ದರ ಹೆಚ್ಚಳ: ಶೇ.50 ಕಟ್ಟಡ ಕಾಮಗಾರಿ ಸ್ಥಗಿತ

ಅಪಾರ್ಟ್‌ಮೆಂಟ್‌, ಖಾಲಿ ನಿವೇಶನಗಳ ಖರೀದಿ ಮೇಲೂ ಕರಿಛಾಯೆ

Team Udayavani, Mar 31, 2022, 10:04 AM IST

1

ಹುಬ್ಬಳ್ಳಿ: ಕೋವಿಡ್‌ ಸಂಕಷ್ಟ-ಲಾಕ್‌ಡೌನ್‌ ಶಾಕ್‌ನಿಂದ ಸುಧಾರಿಸಿಕೊಳ್ಳುವುದರೊಳಗೆ ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆ ಹೊಡೆತಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ ಶೇ.50 ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದ್ದು, ಅಪಾರ್ಟ್‌ಮೆಂಟ್‌, ಖಾಲಿ ನಿವೇಶನಗಳ ಖರೀದಿ ಮೇಲೂ ಕರಿಛಾಯೆ ಆವರಿಸಿದೆ. ಈ ಹಿಂದೆ ಹೂಡಿಕೆ ಉದ್ದೇಶದೊಂದಿಗೆ ಹೆಚ್ಚಿನವರು ನಿವೇಶನ ಖರೀದಿಸುತ್ತಿದ್ದರು. ಇದೀಗ ಅದು ಗಣನೀಯವಾಗಿ ಕುಸಿದಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ತನ್ನದೇ ಮಹತ್ವ ಪಡೆದಿತ್ತು. ಐಟಿ ಉದ್ಯಮ ಬರಲಿದೆ ಎಂಬ ಪ್ರಚಾರದೊಂದಿಗೆ ಹುಬ್ಬಳ್ಳಿ-ಧಾರವಾಡದಲ್ಲಿ ನಿವೇಶನ, ಮನೆ, ಅಪಾರ್ಟ್‌ಮೆಂಟ್‌ಗಳ ಬೆಲೆ ಜಿಗಿತಗೊಂಡಿತ್ತು. ಇದಾದ ನಂತರದಲ್ಲಿ ಒಂದಿಷ್ಟು ಏರಿಳಿತ ಕಾಣುತ್ತ ಸಾಗಿತ್ತಾದರೂ ಕೋವಿಡ್‌-ಲಾಕ್‌ಡೌನ್‌ ಶಾಕ್‌ನಿಂದ ಉದ್ಯಮ ತತ್ತರಿಸಿತ್ತು. ಇದರಿಂದ ಇನ್ನೇನು ಮೇಲೇಳಬೇಕು ಎನ್ನುವಾಗಲೇ ಇದೀಗ ಸಾಮಗ್ರಿ ದರ ಹೆಚ್ಚಳ ಬರೆ ಎಳೆದಂತಾಗಿದೆ.

ಸಾಮಗ್ರಿ ದರಗಳು ಗಗನಮುಖೀ: ಕಟ್ಟಡ ಸಾಮಗ್ರಿಗಳ ದರಗಳು ಗಗನಮುಖೀಯಾಗಿವೆ.ಕಬ್ಬಿಣ ಹಾಗೂ ಸಿಮೆಂಟ್‌ನಲ್ಲಿ ಇಂದು ಇದ್ದ ದರ ನಾಳೆ ಇಲ್ಲ. ಬೆಳಿಗ್ಗೆ ಇದ್ದ ದರ ಸಂಜೆ ವೇಳೆಗೆ ಇಲ್ಲ ಎನ್ನುವಂತಾಗಿದೆ. ಕಟ್ಟಡ ಸಾಮಗ್ರಿಗಳ ದರದಲ್ಲಿ ಶೇ.9ರಿಂದ ಶೇ.113 ದರ ಹೆಚ್ಚಳವಾಗಿದೆ. ಕಳೆದ ಎರಡು ವರ್ಷಗಳಿಂದ ಕಟ್ಟಡ ಸಾಮಗ್ರಿಗಳ ಬೆಲೆ ಹೆಚ್ಚಳವಾಗುತ್ತಲೇ ಸಾಗಿದೆ. ಆದರೆ ಕೋವಿಡ್‌ ನಂತರದಲ್ಲಿ ದರದ ಏರುಮುಖ ತೀವ್ರವಾಗಿದೆ. ಉಕ್ರೇನ್‌-ರಷ್ಯಾ ಯುದ್ಧದ ನೆಪದಲ್ಲಿ ಇವುಗಳ ದರ ಅಂಕೆಗೆ ಸಿಗದ ರೀತಿಯಲ್ಲಿ ಸಾಗತೊಡಗಿದೆ.

ಕೆಲ ದಿನಗಳ ಹಿಂದೆಯಷ್ಟೇ ಕಬ್ಬಿಣ ದರ ಒಂದು ಕೆ.ಜಿ.ಗೆ 40 ರೂ. ಇದ್ದದ್ದು ಇದೀಗ 85ರಿಂದ 90 ರೂ.ಗೆ ಹೆಚ್ಚಳವಾಗಿದೆ. ಶೇ.113 ಹೆಚ್ಚಳ ಕಂಡಿದೆ. ಅದೇ ರೀತಿ ಕಟ್ಟಡಕ್ಕೆ ಅಳವಡಿಸುವ ನೀರು ಪೂರೈಕೆ ಜೋಡಣೆ ಸಾಮಗ್ರಿಗಳ ದರ ಶೇ.110 ಹೆಚ್ಚಳವಾಗಿದೆ. ಸಿಮೆಂಟ್‌ ಒಂದು ಚೀಲಕ್ಕೆ 270 ರೂ. ಇದ್ದದ್ದು 365 ರೂ.ಗೆ ಹೆಚ್ಚುವ ಮೂಲಕ ಶೇ.35 ಹೆಚ್ಚಳವಾಗಿದೆ. ಮರಳು ಶೇ.25, ಸ್ಯಾನಿಟರಿ ಸಾಮಗ್ರಿಗಳು ಶೇ.55, ಗ್ರಿಲ್‌ಗ‌ಳು ಶೇ.67 ಹೀಗೆ ವಿವಿಧ ಬೆಲೆಗಳು ಹೆಚ್ಚಳವಾಗಿದೆ.

ಹೊಸ ಕಾಮಗಾರಿ ಆರಂಭಕ್ಕೆ ಅಡ್ಡಿ: ದಿಢೀರನೇ ಸಾಮಗ್ರಿಗಳ ಬೆಲೆ ಹೆಚ್ಚಳದಿಂದ ಕಟ್ಟಡಗಳ ನಿರ್ಮಾಣದ ಮೇಲೆ ಸಾಕಷ್ಟು ಪರಿಣಾಮ ಬೀರತೊಡಗಿದೆ. ಇದರಿಂದ ಹುಬ್ಬಳ್ಳಿ-ಧಾರವಾಡದಲ್ಲಿ ಶೇ.50 ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದ್ದರೆ, ಹೊಸ ಯೋಜನೆ ಕಾಮಗಾರಿಗಳು ಆರಂಭಗೊಳ್ಳದೆ ಮುಂದೂಡಿಕೆಯಾಗುತ್ತಿವೆ.

ಹೊಸ ಕಾಮಗಾರಿ ಆರಂಭಿಸುವವರು ದುಬಾರಿ ಸಾಮಗ್ರಿಗಳನ್ನು ಖರೀದಿಸಿ ಅಧಿಕ ವೆಚ್ಚದೊಂದಿಗೆ ನಿರ್ಮಾಣ ಕಾರ್ಯದ ಬದಲು ಇನ್ನು ಮೂರ್‍ನಾಲ್ಕು ತಿಂಗಳು ಕಾಯ್ದು ನೋಡೋಣ ಒಂದಿಷ್ಟು ದರ ಇಳಿಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

ಈಗಾಗಲೇ ಅಪಾರ್ಟ್‌ಮೆಂಟ್‌, ಸ್ವಂತ ಮನೆ, ವಿವಿಧ ಕಟ್ಟಡಗಳ ನಿರ್ಮಾಣ ಕೈಗೊಂಡವರು ಪೇಚಾಡುವ ಸ್ಥಿತಿಯಲ್ಲಿದ್ದಾರೆ. ಹಳೆ ದರಕ್ಕೆ ಸಾಮಗ್ರಿ ಖರೀದಿ ಮಾಡಿಟ್ಟುಕೊಂಡವರು ಇಲ್ಲವೆ ಒಡಂಬಡಿಕೆ ಮಾಡಿಕೊಂಡವರು ಕಾಮಗಾರಿ ಮುಂದುವರಿಸಿದ್ದರೆ, ಅಗತ್ಯವಿರುವಷ್ಟು ಸಾಮಗ್ರಿ ಸಂಗ್ರಹಿಸದೆ ಬೇಕಾದಾಗಲೆಲ್ಲ ಖರೀದಿಸಿದ ರಾಯಿತು ಎಂದುಕೊಂಡವರು ಇದೀಗ ಕಾಮಗಾರಿಯನ್ನೇ ಸ್ಥಗಿತಗೊಳಿಸಬೇಕಾಗಿದೆ.ಒಟ್ಟಾರೆ ಕಟ್ಟಡ ಸಾಮಗ್ರಿಗಳ ದರದಲ್ಲಿ ಸರಾಸರಿ ಶೇ.45 ಹೆಚ್ಚಾಗಿದ್ದು, ಅಪಾರ್ಟ್‌ಮೆಂಟ್‌, ಮನೆ ಇಲ್ಲವೆ ಕಟ್ಟಡ ಅಂದುಕೊಂಡ ವೆಚ್ಚಕ್ಕಿಂತ ಶೇ.50 ಹೆಚ್ಚಿನ ಹಣ ವ್ಯಯಿಸಬೇಕಾಗಿದೆ.

ಕೆಲವೊಬ್ಬರು ಮಾಡಿಕೊಂಡ ಒಪ್ಪಂದವನ್ನೇ ಮುರಿದುಕೊಳ್ಳುವ ಸ್ಥಿತಿಗೆ ತಲುಪತೊಡಗಿದ್ದಾರೆ. ಹೊಸದಾಗಿ ರಿಯಲ್‌ ಎಸ್ಟೇಟ್‌ ಉದ್ಯಮಕ್ಕಿಳಿದವರು, ಪ್ರಯೋಗಕ್ಕೆಂದು ಕಟ್ಟಡ ನಿರ್ಮಾಣ ಉದ್ಯಮಕ್ಕೆ ಬಂದವರು, ಸಾಲ ತಂದು ಈ ಉದ್ಯಮಕ್ಕೆ ಹಾಕಿ ಕಟ್ಟಿದ ಕಟ್ಟಡ ಮಾರಾಟವಾಗಿ ಹೇಗೋ ತಂದ ಸಾಲ ತೀರುತ್ತದೆ, ಕೈಗೊಂದಿಷ್ಟು ಹಣ ಉಳಿಯುತ್ತದೆ ಎಂದು ಭಾವಿಸಿದವರು ಇದೀಗ ಪರದಾಡುವಂತಾಗಿದೆ. ಗಂಟಲಕ್ಕಿಳಿದ ಬಿಸಿತುಪ್ಪದ ಸ್ಥಿತಿಯಲ್ಲಿದ್ದಾರೆ.

ಮಧ್ಯಮ ವರ್ಗದವರಿಗೆ ಸಂಕಷ್ಟ: ತಲೆಗೊಂದು ಸ್ವಂತ ಸೂರು ಹೊಂದಿರಬೇಕೆಂಬ ಆಸೆ ಬಹುತೇಕರ ದ್ದಾಗಿರುತ್ತದೆ. ಅದರಲ್ಲೂ ಮಧ್ಯಮ ವರ್ಗದವರು, ನೌಕರರು ತಮ್ಮ ವೇತನ, ಆದಾಯಕ್ಕನುಗುಣವಾಗಿ ಕನಸಿನ ಮನೆ ಹೊಂದುವ ಯತ್ನಕ್ಕೆ ಮುಂದಾಗುತ್ತಾರೆ. ಬ್ಯಾಂಕ್‌, ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡಿ ಮನೆ ನಿರ್ಮಾಣಕ್ಕೆ ಮುಂದಾಗುತ್ತಾರೆ. ಇದೀಗ ಕಟ್ಟಡ ಸಾಮಗ್ರಿಗಳ ದರ ಹೆಚ್ಚಳ ಎಲ್ಲ ಲೆಕ್ಕಾಚಾರವನ್ನೇ ಬುಡಮೇಲು ಮಾಡತೊಡಗಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು 750 ಚದರ ಅಡಿಗೆ ಅಂದಾಜು 25-35 ಲಕ್ಷ ರೂ.ಒಳಗೆ ಮುಗಿಯುತ್ತಿತ್ತು ಇದೀಗ ಅಷ್ಟೇ ಜಾಗದಲ್ಲ ಮನೆ ನಿರ್ಮಾಣಕ್ಕೆ 40-45 ಲಕ್ಷ ರೂ. ಆಗುತ್ತಿದ್ದು, ಹೆಚ್ಚಿನ ದರ ನೀಡಲು ಜನರು ಮುಂದಾಗಬೇಕು ಇಲ್ಲವೆ ಹಿಂದಿನ ದರ ಎಂದರೆ ನಿರ್ಮಾಣ ಪ್ರಮಾಣ ಕಡಿಮೆ ಮಾಡಬೇಕಾಗಿದೆ.

ಮತ್ತೂಂದು ಸಮಸ್ಯೆ ಎಂದರೆ ಮಧ್ಯಮ ವರ್ಗದವರು ತಮ್ಮ ಆದಾಯಕ್ಕೆ ಅನುಗುಣವಾಗಿ ಮನೆ ಖರೀದಿ, ನಿರ್ಮಾಣ ಯೋಜನೆಗೆ ಮುಂದಾಗುತ್ತಾರೆ. ದಿಢೀರನೆ ಸುಮಾರು 10ಲಕ್ಷ ರೂ.ನಷ್ಟು ವೆಚ್ಚದಲ್ಲಿ ಹೆಚ್ಚಳವಾದರೆ ಅದನ್ನು ಭರಿಸುವ ಇಲ್ಲವೆ ಸರಿದೂಗಿಸುವ ಸಾಮರ್ಥ್ಯ ಅವರಲ್ಲಿ ಇರಲ್ಲ. ಬಹುತೇಕರು ಮನೆ ಯೋಜನೆಯನ್ನೇ ಮುಂದೂಡುತ್ತಾರೆ ಇಲ್ಲವೆ ಕೈ ಬಿಡುತ್ತಾರೆ.

ಇನ್ನು ನೌಕರಿಯಲ್ಲಿದ್ದವರಿಗೆ ಬ್ಯಾಂಕ್‌ ನವರು ಅವರ ವಾರ್ಷಿಕ ವೇತನ ಆದಾರದಲ್ಲಿ ಇಂತಿಷ್ಟು ಎಂದು ಮನೆ ಸಾಲ ನೀಡುತ್ತಾರೆ. ವಾರ್ಷಿಕ ಸುಮಾರು 5-6 ಲಕ್ಷ ರೂ. ವೇತನ ಹೊಂದಿದವರಿಗೆ ಸಾಮಾನ್ಯವಾಗಿ ಬ್ಯಾಂಕ್‌ನವರು 30-35 ಲಕ್ಷ ರೂ.ವರೆಗೆ ಮನೆ ಸಾಲ ನೀಡುತ್ತಾರೆ. ಮನೆ ಖರೀದಿ ವೆಚ್ಚದಲ್ಲಿ 10ಲಕ್ಷ ರೂ. ಹೆಚ್ಚಳವಾಗಿದ್ದು, ಬ್ಯಾಂಕ್‌ನವರು ನೀಡುವ ಸಾಲದಲ್ಲಿ ಹೆಚ್ಚಳ ಮಾಡಲ್ಲ. ನೌಕರಿದಾರ ದಿಢೀರನೆ 10 ಲಕ್ಷ ಹೊಂದಿಸುವುದು ಸಾಧ್ಯವಾಗದೆ ಮನೆ ಖರೀದಿಗೆ ಅಡ್ಡಿಯಾಗಲಿದೆ.

ನಿವೇಶನಗಳ ಮೇಲೆ ಹೂಡಿಕೆ ಕುಸಿತ: ಹುಬ್ಬಳ್ಳಿ – ಧಾರವಾಡದಲ್ಲಿ ಮೂರು ಹಂತದಲ್ಲಿ ಅಪಾರ್ಟ್‌ಮೆಂಟ್‌ಗಳು ಮಾರಾಟ ಆಗುತ್ತಿದ್ದವು. 25ರಿಂದ 35-40 ಲಕ್ಷ ರೂ.ವರೆಗೆ, 50-60 ಲಕ್ಷ ರೂ. ಹಾಗೂ 1 ಕೋಟಿ ರೂ. ಮೇಲಿನ ದರದಲ್ಲಿ ಅಪಾರ್ಟ್‌ ಮೆಂಟ್‌ಗಳಲ್ಲಿನ ಮನೆಗಳು ಮಾರಾಟ ಆಗುತ್ತಿದ್ದವು. 25-35 ಲಕ್ಷ ರೂ. ಒಳಗಿನ ಮನೆಗಳ ಖರೀದಿ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿತ್ತು. 50-60 ಲಕ್ಷ ರೂ. ಇದಕ್ಕಿಂತಲೂ ಕಡಿಮೆ ಇದ್ದು, 1 ಕೋಟಿ ರೂ. ಅಥವಾ ಅದಕ್ಕಿಂತ ಮೇಲ್ಪಟ್ಟ ಅಪಾರ್ಟ್‌ಮೆಂಟ್‌ ಗಳಲ್ಲಿ ಖರೀದಿ ಅತ್ಯಲ್ಪ ಎನ್ನಬಹುದು. ಕೋವಿಡ್‌ ನಂತರದಲ್ಲಿ 50-60 ಲಕ್ಷ ರೂ. ವೆಚ್ಚದ ಅಪಾರ್ಟ್‌ಮೆಂಟ್‌ ಹಾಗೂ 1 ಕೋಟಿ ರೂ. ಮೇಲ್ಪಟ್ಟವುಗಳ ಖರೀದಿಗೆ ಒಂದಿಷ್ಟು ಬೇಡಿಕೆ ಇದೆ ಆದರೆ ಅವುಗಳ ಖರೀದಿ ಅತ್ಯಂತ ಕಡಿಮೆ.

ಇನ್ನು ಖಾಲಿ ನಿವೇಶನಗಳ ಮೇಲೆ ಈ ಹಿಂದೆ ಹೆಚ್ಚಿನದಾಗಿ ಹೂಡಿಕೆ ಉದ್ದೇಶದೊಂದಿಗೆ ಖರೀದಿಸುವವರ ಸಂಖ್ಯೆ ಅಧಿಕವಾಗಿತ್ತು. ಕೋವಿಡ್‌ ನಂತರದಲ್ಲಿ ಅದು ಕುಗ್ಗಿದ್ದು, ಇದೀಗ ಮನೆ ಇಲ್ಲವೆ ಕಟ್ಟಡ ನಿರ್ಮಿಸುವವರು ಮಾತ್ರ ನಿವೇಶನ ಖರೀದಿಗೆ ಮುಂದಾಗುತ್ತಿದ್ದಾರೆ. ಹೂಡಿಕೆ ಉದ್ದೇಶದೊಂದಿಗೆ ಖರೀದಿಸುವವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂಬುದು ರಿಯಲ್‌ ಎಸ್ಟೇಟ್‌ ಉದ್ಯಮದ ಕೆ.ಮಹೇಶ, ಅಮೃತ ಮೆಹರವಾಡೆ ಅವರ ಅನಿಸಿಕೆ.

ಸ್ಥಿತಿ ಹೇಳಿಕೊಳ್ಳುವಂತಿಲ್ಲ ಅನುಭವಿಸುವಂತೆಯೂ ಇಲ್ಲ : ಕಟ್ಟಡ ಸಾಮಗ್ರಿಗಳ ಬೆಲೆ ದಿಢೀರ್‌ ಹೆಚ್ಚಳದಿಂದ ನಿರ್ಮಾಣ ಉದ್ಯಮದಲ್ಲಿ ತೊಡಗಿವರ ಸ್ಥಿತಿ ಹೇಳಿಕೊಳ್ಳುವಂತಿಲ್ಲ, ಅನುಭವಿಸುವಂತೆಯೂ ಇಲ್ಲ ಎನ್ನುವಂತಾಗಿದೆ. ರೇರಾದಡಿ ನೋಂದಾಯಿತಗೊಂಡವರು ತಮ್ಮ ಮೌಲ್ಯ ಉಳಿಸಿಕೊಳ್ಳಬೇಕಾಗಿದೆ. ಗುಣಮಟ್ಟದಲ್ಲಿಯೂ ರಾಜಿ ಇಲ್ಲದೇ ಕಾಲಮಿತಿಯಲ್ಲಿ ನಿರ್ಮಾಣ ಪೂರ್ಣಗೊಳಿಸಬೇಕಾಗಿದೆ. ಆಗಿರುವ ಒಪ್ಪಂದದಂತೆ ಹಳೆ ದರಕ್ಕೆ ಗ್ರಾಹಕರಿಗೆ ಕಟ್ಟಡ ನಿರ್ಮಾಣ ಮಾಡಿಕೊಡಬೇಕಾಗಿದೆ. ಆದರೆ ದರ ಹೆಚ್ಚಳ ಹೊರೆ ನಿರ್ಮಾಣ ಉದ್ಯಮದಲ್ಲಿದ್ದವರ ಮೇಲೆ ಬೀಳುತ್ತದೆ. ಹೆಸರು ಉಳಿಸಿಕೊಳ್ಳಲು, ಉದ್ಯಮದಲ್ಲಿ ಮುಂದುವರಿಯಲು ಮಾಡಿಕೊಂಡ ಒಪ್ಪಂದ ಪೂರ್ಣಗೊಳಿಸಬೇಕಾಗಿದೆ. ದರ ಹೆಚ್ಚಳದಿಂದ ಹೊಸ ಯೋಜನೆಗಳಿಗೆ ಹಿನ್ನಡೆಯಾಗಿದೆ.

-ಬ್ರಯಾನ್‌ ಡಿಸೋಜಾ, ಖಜಾಂಚಿ, ಹು.ಧಾ.ಕ್ರೆಡೈ

 

ಹುಬ್ಬಳ್ಳಿ-ಧಾರವಾಡದಲ್ಲಿ ಈ ಹಿಂದೆ 25-35 ಲಕ್ಷ ರೂ. ವೆಚ್ಚದಲ್ಲಿ ದೊರೆಯುತ್ತಿದ್ದ ಅಪಾರ್ಟ್‌ಮೆಂಟ್‌ಗಳ ಮನೆ, ದರ ಹೆಚ್ಚಳದಿಂದ ಇದೀಗ 40-45 ಲಕ್ಷ ರೂ.ಗೆ ಹೆಚ್ಚಳವಾಗಿದೆ.

 

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.