗಡಿ,
– ಎಲೆಕ್ಟ್ರಿಕ್‌ ಮಳಿಗೆ, ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ, ಮಾಲ್‌ ಹೊರತುಪಡಿಸಿದ ಮಳಿಗೆಗಳು.

ನಿರ್ಬಂಧ
– ಚಲನಚಿತ್ರ ಪ್ರದರ್ಶನ
– ಶಾಲಾ-ಕಾಲೇಜು
– ಕಲ್ಯಾಣ ಮಂಟಪ
– ಜಾತ್ರೆ, ಊರ ಹಬ್ಬ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.