ಡೆಡ್‌ಲೈನಲ್ಲೇ ಮೆಟ್ರೋ ಹಸಿರು ಮಾರ್ಗ ಪೂರ್ಣ?


Team Udayavani, Jun 17, 2020, 6:09 AM IST

deadline-metro

ಬೆಂಗಳೂರು: ಸುದೀರ್ಘ‌ ಅವಧಿಯ ಲಾಕ್‌ಡೌನ್‌ ಪರಿಣಾಮ ಎಲ್ಲ ಪ್ರಗತಿ ಕಾಮಗಾರಿಗಳಿಗೂ ಹಿನ್ನಡೆ ಉಂಟಾಗಿದ್ದು, ಈ ಹಿಂದೆ ಇಟ್ಟುಕೊಂಡಿದ್ದ ಪೂರ್ಣಗೊಳಿಸುವ ಗುರಿಯು ಅನಿವಾರ್ಯವಾಗಿ ಮುಂದೂಡಲ್ಪಡುತ್ತಿದೆ. ಆದರೆ,  “ನಮ್ಮ ಮೆಟ್ರೋ’ ಎರಡನೇ  ಹಂತದ ಕನಕಪುರ ರಸ್ತೆಯಲ್ಲಿನ ಮಾರ್ಗ (ಹಸಿರು ಮಾರ್ಗ) ಮಾತ್ರ ಹೆಚ್ಚು-ಕಡಿಮೆ “ಡೆಡ್‌ಲೈನ್‌’ನಲ್ಲೇ ಪೂರ್ಣಗೊಳ್ಳಲಿದೆ! ಹೌದು, ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆದಿವೆ.

ಈಗಾಗಲೇ ನಿಲ್ದಾಣ ನಿರ್ಮಾಣ,  ಹಳಿ ಜೋಡಣೆ, ವಿದ್ಯುತ್‌ ಪೂರೈಕೆ ಸೇರಿದಂತೆ ಕಾರ್ಮಿಕರ ಅವಲಂಬಿತ ಪ್ರಮುಖ ಕಾಮಗಾರಿಗಳು ಪೂರ್ಣಗೊಂಡಿವೆ. ಮಾರ್ಗದಲ್ಲಿ ಬರುವ ನಿಲ್ದಾಣಗಳಿಗೆ ಭದ್ರತಾ ಸಿಬ್ಬಂದಿ ಮತ್ತು ಹೌಸ್‌ಕೀಪಿಂಗ್‌ಗಾಗಿ ಏಜೆನ್ಸಿಗಳಿಂದ ಟೆಂಡರ್‌ ಆಹ್ವಾನಿಸಲಾಗಿದೆ. ಸದ್ಯ ಸಿಗ್ನಲಿಂಗ್‌ ಜೋಡಣೆ ಹಾಗೂ ಪರೀಕ್ಷೆ ಕಾರ್ಯ ನಡೆದಿದ್ದು, ಸೆಪ್ಟೆಂಬರ್‌ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಲಿದೆ.

ಆದರೆ, ಸಾರ್ವಜನಿಕ ಸೇವೆಗಾಗಿ ನವೆಂಬರ್‌ ವರೆಗೆ ಕಾಯುವುದು ಅನಿವಾರ್ಯ ಆಗಲಿದೆ.  ಸುಮಾರು 6.29 ಕಿ.ಮೀ. ಉದ್ದದ ಯಲಚೇನಹಳ್ಳಿ-  ಅಂಜನಾಪುರ ಟೌನ್‌ಶಿಪ್‌ ಮಾರ್ಗವನ್ನು 2020ರ ಆಗಸ್ಟ್‌ -ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ವು ಗಡುವು ವಿಧಿಸಿಕೊಂಡಿದೆ. ಈ ಮಧ್ಯೆ ಕೋವಿಡ್‌-19 ಪೂರ್ವದಲ್ಲಿ ಎರಡು ತಿಂಗಳು  ಮುಂಚಿತವಾಗಿಯೇ ಅಂದರೆ ಜುಲೈ ಅಂತ್ಯದೊಳಗೆ ಸೇವೆಗೆ ಮುಕ್ತಗೊಳಿಸುವ ಗುರಿ ಇತ್ತು. ಆದರೆ, ಎರಡೂವರೆ ತಿಂಗಳು ಲಾಕ್‌ ಡೌನ್‌ ಹಾಗೂ ಈ ಮಧ್ಯೆ  ಕಾರ್ಮಿಕರ ವಲಸೆಯಿಂದ ಕಾಮಗಾರಿ ಮುಂದೂಡಲ್ಪಟ್ಟಿತು ಎಂದು ಮೂಲಗಳು ತಿಳಿಸಿವೆ.

ಲಾಕ್‌ಡೌನ್‌ ಜಾರಿಯಾಗುವಷ್ಟರಲ್ಲಿ ಸಿವಿಲ್‌ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದವು. ಸದ್ಯ ಎಂಜಿನಿಯರಿಂಗ್‌ ಅವಲಂಬಿತ  ತಾಂತ್ರಿಕ ಕಾರ್ಯಗಳು ಮಾತ್ರ ಬಾಕಿ ಇದ್ದು, ಅದನ್ನು ಮಾಡಿಮುಗಿಸುವುದು ಗುತ್ತಿಗೆ ಪಡೆದ ಆಯಾ ಕಂಪನಿಗಳ ಜವಾಬ್ದಾರಿ ಆಗಿದೆ. ನಿಗದಿತ ಅವಧಿಯಲ್ಲಿ ಅದು ಆಗಲಿದೆ. ಎಲ್ಲ ಅಗತ್ಯ ಪರೀಕ್ಷೆಗಳು ಮುಗಿಯುತ್ತಿದ್ದಂತೆ, ರೈಲ್ವೆ ಸುರಕ್ಷತಾ ಆಯುಕ್ತರಿಗೆ ಅನುಮತಿಗಾಗಿ ಕೋರಲಾಗುವುದು. ಹೆಚ್ಚು-ಕಡಿಮೆ ಒಂದೂವರೆ ತಿಂಗಳಲ್ಲಿ ಮುಖ್ಯಮಂತ್ರಿಯನ್ನು ಪರಿಶೀಲನೆಗೆ ಆಹ್ವಾನಿಸುವ ಗುರಿ ಕೂಡ ಇದೆ. ಶೀಘ್ರ ಈ ಸಂಬಂಧ ದಿನಾಂಕ ನಿಗದಿಪಡಿಸಿಕೊಳ್ಳಲಾಗುವುದು ಎಂದು  ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹಸಿರು ಮಾರ್ಗದ ಹಾದಿ ಸುಗಮ: ಹಸಿರು ಮಾರ್ಗದಲ್ಲಿ ಅಂಜನಾಪುರ ರೋಡ್‌ ಕ್ರಾಸ್‌, ಕೃಷ್ಣಲೀಲಾ ಪಾರ್ಕ್‌, ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ಟೌನ್‌ಶಿಪ್‌. ಇನ್ನು ಇದಕ್ಕೆ ಪೂರಕವಾಗಿ ಇದೇ ಹಸಿರು ಮಾರ್ಗದ ಮತ್ತೂಂದು  ತುದಿಯಲ್ಲಿರುವ ನಾಗಸಂದ್ರ-ಬಿಐಇಸಿ (ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ) ನಡುವೆ ಭೂಸ್ವಾಧೀನ ಪ್ರಕ್ರಿಯೆ ಕಗ್ಗಂಟಾಗಿತ್ತು. ಇದರಿಂದ ಬಿಐಇಸಿ ನಿಲ್ದಾಣಕ್ಕೆ ಅಗತ್ಯವಿರುವ ಹೆಚ್ಚುವರಿ 1,813 ಚ. ಮೀ.  ಭೂಸ್ವಾಧೀನಕ್ಕೆ ಸರ್ಕಾರ ಈಚೆಗೆ ಅಧಿಸೂಚನೆ ಹೊರಡಿಸಿದೆ.

ಈ ಮೂಲಕ ಉದ್ದೇಶಿತ ಮಾರ್ಗದ ಹಾದಿ ಸಂಪೂರ್ಣ ಸುಗಮವಾಗಿದೆ. ಅದೇ ರೀತಿ, ಸುಮಾರು 15 ಕಿ.ಮೀ. ಉದ್ದದ ಬೈಯಪ್ಪನಹಳ್ಳಿ-ವೈಟ್‌μàಲ್ಡ್‌ ಮಾರ್ಗದಲ್ಲಿ ಯಾವುದೇ ತೊಡಕುಗಳು ಇಲ್ಲ. ತುಮಕೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ಮಾರ್ಗಗಳು ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಹಂತದಲ್ಲೇ ಇವೆ. ಈ ಹಂತದಲ್ಲಿ ಕಾರ್ಮಿಕರು ಶಿಬಿರಗಳಿಂದ ಬಿಟ್ಟುಹೋಗುತ್ತಿರುವುದು ಹೆಚ್ಚಾಗಿದೆ. ಇದು ಕಾಮಗಾರಿ ಪ್ರಗತಿ  ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ನಿಗಮದ ಅಧಿಕಾರಿಗಳಿಗೆ ತಲೆನೋವಾಗಿದೆ.

ಹೊಸ ವರ್ಷಕ್ಕೆ ಕೆಂಗೇರಿ ಮಾರ್ಗ?: ಮೈಸೂರು ರಸ್ತೆ- ಕೆಂಗೇರಿ ನಡುವೆ ಮೆಟ್ರೋ ನಿರ್ಮಾಣ ಕಾರ್ಯ ಕೂಡ ಚುರುಕಾಗಿ ಸಾಗಿದೆ. ಆದರೆ,  ಇನ್ನೂ ಕಾರ್ಮಿಕರ ಅವಲಂಬಿತ ಕಾಮಗಾರಿ ಬಾಕಿ ಇದೆ. ಆದರೆ, ಲಾಕ್‌ಡೌನ್‌ನಿಂದ ಕಾರ್ಮಿಕರು ವಲಸೆ ಹೋಗಿದ್ದರಿಂದ ಕೊರತೆ ಕಾಡುತ್ತಿದೆ. ಜತೆಗೆ ಈ ಮಾರ್ಗದಲ್ಲಿ ಚಲ್ಲಘಟ್ಟ ನಿಲ್ದಾಣ ಬೇರೆ ಸೇರ್ಪಡೆಗೊಂಡಿದೆ. ಇದೆಲ್ಲ ಕಾರಣಗಳಿಂದ ನಿಗದಿತ ಗಡುವಿನಲ್ಲಿ ಅಂದರೆ ವರ್ಷಾಂತ್ಯದ ಒಳಗೆ  ಪೂರ್ಣಗೊಳಿಸುವುದು ಅನುಮಾನವಾಗಿದ್ದು, 2021ರ ಜನವರಿ-ಮಾರ್ಚ್‌ ಮಧ್ಯೆ ಲೋಕಾರ್ಪಣೆ ಗುರಿ ಇದೆ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ನವೆಂಬರ್‌ 1ಕ್ಕೆ ಸೇವೆಗೆ ಮುಕ್ತ: ಆಗಸ್ಟ್‌ನಲ್ಲಿ ಮುಕ್ತಗೊಳಿಸುವ ಗುರಿ ಇತ್ತು. ಆದರೆ, ಲಾಕ್‌ ಡೌನ್‌ನಿಂದ ಇದು ತುಸು ತಡವಾಗಿದ್ದು, ಕನ್ನಡ ರಾಜ್ಯೋತ್ಸವದಂದು ಲೋಕಾರ್ಪಣೆಗೊಳಿಸಲು ನಿರ್ಧರಿಸಲಾಗಿದೆ. ಸದ್ಯ ಸಣ್ಣಪುಟ್ಟ  ಕಾಮಗಾರಿಗಳು ಬಾಕಿ ಇವೆ. ಇನ್ನು ತುಮಕೂರು ರಸ್ತೆಯ ಮೆಟ್ರೋ  ಮಾರ್ಗವನ್ನೂ ವರ್ಷಾಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಇದೆ.
-ಅಜಯ್‌ ಸೇಠ್,‌ ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್‌

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

kl-rahul

ಮೊದಲ ಏಕದಿನ ಪಂದ್ಯದ ಸೋಲಿಗೆ ಇವರೇ ಕಾರಣ ಎಂದ ನಾಯಕ ರಾಹುಲ್

ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ

ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ

ಭಾರತದಲ್ಲಿ 24ಗಂಟೆಯಲ್ಲಿ 3ಲಕ್ಷದ ಗಡಿ ದಾಟಿದ ಕೋವಿಡ್ ಪ್ರಕರಣ, ಒಮಿಕ್ರಾನ್ ಸಂಖ್ಯೆ 9,287

ಭಾರತದಲ್ಲಿ 24ಗಂಟೆಯಲ್ಲಿ 3ಲಕ್ಷದ ಗಡಿ ದಾಟಿದ ಕೋವಿಡ್ ಪ್ರಕರಣ, ಒಮಿಕ್ರಾನ್ ಸಂಖ್ಯೆ 9,287

ವಿಜಯ್ ಬರ್ತ್‌ಡೇ: ಹುಟ್ಟುಹಬ್ಬ ಆಚರಿಸುತ್ತಿಲ್ಲ, ಮನೆ ಬಳಿ ಬರಬೇಡಿ ಎಂದ ನಟ

ವಿಜಯ್ ಬರ್ತ್‌ಡೇ: ಹುಟ್ಟುಹಬ್ಬ ಆಚರಿಸುತ್ತಿಲ್ಲ, ಮನೆ ಬಳಿ ಬರಬೇಡಿ ಎಂದ ನಟ

ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ನಿಧನ

ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ನಿಧನ

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ನಿರ್ಧಾರ?: ಬೊಮ್ಮಾಯಿ-ಕಟೀಲ್ ತೀರ್ಮಾನ

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ನಿರ್ಧಾರ?: ಬೊಮ್ಮಾಯಿ-ಕಟೀಲ್ ತೀರ್ಮಾನ

ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಎರಡು ಪ್ರತ್ಯೇಕ ಕೇಸು ದಾಖಲು

ಕೋವಿಡ್ ನಿಯಮ ಉಲ್ಲಂಘನೆ: ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಪ್ರಕರಣ ದಾಖಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೀರಿನ ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್ ಹೊಡೆದು ತಂದೆ-ಮಗ ಸ್ಥಳದಲ್ಲೇ ಸಾವು

ನೀರಿನ ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್ ಹೊಡೆದು ತಂದೆ-ಮಗ ಸ್ಥಳದಲ್ಲೇ ಸಾವು

araga

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಅಧಿಕಾರಿಗಳ ವಿರುದ್ಧ ಕ್ರಮ: ಆರಗ ಜ್ಞಾನೇಂದ್ರ ಎಚ್ಚರಿಕೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಐವರ ವಿರುದ್ಧ ದೂರು

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಐವರ ವಿರುದ್ಧ ದೂರು

ಅಮೃತ ನಗರೋತ್ಥಾನ: ವೈಟ್‌ ಟಾಪಿಂಗ್‌ಗೆ ಗರಿಷ್ಠ ಮೊತ್ತ?

ಅಮೃತ ನಗರೋತ್ಥಾನ: ವೈಟ್‌ ಟಾಪಿಂಗ್‌ಗೆ ಗರಿಷ್ಠ ಮೊತ್ತ?

ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ : ಏ.16ರಿಂದ ಮೇ 4 ರವರೆಗೆ ನಡೆಯಲಿದೆ ಪರೀಕ್ಷೆ

ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ : ಏ.16ರಿಂದ ಮೇ 4 ರವರೆಗೆ ನಡೆಯಲಿದೆ ಪರೀಕ್ಷೆ

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

ಸ್ತ್ರೀ ದೌರ್ಜನ್ಯಕ್ಕಿಲ್ಲ ಕಡಿವಾಣ: ಯಾಮೇರ

kl-rahul

ಮೊದಲ ಏಕದಿನ ಪಂದ್ಯದ ಸೋಲಿಗೆ ಇವರೇ ಕಾರಣ ಎಂದ ನಾಯಕ ರಾಹುಲ್

4school

ಪಬ್ಲಿಕ್‌ ಶಾಲೆಗೆ ಸೌಲಭ್ಯ ಒದಗಿಸಲು ಒತ್ತಾಯ

3ravura

ಗಬ್ಬು ನಾರುತ್ತಿದೆ ರಾವೂರ ಪರಿಶಿಷ್ಟರ ಓಣಿ

2covid

ಲಸಿಕೆ ಪಡೆದಲ್ಲಿ ಕೋವಿಡ್‌ ಅಪಾಯ ಕಡಿಮೆ: ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.