Theft: ಪ್ರಚಾರಕ್ಕೆ ತೆರಳಿದ್ದಾಗ ಮಾಜಿ ಮೇಯರ್‌ ಮನೆಯಲ್ಲಿ ಕಳವು

Team Udayavani, Apr 22, 2024, 1:07 PM IST

7

ಬೆಂಗಳೂರು: ಚುನಾವಣೆ ಪ್ರಚಾರಕ್ಕೆ ತೆರಳಿದ್ದ ಮಾಜಿ ಮೇಯರ್‌ ಆರ್‌.ನಾರಾಯಣಸ್ವಾಮಿ ಅವರ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ನಗದು, ಚಿನ್ನಾಭರಣ ಕಳ್ಳತನವಾಗಿರುವ ಘಟನೆ ಸಂಜಯನಗರ ಠಾಣೆ ವ್ಯಾಪ್ತಿಯ ಸಂಜಯನಗರದ ಆರ್‌ಎಂವಿ 2ನೇ ಹಂತದಲ್ಲಿ ನಡೆದಿದೆ.

ಈ ಸಂಬಂಧ ನಾರಾಯಣಸ್ವಾಮಿ ಅವರು ನೀಡಿದ ದೂರಿನ ಮೇರೆಗೆ ಸೆಕ್ಯೂರಿಟಿ ಗಾರ್ಡ್‌ ನೇಪಾಳ ಮೂಲದ ನರಬಹುದ್ದೂರ್‌ ಶಾಯಿ ಎಂಬಾತನ ವಿರುದ್ಧ ಸಂಜಯನಗರ ಠಾಣೆ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡು ಆತನ ಪತ್ತೆ ಶೋಧ ಕಾರ್ಯ ಮುಂದುವರಿಸಿದ್ದಾರೆ. ಮನೆಯಲ್ಲಿದ್ದ 4 ಲಕ್ಷ ರೂ. ನಗದು, 99.75 ಲಕ್ಷ ರೂ. ಮೌಲ್ಯದ 1 ಕೆ.ಜಿ. 425 ಗ್ರಾಂ ತೂಕದ ಚಿನ್ನಾಭರಣಗಳು, 18.92 ಲಕ್ಷ ರೂ. ಮೌಲ್ಯದ 22 ಕೆ.ಜಿ. ಬೆಳ್ಳಿ ವಸ್ತುಗಳು, 6.50 ಲಕ್ಷ ರೂ. ಮೌಲ್ಯದ 3 ವಾಚ್‌ಗಳು ಸೇರಿ ಒಟ್ಟು 1.29 ಕೋಟಿ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿದೆ ಎಂದು ನಾರಾಯಣಸ್ವಾಮಿ ದೂರಿನಲ್ಲಿ ಉಲ್ಲೇಖೀಸಿದ್ದಾರೆ.

ಏನಿದು ಘಟನೆ?: ಏ.18ರಂದು ಬೆಳಗ್ಗೆ 7.30ಕ್ಕೆ ನಾರಾಯಣಸ್ವಾಮಿ ಮನೆಯಿಂದ ಜಾಲಹಳ್ಳಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಇನ್ನು ಅವರ ಪತ್ನಿ ಮತ್ತು ಪುತ್ರ ತಮಿಳುನಾಡಿನ ತಿರುವಣ್ಣಾಮಲೈ ದೇವಸ್ಥಾನಕ್ಕೆ ತೆರಳಿದ್ದರು. ಪ್ರಚಾರ ಮುಗಿಸಿ ಮಧ್ಯಾಹ್ನ 3 ಗಂಟೆಗೆ ಮನೆಗೆ ಬಂದಿರುವ ನಾರಾಯಣಸ್ವಾಮಿ ಊಟ ಮಾಡಿ, ಸೆಕ್ಯೂರಿಗಾರ್ಡ್‌ ನರಬಹುದ್ದೂರ್‌ ಶಾಯಿಗೂ ಊಟ ನೀಡಿದ್ದಾರೆ. ನಂತರ ಮನೆಗೆ ಬೀಗ ಹಾಕಿಕೊಂಡು ಮಧ್ಯಾಹ್ನ 3.30ಕ್ಕೆ ನಾರಾಯಣಸ್ವಾಮಿ ಮತ್ತೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ. ಚುನಾವಣಾ ಪ್ರಚಾರ ಮುಗಿಸಿಕೊಂಡು ರಾತ್ರಿ 8 ಗಂಟೆಗೆ ಮನೆಗೆ ವಾಪಾಸ್‌ ಬಂದಾಗ, ಮನೆಯ ಹಿಂಬದಿ ಬಾಗಿಲು ತೆರೆದಿರುವುದು ಕಂಡು ಬಂದಿದೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್‌ನನ್ನು ಕೂಗಿದ್ದಾರೆ. ಆತ ಎಲ್ಲಿಯೂ ಕಂಡು ಬಂದಿಲ್ಲ. ಆತನ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿತ್ತು.

ಮನೆಯ ಒಳಗೆ ತೆರಳಿ ನೋಡಿದಾಗ ಮನೆಯ 3 ಕೋಣೆಯ ವಾರ್ಡ್‌ ರೂಬ್‌ಗಳಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ವಾರ್ಡ್‌ರೂಬ್‌ನಲ್ಲಿ ಇಟ್ಟಿದ್ದ ನಗದು, ಚಿನ್ನಾಭರಣಗಳು, ಬೆಳ್ಳಿವಸ್ತುಗಳು ಸೇರಿ ಬೆಲೆ ಬಾಳು ವಸ್ತುಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ನಾಪತ್ತೆಯಾಗಿರುವ ಸೆಕ್ಯೂರಿಗಾರ್ಡ್‌ ಕಳ್ಳತನ ಮಾಡಿ ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ ಎಂದು ನಾರಾಯಣಸ್ವಾಮಿ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಏನಿದು ಘಟನೆ? :

ಮಾಜಿ ಮೇಯರ್‌ ನಾರಾಯಣಸ್ವಾಮಿ ಮಧ್ಯಾಹ್ನ ಪ್ರಚಾರಕ್ಕೆ ತೆರಳಿದ್ದರು. ‌

ರಾತ್ರಿ ಮನೆಗೆ ವಾಪಸ್‌ ಬಂದು ನೋಡಿದಾಗ ಕಳ್ಳತನ ಬಳಕಿಗೆ

 4 ಲಕ್ಷ ರೂ. ನಗದು, 99 ಲಕ್ಷ ಮೌಲ್ಯದ ಚಿನ್ನಾಭರಣ, ವಾಚ್‌ಗಳು  ಕಳವು

ಮನೆಯಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ ಪಾರಾರಿ, ಮೊಬೈಲ್‌ ಸ್ವಿಚ್ಡ್ ಆಫ್

ತಮಿಳುನಾಡಿಗೆ ತೆರಳಿದ್ದ ನಾರಾಯಣಸ್ವಾಮಿ ಪತ್ನಿ, ಪುತ್ರಿ

Ad

ಟಾಪ್ ನ್ಯೂಸ್

America: ಕಾರು-ಮಿನಿ ಟ್ರಕ್‌ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ

America: ಕಾರು-ಮಿನಿ ಟ್ರಕ್‌ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ

ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ

ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ

ಮೈದುಂಬಿದೆ ಬೆಳ್ಕಲ್‌ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ

ಮೈದುಂಬಿದೆ ಬೆಳ್ಕಲ್‌ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

Tragedy: ಶಾಲಾ ಬಸ್ಸಿಗೆ ರೈಲು ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಮೃ*ತ್ಯು, ಹಲವರಿಗೆ ಗಾಯ

Tragedy: ಶಾಲಾ ಬಸ್ಸಿಗೆ ರೈಲು ಢಿಕ್ಕಿ… ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃ*ತ್ಯು

1

ಒಂದಾ ಸಿನಿಮಾ ಮಾಡಿ, ಇಲ್ಲಾ ಟಿವಿಯಲ್ಲೇ ಹೋಗಿ ಕೂತ್ಕೊಳಿ: ನಿರ್ಮಾಪಕ ಶ್ರೀನಿವಾಸ್‌

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಕರೆ ಮಾಡಲು ಕೊಟ್ಟ ಮೊಬೈಲ್‌ ವಾಪಸ್‌ ಕೇಳಿದ್ದಕ್ಕೆ ಹಲ್ಲೆ: ಬಂಧನ

Arrested: ಕರೆ ಮಾಡಲು ಕೊಟ್ಟ ಮೊಬೈಲ್‌ ವಾಪಸ್‌ ಕೇಳಿದ್ದಕ್ಕೆ ಹಲ್ಲೆ: ಬಂಧನ

ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ

ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ

Bengaluru: ವರದಕ್ಷಿಣೆ‌: ಡಿವೈಎಸ್ಪಿ ವಿರುದ್ಧ ಕೇಸ್‌

Bengaluru: ವರದಕ್ಷಿಣೆ‌: ಡಿವೈಎಸ್ಪಿ ವಿರುದ್ಧ ಕೇಸ್‌

High Court: ಗಾರ್ಡನ್‌ ಅಲ್ಲ, ಫ್ಲೆಕ್ಸ್‌ ಸಿಟಿ: ಹೈಕೋರ್ಟ್‌ ಚಾಟಿ

High Court: ಗಾರ್ಡನ್‌ ಅಲ್ಲ, ಫ್ಲೆಕ್ಸ್‌ ಸಿಟಿ: ಹೈಕೋರ್ಟ್‌ ಚಾಟಿ

Arrested: ಜನರಿಗೆ ಧಮ್ಕಿ: ನಕಲಿ ಪೊಲೀಸ್‌ ಅಧಿಕಾರಿ ಸೆರೆ

Arrested: ಜನರಿಗೆ ಧಮ್ಕಿ: ನಕಲಿ ಪೊಲೀಸ್‌ ಅಧಿಕಾರಿ ಸೆರೆ

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

America: ಕಾರು-ಮಿನಿ ಟ್ರಕ್‌ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ

America: ಕಾರು-ಮಿನಿ ಟ್ರಕ್‌ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ

Arrested: ಕರೆ ಮಾಡಲು ಕೊಟ್ಟ ಮೊಬೈಲ್‌ ವಾಪಸ್‌ ಕೇಳಿದ್ದಕ್ಕೆ ಹಲ್ಲೆ: ಬಂಧನ

Arrested: ಕರೆ ಮಾಡಲು ಕೊಟ್ಟ ಮೊಬೈಲ್‌ ವಾಪಸ್‌ ಕೇಳಿದ್ದಕ್ಕೆ ಹಲ್ಲೆ: ಬಂಧನ

ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ

ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ

Bengaluru: ವರದಕ್ಷಿಣೆ‌: ಡಿವೈಎಸ್ಪಿ ವಿರುದ್ಧ ಕೇಸ್‌

Bengaluru: ವರದಕ್ಷಿಣೆ‌: ಡಿವೈಎಸ್ಪಿ ವಿರುದ್ಧ ಕೇಸ್‌

High Court: ಗಾರ್ಡನ್‌ ಅಲ್ಲ, ಫ್ಲೆಕ್ಸ್‌ ಸಿಟಿ: ಹೈಕೋರ್ಟ್‌ ಚಾಟಿ

High Court: ಗಾರ್ಡನ್‌ ಅಲ್ಲ, ಫ್ಲೆಕ್ಸ್‌ ಸಿಟಿ: ಹೈಕೋರ್ಟ್‌ ಚಾಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.