ಅಂಗನವಾಡಿಯಲ್ಲೂ ಇಂಗ್ಲಿಷ್‌ ಕಲಿಕೆ

ಕುಂದಗೋಳ ತಾಲೂಕು ಯರಗುಪ್ಪಿ ವಲಯದಲ್ಲಿ ವಿಶೇಷ ಪ್ರಯತ್ನ

Team Udayavani, Mar 15, 2022, 11:08 AM IST

1

ಹುಬ್ಬಳ್ಳಿ: ಮಕ್ಕಳಿಗೆ ಒಂದಿಷ್ಟು ಅಕ್ಷರ ಪರಿಚಯ, ಆಟ, ತಿಂಡಿ ತಿನಿಸು, ಸರಕಾರಿ ಯೋಜನೆಗಳ ಕಾರ್ಯಗಳಿಗೆ ಅಂಗನವಾಡಿ ಕೇಂದ್ರಗಳು ಸೀಮಿತವಾಗಿವೆ. ಆದರೆ ಇವೆಲ್ಲದರ ನಡುವೆಯೂ ಮಕ್ಕಳಿಗೆ ಖಾಸಗಿ ನರ್ಸರಿಗಳ ಮಾದರಿಯಲ್ಲಿ ಮಕ್ಕಳಿಗೆ ಇಂಗ್ಲಿಷ್‌ ಕಲಿಸಬೇಕೆನ್ನುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ವಲಯ ಮೇಲ್ವಿಚಾರಕಿಯೊಬ್ಬರು ಇದರ ರೂವಾರಿಯಾಗಿದ್ದು, ಈ ಪ್ರಯತ್ನಕ್ಕೆ ವಲಯ ವ್ಯಾಪ್ತಿಯ ಕಾರ್ಯಕರ್ತೆಯರು ಕೈ ಜೋಡಿಸಿದ್ದಾರೆ.

ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು (ಎಲ್‌ಕೆಜಿ/ಯುಕೆಜಿ) ಆರಂಭಿಸಿದರೆ ಅಂಗನವಾಡಿ ಕೇಂದ್ರಗಳ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎನ್ನುವ ಆತಂಕ ಶುರುವಾಗಿದೆ. ಹೀಗಾಗಿ ಸರಕಾರ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ ಕೆಜಿ/ಯುಕೆಜಿ ಆರಂಭಿಸಬೇಕೆನ್ನುವುದು ಕಾರ್ಯಕರ್ತೆಯರ ಒತ್ತಡವಾಗಿದೆ. ಬಹುತೇಕ ಕಾರ್ಯಕರ್ತೆಯರ ಶಿಕ್ಷಣ ಹಾಗೂ ಪೂರಕ ತರಬೇತಿ ಕೊರತೆಯಿಂದ ಇವರ ಮೂಲಕ ಸಾಧ್ಯವೇ ಎನ್ನುವ ಅಭಿಪ್ರಾಯ, ಸರಕಾರದ ಚಿಂತನೆ. ಆದರೆ ಅಂಗನವಾಡಿ ಕೇಂದ್ರಗಳನ್ನು ಉಳಿಸಿಕೊಳ್ಳಬೇಕು ಮತ್ತಷ್ಟು ಗಟ್ಟಿಗೊಳಿಸಬೇಕೆನ್ನುವ ನಿಟ್ಟಿನಲ್ಲಿ ಕುಂದಗೋಳ ತಾಲೂಕಿನ ಯರಗುಪ್ಪಿ ವಲಯದ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ರಾಜೇಶ್ವರಿ ಬಡಿಗೇರ ಅವರು ಅಂಗನವಾಡಿ ಕೇಂದ್ರಗಳಲ್ಲಿಯೇ ಮಕ್ಕಳಿಗೆ ಇಂಗ್ಲಿಷ್‌ ಬೋಧನೆ ದೊರೆಯಬೇಕೆನ್ನುವ ನಿಟ್ಟಿನಲ್ಲಿ ಸ್ವ ಇಚ್ಚೆಯಿಂದ ಕಾರ್ಯಾರಂಭ ಮಾಡಿದ್ದಾರೆ. ವಲಯ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸಾಕಾರಗೊಳಿಸಲು ಮುಂದಾಗಿದ್ದಾರೆ.

ನಿತ್ಯವೂ ಇಂಗ್ಲಿಷ್‌ ಪಾಠ: ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ, ತಿಂಡಿ-ತಿನಿಸು, ಪಾಲನೆ, ಭಾಗ್ಯಲಕ್ಷ್ಮಿ, ಮಾತೃವಂದನಾದಂತಹ ಯೋಜನೆಗಳಲ್ಲಿ ದಿನ ಪೂರ್ಣಗೊಳಿಸುತ್ತಾರೆ. ಇದರೊಂದಿಗೆ ಕೋವಿಡ್‌, ಪಲ್ಸ್‌ ಪೋಲಿಯೋದಂತಹ ಕಾರ್ಯಕ್ರಮಗಳು. ತಾಲೂಕು, ಹೋಬಳಿ ಸಭೆಗಳು ಇಂತಹ ಕಾರ್ಯಗಳೊಂದಿಗೆ ಯರಗುಪ್ಪಿ ವಲಯದ ಕಾರ್ಯಕರ್ತೆಯರು ಕಳೆದ ಐದು ತಿಂಗಳಿಂದ ಇಂಗ್ಲಿಷ್‌ ಕಲಿಕೆಯಲ್ಲಿ ನಿರತರಾಗಿದ್ದಾರೆ. ಶಾಲಾ ಪೂರ್ವ ಶಿಕ್ಷಣಕ್ಕೆ ಪೂರಕವಾಗಿ ವ್ಯಾಕರಣ, ಸಣ್ಣ ಪುಟ್ಟ ವಾಕ್ಯ ರಚನೆ, ಸಂಭಾಷಣೆಗೆ ಬೇಕಾದ ವಾಕ್ಯ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರಲ್ಲಿ ಸಂವಹನ ಕೌಶಲ ಮೂಡಿಸಲಾಗುತ್ತಿದೆ. ಇದಕ್ಕೊಂದು ವಾಟ್ಸ್ಆ್ಯಪ್‌ ಗ್ರೂಪ್‌ ರಚಿಸಿದ್ದು, ನಿತ್ಯ ನಡೆದ ಪಾಠಗಳಿಗೆ ಪೂರಕವಾಗಿ ಹೋಂ ವರ್ಕ್‌ ನೀಡಲಾಗುತ್ತಿದೆ. ಮಾಡಿದ ಹೋಂ ವರ್ಕ್‌ನ್ನು ಗ್ರೂಪ್‌ಗೆ ಹಾಕಬೇಕು. ಪ್ರತಿ ರವಿವಾರ ಜೂಂ ಮೀಟಿಂಗ್‌ ಮೂಲಕ ಕಲಿಕೆ. ಗ್ರುಪ್‌ ನಲ್ಲಿ ಇಂಗ್ಲಿಷ್‌ನಲ್ಲಿಯೇ ಸಂವಹನ ನಡೆಸುತ್ತಿರುವುದು ವಿಶೇಷ.

 ಉಪನ್ಯಾಸಕಿಯ ಕನಸು: ಯರಗುಪ್ಪಿ ವಲಯ ವ್ಯಾಪ್ತಿಯಲ್ಲಿ 23 ಅಂಗನವಾಡಿ ಕೇಂದ್ರಗಳಿದ್ದು, ಈ ವಲಯದ ಮೇಲ್ವಿಚಾರಕಿಯಾಗಿರುವ ರಾಜೇಶ್ವರಿ ಬಡಿಗೇರ ಅವರು ಈ ಕಾರ್ಯದ ರೂವಾರಿಯಾಗಿದ್ದಾರೆ. ಇಂಗ್ಲಿಷ್‌ ಎಂಎ, ಬಿಎಡ್‌ ಪೂರೈಸಿ ಕಾಲೇಜು ಉಪನ್ಯಾಸಕರಾಗಬೇಕೆಂದು ಕನಸು ಕಂಡಿದ್ದ ಇವರು 10 ವರ್ಷ ಖಾಸಗಿ ಶಾಲೆಗಳಲ್ಲಿ ಸಿಬಿಎಸ್‌ಇ ಪಠ್ಯ ಶಿಕ್ಷಣ ನೀಡಿದ್ದಾರೆ. ಈಗ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಹುದ್ದೆಯಲ್ಲಿ ತೊಡಗಿದ್ದಾರೆ. ಇದೇ ಹುದ್ದೆಯಲ್ಲೂ ಬೋಧನಾ ವೃತ್ತಿ ಕಂಡುಕೊಳ್ಳಬಹುದು ಎಂದು ನಿರ್ಧರಿಸಿ ಅಂಗನವಾಡಿ ಕಾರ್ಯಕರ್ತೆಯರನ್ನು ಸಜ್ಜುಗೊಳಿಸಿ ಮಕ್ಕಳಿಗೆ ಇಂಗ್ಲಿಷ್‌ ಕಲಿಸಬಹುದು ಎನ್ನುವ ಸಕಾರಾತ್ಮಕ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಸರಕಾರ ಎಲ್ಲಾ ಸೌಲಭ್ಯ ನೀಡಿ ಗ್ರಾಮೀಣ ಭಾಗದಲ್ಲಿ ಶಾಲಾ ಪೂರ್ವ ಶಿಕ್ಷಣ ಒದಗಿಸುವಲ್ಲಿ ಅಂಗನವಾಡಿ ಕೇಂದ್ರಗಳು ಯಶಸ್ವಿಯಾಗಿವೆ. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಈ ಕೇಂದ್ರಗಳಲ್ಲಿ ಇಂಗ್ಲಿಷ್‌ ಕಲಿಕೆಗೆ ಕೈಗೊಂಡಿರುವ ಈ ಕಾರ್ಯ ಗ್ರಾಮಸ್ಥರಲ್ಲೂ ಕೂಡ ಸಂತಸ ಮೂಡಿಸಿದ್ದು, ಅಂಗನವಾಡಿ ಕೇಂದ್ರಗಳಿಗೆ ಅಗತ್ಯವಿರುವ ವ್ಯವಸ್ಥೆ ಕಲ್ಪಿಸಲು ದಾನಿಗಳು ನೆರವಿನ ಹಸ್ತ ಚಾಚಲು ಪ್ರೇರಣೆ ನೀಡಿದೆ.

ಡಾಲ್ಫಿನ್‌ ಕಿಟ್‌ ಮೂಲಕ ಬೋಧನೆ: ಅಂಗನವಾಡಿ ಮಕ್ಕಳಿಗೂ ತಾಂತ್ರಿಕವಾಗಿ ಪಾಠ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ. ಖಾಸಗಿ ಶಾಲೆಗಳ ನರ್ಸರಿ, ಪೂರ್ವ ಪ್ರಾಥಮಿಕ ಶಾಲೆಯಲ್ಲಿರುವ ಡಾಲ್ಫಿನ್‌ ಕಿಟ್‌ನ್ನು ತಮ್ಮ ವಲಯ ವ್ಯಾಪ್ತಿಯ ಕೇಂದ್ರಗಳಿಗೆ ತರಿಸಬೇಕೆನ್ನುವ ಪ್ರಯತ್ನ ಈಡೇರಿದೆ. ಅಲ್ಲಾಪುರ ಗ್ರಾಮದ ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ರಡ್ಡೇರ ಅವರಿಗೆ ಡಾಲ್ಫಿನ್‌ ಕಿಟ್‌ ಪ್ರಾಮುಖ್ಯತೆ ತಿಳಿಸಿದಾಗ ದಾನಿಗಳ ನೆರವಿನಿಂದ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಖರೀದಿಸಲಾಗಿದೆ. ಈ ಕಿಟ್‌ ಮೂಲಕ ಅಲ್ಲಿನ ಕೇಂದ್ರದ ಕಾರ್ಯಕರ್ತೆ ಮಕ್ಕಳಿಗೆ ಪಾಠ ಆರಂಭಿಸಿದ್ದಾರೆ. ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯಲ್ಲಿ ಚಿಕ್ಕಮಕ್ಕಳಿಗೆ ಕಲಿಕೆ ನಡೆಯುತ್ತಿದ್ದು, ಈ ಕಿಟ್‌ ಹೊಂದಿದ ಅಂಗನವಾಡಿ ಕೇಂದ್ರಗಳ ಪೈಕಿ ಇದು ಮೊದಲ ಪ್ರಯತ್ನವಾಗಿದೆ.

 

10 ವರ್ಷ ಸಿಬಿಎಸ್‌ ಶಿಕ್ಷಣ ಬೋಧಿಸಿದ ಅನುಭವ ಇತ್ತು. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕೆನ್ನುವ ತುಡಿತವಿತ್ತು. ಇದನ್ನು ಬಳಸಿಕೊಂಡು ಅಂಗನವಾಡಿ ಕೇಂದ್ರಗಳು ಕಾನ್ವೆಂಟ್‌ ಗಳಿಗಿಂತ ಕಡಿಮೆಯಿಲ್ಲ ಎನ್ನುವ ಮಟ್ಟಕ್ಕೆ ಕೊಂಡೊಯ್ಯಬೇಕು ಎನ್ನುವ ಪ್ರಯತ್ನವಿದು. ಮಕ್ಕಳಿಗೆ ಬೇಕಾದ ಶಾಲಾ ಪೂರ್ವ ಶಿಕ್ಷಣಕ್ಕೆ ಪೂರಕವಾಗಿ ನಿರಂತರವಾಗಿ ಕಲಿಕೆ ನಡೆಯುತ್ತಿದೆ. ಕಾರ್ಯಕರ್ತೆಯರು ಕಲಿಕೆಗೆ ಸಂಪೂರ್ಣ ಆಸಕ್ತಿ ತೋರುತ್ತಿರುವುದು ವಿಶೇಷ. ಈ ಕಾರ್ಯಕ್ಕೆ ಅಧಿಕಾರಿಗಳ ಪ್ರೋತ್ಸಾಹವಿದೆ.

ರಾಜೇಶ್ವರಿ ಬಡಿಗೇರ, ಮೇಲ್ವಿಚಾರಕಿ, ಶಿಶು ಅಭಿವೃದ್ಧಿ ಯೋಜನೆ

ಆರಂಭದಲ್ಲಿ ಒಂದಿಷ್ಟು ಹಿಂಜರಿಕೆಯಿತ್ತು. ನಿರಂತರ ಕಲಿಕೆಯಿಂದ ಸುಲಭವಾಗುತ್ತಿದೆ. ಇಂಗ್ಲಿಷ್‌ನಲ್ಲಿ ಸಣ್ಣ ಪುಟ್ಟ ವಾಕ್ಯ, ಶಬ್ದಗಳನ್ನು ಬಳಸಿ ಮಕ್ಕಳೊಂದಿಗೆ ಸಂವಹನ ಆರಂಭಿಸಿದ್ದೇವೆ. ಇದಕ್ಕೆ ಮಕ್ಕಳು ಕೂಡ ಪ್ರತಿಕ್ರಿಯೆ ನೀಡುವಷ್ಟರ ಮಟ್ಟಿಗೆ ಸಹಕಾರಿಯಾಗಿದೆ. ಈ ಮೇಡಂ ಬಂದ ಮೇಲೆ ಕೇಂದ್ರಗಳಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ನಮ್ಮಲ್ಲಿಯೂ ಕೂಡ ದಾನಿಗಳ ನೆರವಿನಿಂದ ಡಾಲ್ಫಿನ್‌ ಕಿಟ್‌ ಖರೀದಿಸುತ್ತಿದ್ದೇವೆ.

ಮಕ್ತಂಬಿ ಲತೀಬಖಾನವರ, ಅಂಗನವಾಡಿ ಕಾರ್ಯಕರ್ತೆ, ಹಿರೇನರ್ತಿ

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.