ಹಲ್ಲೆ ಖಂಡಿಸಿ ವಕೀಲರಿಂದ ಪ್ರತಿಭಟನೆ
Team Udayavani, May 17, 2022, 1:27 PM IST
ಜೇವರ್ಗಿ: ಬಾಗಲಕೋಟೆಯಲ್ಲಿ ವಕೀಲೆ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ವ್ಯಕ್ತಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಸೋಮವಾರ ತಾಲೂಕು ವಕೀಲರ ಸಂಘದ ವತಿಯಿಂದ ತಹಶೀಲ್ದಾರ್ ವಿನಯಕುಮಾರ ಪಾಟೀಲ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಾರ್ವಜನಿಕ ಸ್ಥಳದಲ್ಲಿ ವಕೀಲರು ಹೆಣ್ಣು ಎನ್ನುವುದನ್ನು ನೋಡದೇ ಮನಸ್ಸೋ ಇಚ್ಛೆ ಹಲ್ಲೆ ಮಾಡಿ, ಥಳಿಸಿರುವುದು ನಿಜಕ್ಕೂ ಮಾನವ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ. ಇದೊಂದು ರಾಜಕೀಯ ಪ್ರೇರಿತ ಘಟನೆಯಾಗಿದೆ. ಇಂತಹ ಘಟನೆಗಳು ಮಹಿಳೆಯರ ಗೌರವಕ್ಕೆ ಕಪ್ಪು ಚುಕ್ಕೆಯಾಗಿದೆ. ಮಹಿಳೆಯರ ಮೇಲೆ, ವಿದ್ಯಾರ್ಥಿನಿಯರ ಮೇಲೆ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದರೂ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಬಂಧಿತ ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ಗಡಿಪಾರು ಮಾಡಬೇಕು. ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಕೀಲರ ಸಂಘ ಮನವಿ ಪತ್ರದಲ್ಲಿ ಎಚ್ಚರಿಸಿದೆ.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಕೆ.ಜಿ.ಬಿರಾದಾರ, ಹಿರಿಯ ವಕೀಲರಾದ ಪ್ರಾಣೇಶ ಕುಲಕರ್ಣಿ, ಸಿದ್ಧು ಯಂಕಂಚಿ, ಎಂ.ಐ.ಸೂಗೂರ, ಸಿದ್ಧು ದೇಸಾಯಿ, ರಾಮನಾಥ ಭಂಡಾರಿ, ಭಾಷಾ ಪಟೇಲ ಯಾಳವಾರ, ಕಾಶಿಂ ಮನಿಯಾರ್, ಅಪ್ಪಾಸಾಬ ಕೋಳಕೂರ, ಎಸ್.ಎಸ್. ಹಾಲಕಾಯಿ, ರಾಜು ಮುದ್ದಡಗಿ, ಸೋಮಶೇಖರ ಸರ್ದಾರ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರ್ಗಿಯಲ್ಲಿ 74.50 ಲಕ್ಷ ರೂ. ಮೌಲ್ಯದ 745.410 ಕೆಜಿ ಗಾಂಜಾ ದಹನ
ಬೆನ್ನಟ್ಟಿದ ಬೀದಿನಾಯಿಗಳ ಹಿಂಡು : ತಪ್ಪಿಸಿಕೊಳ್ಳುವ ಭರದಲ್ಲಿ ಬಿದ್ದು ಪತ್ರಕರ್ತನಿಗೆ ಗಾಯ
ಗಾಣಗಾಪುರ ದೇವರ ಹೆಸರಿನಲ್ಲಿ ವಂಚನೆ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಸಚಿವ ನಿರಾಣಿ
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಆಗುವುದರಲ್ಲಿ ಸಂದೇಹವಿಲ್ಲ: ಮುರುಗೇಶ್ ನಿರಾಣಿ
ಮೂಲ ಸೌಕರ್ಯಕ್ಕೆ ಆಗ್ರಹಿಸಿ ನಿರಶನ
MUST WATCH
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ಹೊಸ ಸೇರ್ಪಡೆ
ರೈಲ್ನಲ್ಲಿ ಕಾಸರಗೋಡಿನ ಮಹಿಳೆಯ ಬ್ಯಾಗ್ ಕಸಿದು ಪರಾರಿ; ದೂರು
ರಾಜ್ಯದಲ್ಲಿ 67 ಕೋಟಿ ರೂ. ಮೌಲ್ಯದ ಮಾದಕವಸ್ತು ನಾಶ
ಟಿ20 ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್, ಮಳೆ ಅಡಚಣೆ, ಉಮ್ರಾನ್ ಮಲಿಕ್ ಪದಾರ್ಪಣೆ
ವಿಂಬಲ್ಡನ್ ಗ್ರ್ಯಾನ್ಸ್ಲಾಂ ಟೆನಿಸ್ ಟೂರ್ನಿ: ವೀನಸ್ ದಾಖಲೆ ಮುರಿಯುವತ್ತ ಸ್ವಿಯಾಟೆಕ್
ಮಾರುತಿ ಸುಜುಕಿ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದ ಡಾ| ವೆಂಕಟರಾಮನ್ ಇನ್ನಿಲ್ಲ