
ಎಐಸಿಸಿ ಅಧ್ಯಕ್ಷರ ತವರಲ್ಲಿ ಅರಳಿದ ಕಮಲ; ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿಗೆ ಗೆಲುವು
Team Udayavani, Mar 23, 2023, 4:19 PM IST

ಕಲಬುರಗಿ: ಯಾರಿಗೂ ಸ್ಪಷ್ಟ ಬಹುಮತ ಇರದ ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಅತ್ಯಂತ ತಂತ್ರ- ಪ್ರತಿತಂತ್ರಗಾರಿಕೆಯ ಬಿರುಸಿನಿಂದ ಕೂಡಿದ ಚುನಾವಣೆಯಲ್ಲಿ ಒಂದು ಮತದ ಅಂತರದಿಂದ ಬಿಜೆಪಿ ಗೆಲುವು ಸಾಧಿಸಿದೆ.
ಬಿಜೆಪಿಯ ವಿಶಾಲ ದರ್ಗಿ ಮೇಯರ್ ಆಗಿ ಆಯ್ಕೆಯಾದರೆ , ಉಪ ಮೇಯರ್ ಆಗಿ ಬಿಜೆಪಿಯ ಶಿವಾನಂದ ಪಿಸ್ತಿ ತಲಾ ಒಂದು ಮತದ ಅಂತರದಿಂದ ಚುನಾಯಿತರಾಗಿದ್ದಾರೆ.
ವಿಶಾಲ ದರ್ಗಿ 33 ಮತ ಪಡೆದರೆ ಕಾಂಗ್ರೆಸ್ ದಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಕಾಶ ಕಪನೂರ 32 ಮತ ಪಡೆದು ಸೋಲು ಅನುಭವಿಸಿದರು. ಅದೇ ರೀತಿ ಉಪಮೇಯರಾಗಿ ಬಿಜೆಪಿಯ ಶಿವಾನಂದ ಪಿಸ್ತಿ 33 ಮತ ಪಡೆದ ಚುನಾಯಿತರಾದರೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ವಿಜಯಲಕ್ಷ್ಮಿ ಸಹ 32 ಮತ ಪಡೆದು ಸೋಲು ಅನುಭವಿಸಿದರು.
ಒಟ್ಟಾರೆ ಈ ವಿಜಯದ ಮೂಲಕ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ತವರಿನಲ್ಲಿ ಕಮಲ ಅರಳಿದೆ.
ಪಾಲಿಕೆಯ 55 ಸ್ಥಾನಗಳಲ್ಲಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 04 ಹಾಗೂ ಓರ್ವ ಪಕ್ಷೇತರ ಗೆಲುವು ಸಾಧಿಸಿದ್ದರು. ತದನಂತರ ಬೆಳವಣಿಗೆಯಲ್ಲಿ ವಾರ್ಡ್ 36 ರಲ್ಲಿ ಗೆಲುವು ಸಾಧಿಸಿದ ಶಂಭುಲಿಂಗ ಬಳಬಟ್ಟಿ ಹಾಗೂ ವಾರ್ಡ್ 24 ರದಿಂದ ಗೆದ್ದ ಪ್ರಿಯಾಂಕ್ ಅಂಬರೀಶ್ ಅನರ್ಹಗೊಂಡಿದ್ದರಿಂದ ಸಂಖ್ಯೆ 53 ಕ್ಕೆ ಇಳಿದಿತ್ತು.
ಮೂವರು ಸಂಸದರು, ಮೂವರು ಶಾಸಕರು ಹಾಗೂ ಒಂಭತ್ತು ಜನ ವಿಧಾನ ಪರಿಷತ್ತು ಸದಸ್ಯರು ಸೇರಿ ಮತದಾರರ ಸಂಖ್ಯೆ 69 ಆಗಿತ್ತು. ಆದರೆ ಇದರಲ್ಲಿ ಬಾಬುರಾವ ಚಿಂಚನಸೂರ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಒಟ್ಟಾರೆ ಸಂಖ್ಯಾ ಬಲ 68 ಕ್ಕೆ ನಿಗದಿಗೊಂಡಿತು. ಚುನಾವಣೆಯಲ್ಲಿ 65 ಮತದಾರರು ಪಾಲ್ಗೊಂಡಿದ್ದರು. ರಾಜ್ಯಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹಾಗೂ ಜೆಡಿಎಸ್ ಅಲಿಂಮೋದ್ದೀನ್ ಗೈರು ಹಾಜರಾಗಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
