ಧಾರವಾಡ: ಅಮೃತ ಗ್ರಾಮ ಪಂಚಾಯಿತಿ ಬೀರವಳ್ಳಿ
ಹೋಳಿ ಹಬ್ಬಗಳನ್ನು ವಿಭಿನ್ನವಾಗಿ ಭ್ರಾತೃತ್ವದ ಮನೋಭಾವನೆಯಿಂದ ಸಂಘಟಿತರಾಗಿ ಆಚರಿಸಲಾಗುತ್ತಿದೆ.
Team Udayavani, Feb 9, 2023, 12:49 PM IST
ಬೀರವಳ್ಳಿ ಗ್ರಾಮ ಪಂಚಾಯಿತಿಯು ಸರಕಾರದಿಂದ ಆಯ್ಕೆಗೊಂಡ ಅಮೃತ ಗ್ರಾಮ ಪಂಚಾಯಿತಿ ಎಂದು ಪುರಸ್ಕರಿಸಲ್ಪಟ್ಟಿದ್ದು, ಗ್ರಾ.ಪಂ. ವ್ಯಾಪ್ತಿಯಾದ್ಯಂತ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಸ್ವತ್ಛತೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅದನ್ನು ಕಾರ್ಯರೂಪಕ್ಕೆ ತರಲು ಗ್ರಾ.ಪಂ. ಅಧಿಕಾರಿಗಳು, ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗದವರು ಹಗಲಿರುಳು ಶ್ರಮಿಸುತ್ತಿದ್ದಾರೆ.
ಬೀರವಳ್ಳಿ ಗ್ರಾಮ ಪಂಚಾಯಿತಿ ಧಾರವಾಡ ಜಿಲ್ಲಾ ಕೇಂದ್ರದಿಂದ 55ಕಿ.ಮೀ ದೂರದಲ್ಲಿ ಹಾಗೂ ಕಲಘಟಗಿ ತಾಲೂಕು ಕೇಂದ್ರದಿಂದ 22ಕಿ.ಮೀ ದೂರವಿದ್ದು,ಇದು ತಬಕದಹೊನ್ನಳ್ಳಿ ಹೋಬಳಿಗೆ ಸೇರುತ್ತದೆ. 1987-88ನೇ ಸಾಲಿನಲ್ಲಿ ಬೀರವಳ್ಳಿ ಗ್ರಾಮ ಪಂಚಾಯಿತಿ ತಬಕದಹೊನ್ನಳ್ಳಿ ಮತ್ತು ವ್ಯಾಪ್ತಿಯ ಆಸ್ತಕಟ್ಟಿ ಗ್ರಾಮ ಬಮ್ಮಿಗಟ್ಟಿ ಮಂಡಳ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತಿತ್ತು. ಪ್ರಸ್ತುತ ಈ ಗ್ರಾಮ ಪಂಚಾಯಿತಿಯು ಬೀರವಳ್ಳಿ, ಬೆಂಡಲಗಟ್ಟಿ, ಆಸ್ತಕಟ್ಟಿ ಗ್ರಾಮಗಳನ್ನು ಒಳಗೊಂಡಿರುತ್ತದೆ.
ಐತಿಹಾಸಿಕ ಹಿನ್ನೆಲೆ: ಬೀರವಳ್ಳಿ ಗ್ರಾಮ ಈ ಹಿಂದೆ ಕುಸ್ತಿ ಮತ್ತು ಸಾಹಸ ಕೃತ್ಯಗಳಿಗೆ ಹೆಸರಾಗಿದ್ದರಿಂದ ಈ ಗ್ರಾಮವನ್ನು ವೀರಹಳ್ಳಿ ಎಂದು ಕರೆಯುತ್ತಿದ್ದರು. ಮುಂದುವರಿದು ಆಡು ಭಾಷೆಯಲ್ಲಿ ಬೀರವಳ್ಳಿ ಎಂದು ಕರೆಯಲ್ಪಡುವ ಈ ಗ್ರಾಮ ಪಶ್ಚಿಮ ಘಟ್ಟದ ಸೆರಗಿನಂಚಿನಲ್ಲಿ ಬರುವ ಮಲೆನಾಡಿನ ಗ್ರಾಮವಾಗಿದೆ.
ಕೆಂಡದೋಕುಳಿ: ಬೀರವಳ್ಳಿ ಗ್ರಾಮದಲ್ಲಿ ಜಗತøಸಿದ್ಧ ಶ್ರೀ ಕಲ್ಮೇಶ್ವರ ದೇವರ ಜಾತ್ರಾ ಮಹೋತ್ಸವವು ಉತ್ತರ ಕರ್ನಾಟಕದಾದ್ಯಂತದ ಭಕ್ತಸಮೂಹವನ್ನು ಸೆಳೆಯುತ್ತಿದ್ದು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳವರು ಜಾತ್ರಾ ಸಮಯದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುವುದರ ಜೊತೆಗೆ ತಮ್ಮ ಅಭಿಲಾಷೆಗಳನ್ನು ಈಡೇರಿಸುವ ಶ್ರೀ ಕಲ್ಮೇಶ್ವರ ಎಂಬ ನಂಬಿಕೆಯಲ್ಲಿದ್ದಾರೆ. ಮಹೋತ್ಸವದ ಅಂಗವಾಗಿ ನಡೆಯುವ ಕೆಂಡದೋಕುಳಿಯು ಗ್ರಾಮಕ್ಕೆ ಜಗತøಸಿದ್ಧಿಯನ್ನು ತಂದುಕೊಟ್ಟಿದ್ದು, ಇಲ್ಲಿಯವರೆಗೂ ಸಾಂಸ್ಕೃತಿಕ ಹಾಗೂ ಧಾರ್ಮಿಕವಾದ ನಂಬಿಕೆಯನ್ವಯ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಅಲ್ಲದೇ ಗ್ರಾ.ಪಂ. ವ್ಯಾಪ್ತಿಯ ಮೂರೂ ಗ್ರಾಮಗಳಲ್ಲಿನ ಪ್ರತಿಯೊಂದು ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜೊತೆಯಲ್ಲಿ ದಸರಾ, ಗಣೇಶೋತ್ಸವ ಮತ್ತು ಹೋಳಿ ಹಬ್ಬಗಳನ್ನು ವಿಭಿನ್ನವಾಗಿ ಭ್ರಾತೃತ್ವದ ಮನೋಭಾವನೆಯಿಂದ ಸಂಘಟಿತರಾಗಿ ಆಚರಿಸಲಾಗುತ್ತಿದೆ.
ತಾಲೂಕು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರಾದಿಯಾಗಿ ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು ಮತ್ತು ಗ್ರಾಮಸ್ಥರ ಸಹಕಾರದ ಪ್ರತಿಫಲವಾಗಿ 75ನೇ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ ಕರ್ನಾಟಕ ಸರಕಾರವು ಅಮೃತ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಯ ಪುರಸ್ಕಾರ ಲಭಿಸಿದೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಸ್.ಬಿ. ಸುಬರಗಟ್ಟಿ ಸಂತಸ ವ್ಯಕ್ತಪಡಿಸುತ್ತಾರೆ.
ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಯಡಿ ಅಂಗನವಾಡಿಗಳ ರಕ್ಷಣಾ ಗೋಡೆ, ಗ್ರಂಥಾಲಯ, ಸರಕಾರಿ ಶಾಲೆಗಳ ಮೈದಾನ ಹಾಗೂ ಶಾಲಾ ರಕ್ಷಣಾ ಗೋಡೆ, ಕಸ ವಿಲೇವಾರಿ ಘಟಕ, ಬೂದು ನೀರು ನಿರ್ವಹಣೆಯಂತಹ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಗ್ರಾ.ಪಂ. ವ್ಯಾಪ್ತಿಯಾದ್ಯಂತ ಸ್ವತ್ಛತೆ ಮತ್ತು ಸೌಂದರ್ಯೀಕರಣದ ಪರ್ವ ತೋರಿ ಬರುತ್ತಲಿದೆ.
ಗ್ರಾಮಗಳ ಮೆರಗನ್ನು ಮತ್ತು ಹಿರಿಮೆಯನ್ನು ಹೆಚ್ಚಿಸಲು ಈ ಕೆಳಕಂಡ ಕಾಮಗಾರಿಗಳು ಸಹಕಾರಿಯಾಗಿವೆ
*ಬೀರವಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯ.
*ಬೀರವಳ್ಳಿ ಗ್ರಾಮ ಪಂಚಾಯಿತಿ ಸಾರ್ವಜನಿಕ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ.
*ಆಸ್ತಕಟ್ಟಿ ಗ್ರಾಮದ ಮೈದಾನಕ್ಕೆ ಮೆಟ್ಟಿಲುಗಳ ನಿರ್ಮಾಣ, ಆಸ್ತಕಟ್ಟಿ ಪ್ರಾಥಮಿಕ ಶಾಲೆಗೆ ಮೂಲ ಸೌಕರ್ಯ.
*ಬೆಂಡಲಗಟ್ಟಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಮೈದಾನಕ್ಕೆ ರಕ್ಷಣಾ ಗೋಡೆ ನಿರ್ಮಾಣ.
*ಬೀರವಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಮೂಲಭೂತ ಸೌಕರ್ಯ.
*ಬೀರವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿದಿನ ಕಸ ಸಂಗ್ರಹಣೆ ಮತ್ತು ವಿಲೇವಾರಿ.
*292 ಬೀದಿದೀಪಗಳ ನಿರ್ವಹಣೆ.
*ಬೆಂಡಲಗಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲ ಸೌಕರ್ಯ.
*ಗ್ರಾ.ಪಂ. ವ್ಯಾಪ್ತಿಯ 6 ಅಂಗನವಾಡಿಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವುದರೊಂದಿಗೆ ಮುದ್ದು ಮಕ್ಕಳಿಗೆ ಕುಳಿತುಕೊಳ್ಳಲು ಆಸನ ಮತ್ತು ಟೇಬಲ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರೆಲ್ಲರ ಶ್ಲಾಘನೆಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮನೆ ಕಳ್ಳತನದ ಆರೋಪಿ ಬಂಧನ : 11.18 ಲಕ್ಷ ಮೌಲ್ಯದ ಚಿನ್ನಾಭರಣ ವಶ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ಬೊಂಬೆ ನುಡಿಯಿತು ಭವಿಷ್ಯ!
ಎಲ್ಲಾ ಗೌರವ ಸ್ಥಾನಮಾನ ಕೊಟ್ಟರೂ ಚಿಂಚನಸೂರು ಕಾಂಗ್ರೆಸ್ ಗೆ ಹೋದರು; ಸಿಎಂ ಬೊಮ್ಮಾಯಿ
ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಕ್ಷೇತ್ರವೇ ಸಿಗುತ್ತಿಲ್ಲವೆಂದರೆ… ನಿರಾಣಿ ವ್ಯಂಗ್ಯ
ಬೋಗಸ್ ಕಾರ್ಡ್ ಗಳ ಬಿಡುಗಡೆ ಸರಣಿ ಆರಂಭ : ಸಿಎಂ ಬೊಮ್ಮಾಯಿ ಲೇವಡಿ
MUST WATCH
ಹೊಸ ಸೇರ್ಪಡೆ
ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ
ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಬಾಲಕ ಮೃತ್ಯು
ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ
ನೇಕಾರ ಸಮ್ಮಾನ್ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ
ಮಂಗಳೂರು/ಉಡುಪಿ: ಬಿಸಿಲ ನಡುವೆಯೂ ಪ್ರವಾಸಿಗರ ದಂಡು, ಚಾರಣಕ್ಕೆ ಸದ್ಯ ಅವಕಾಶವಿಲ್ಲ