ತಾತ್ಸಾರ ಮಾಡುವ ಕಂಪೆನಿ ವಿರುದ್ಧ ಕೇಸ್‌ ದಾಖಲಿಸಿ


Team Udayavani, May 22, 2020, 5:25 AM IST

esh som

ಮೈಸೂರು: ಶುದ್ಧ ನೀರು ಘಟಕಗಳ ನಿರ್ವಹಣೆ ವಿಚಾರದಲ್ಲಿ ಉದಾಸೀನತೆ ತೋರಿರುವ ಕಂಪೆನಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದರ ಜೊತೆಗೆ ಆ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಸಚಿವ ಕೆ.ಎಸ್‌.  ಈಶ್ವರಪ್ಪ ಸೂಚನೆ ನೀಡಿದರು. ಜಿಪಂ ಸಭಾಂಗಣದಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ಕುಡಿವ ನೀರಿನ ವಿಚಾರದಲ್ಲಿ ಯಾರೂ ಸಹ ತಾತ್ಸಾರ  ಮಾಡಬಾರದು. ಜಿಲ್ಲೆಗೆ ಈವರೆಗೆ 661 ಶುದ್ಧ ನೀರಿನ ಘಟಕಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, 574 ಘಟಕಗಳು ನಿರ್ಮಾಣಗೊಂಡಿವೆ. ಇವುಗಳಲ್ಲಿ 486 ಘಟಕಗಳು ಸುಸ್ಥಿತಿಯಲ್ಲಿವೆ. 88 ಘಟಕಗಳು ದುರಸ್ತಿಯಲ್ಲಿವೆ ಎಂದು   ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ 486 ಘಟಕಗಳು ಸುಸ್ಥಿತಿಯಲ್ಲಿರಲು ಸಾಧ್ಯವಿಲ್ಲ.

ಈಗಲೇ ಸ್ಥಳ ಪರಿಶೀಲನೆಗೆ ಹೊರಡೋಣ 486 ಘಟಕಗಳು ಸುಸ್ಥಿತಿಯಲ್ಲಿರುವುದನ್ನು ತೋರಿಸಿ ಎಂದು  ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಅಧಿಕಾರಿಗಳು ದುರಸ್ತಿ ಜವಾಬ್ದಾರಿ ನೀಡಿರುವ ಕಂಪೆನಿಯು ಘಟಕಗಳನ್ನು ಸೂಕ್ತ ರೀತಿಯಲ್ಲಿ ದುರಸ್ತಿ ಮಾಡಿಸುತ್ತಿಲ್ಲ. ಹೀಗಾಗಿ ಘಟಕಗಳು  ಕೆಟ್ಟುಹೋಗಿವೆ ಎಂದು ಮಾಹಿತಿ ನೀಡಿದರು.  ಈ ವೇಳೆ ಕೆಂಡ ಮಂಡಲರಾದ ಸಚಿವರು, ಕುಡಿವ ನೀರಿನ ವಿಚಾರಲ್ಲಿ ಈ ರೀತಿ ತಾತ್ಸಾರ ಮಾಡುವ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸುವುದಲ್ಲದೆ ಕ್ರಿಮಿನಲ್‌ ಮೊಕದ್ದಮೆ  ದಾಖಲಿಸಿ ಎಂದು ಸೂಚಿಸಿದರು.

ಕೆರೆ ಅಭಿವೃದ್ಧಿಗೆ ಸೂಚನೆ: ಜಿಲ್ಲೆಯಲ್ಲಿ ಕೈಗೆತ್ತುಕೊಂಡಿರುವ 800 ಕೆರೆಗಳ ಪುನಃಶ್ಚೇತನ ಕೆಲಸವನ್ನು ನರೆಗಾದಡಿ ಕೈಗೆತ್ತುಕೊಂಡು ಮಳೆ ಗಾಲ ಆರಂಭವಾಗುವ ಮುನ್ನವೆ ಪೂರ್ಣ ಗೊಳಿಸಬೇಕು. ಆಗ ಮಳೆ ಬಂದ ನಂತರ ಕೆರೆಗಳಿಗೆ  ನೀರು ಹರಿದು ಕೆರೆಗಳು ತುಂಬುತ್ತವೆ. ಅಂತರ್ಜಲ ವೃದ್ಧಿಯಾಗುತ್ತದೆ ಎಂದರು.

ಶೌಚಾಲಯ ನಿರ್ಮಾಣ ವಿಳಂಬ: ಜಿಲ್ಲೆಯಲ್ಲಿ ಒಟ್ಟು 51 ಸಾರ್ವಜನಿಕ ಶೌಚಾ ಲಯ ನಿರ್ಮಾಣವಾಗಬೇಕಿದೆ. ಇವುಗಳಲ್ಲಿ 43 ಕ್ಕೆ ಅನುಮೋದನೆ ದೊರೆತಿದೆ. 2 ನಿರ್ಮಾಣಗೊಂಡು ಕಾರ್ಯ ನಿರ್ವಹಿಸುತ್ತಿವೆ. ಕಳೆದ ಎರಡು  ವರ್ಷಗಳಿಂದ ಏಕೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಸಚಿವ ಎಸ್‌.ಟಿ. ಸೋಮಶೇಖರ್‌, ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಲ್‌  .ನಾಗೇಂದ್ರ, ಹರ್ಷವರ್ಧನ್‌, ಅಶ್ವಿ‌ನ್‌ ಕುಮಾರ್‌, ಡೀಸಿ ಅಭಿರಾಂ ಜಿ. ಶಂಕರ್‌, ಜಿಪಂ ಸಿಇಒ ಪ್ರಶಾಂತ್‌ ಕುಮಾರ್‌ ಮಿಶ್ರಾ ಇದ್ದರು.

ಸಿದ್ದು, ಜಿಟಿಡಿ ಕಾಲೆಳೆದ ಈಶ್ವರಪ್ಪ: ಯಾವ್ಯಾವುದೊ ವಿಚಾರಕ್ಕೆ ಜಟಾಪಟಿ ಮಾಡಿಕೊಳ್ಳುವ ಜಿಟಿಡಿ ಹಾಗೂ ಸಿದ್ದರಾಮಯ್ಯ, ತಮ್ಮ ಕ್ಷೇತ್ರದ ನೀರಿನ ವಿಚಾರದಲ್ಲಿ ಏಕೆ ಗುದ್ದಾಟ ಮಾಡಿಕೊಂಡಿಲ್ಲ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ  ವ್ಯಂಗ್ಯವಾಡಿದರು. ಬಹು ಗ್ರಾಮ ಕುಡಿವ ನೀರು ಯೋಜನೆ ಪ್ರಗತಿಪರಿಶೀಲನೆ ವೇಳೆ ರಾಜಕೀಯ ಹಾಗೂ ಇನ್ನಿತರ ವಿಚಾರಗಳಿಗೆ ಹೋರಾಡುವ ಸಿದ್ದರಾಮಯ್ಯ, ಜಿ.ಟಿ. ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಡಿಯುವ ನೀರು  ಕೊಡಿಸಲು ಏಕೆ ಪರಸ್ಪರ ಹೋರಾಟ ಮಾಡಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೆ ನಿಮ್ಮ ಕಾಲದಲ್ಲಿ ಕುಡಿಯುವ ನೀರಿನ ಯೋಜನೆ ಸಾಕಾರಗೊಳ್ಳದಿದ್ದರೂ ಪರವಾಗಿಲ್ಲ ಅದನ್ನು ನಾವು ಮಾಡಿ ತೋರಿಸುತ್ತೇವೆ ಎಂದು ಚಟಾಕಿ ಹಾರಿಸಿದರು.

ಟಾಪ್ ನ್ಯೂಸ್

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

tdy-15

ಹಳೆ ಚಿನ್ನವನ್ನು ಬದಲಾಯಿಸುವ ನೆಪದಲ್ಲಿ ನಕಲಿ ಚಿನ್ನಾಭರಣ ಕೊಟ್ಟು ವಂಚನೆ: ಇಬ್ಬರ ಬಂಧನ

ಐದು ದಶಕಗಳಿಂದ ಪಂಪಾಸರೋವರದ ಅರ್ಚಕರಾಗಿದ್ದ ರಾಮಾದಾಸ ಬಾಬಾ ವಿಧಿವಶ

ಐದು ದಶಕಗಳಿಂದ ಪಂಪಾಸರೋವರದ ಅರ್ಚಕರಾಗಿದ್ದ ರಾಮಾದಾಸ ಬಾಬಾ ವಿಧಿವಶ

ಮೋದಿ ಸರಕಾರದ ಅವಧಿಯಲ್ಲಿ ಕೇಂದ್ರ ಮಟ್ಟದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ

ಮೋದಿ ಸರಕಾರದ ಅವಧಿಯಲ್ಲಿ ಕೇಂದ್ರ ಮಟ್ಟದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ

ಆಮಿರ್‌,ಹೃತಿಕ್‌ ಆಯಿತು ಈಗ ಶಾರುಖ್‌ ʼಪಠಾಣ್‌ʼಗೂ ತಟ್ಟಿತು ಬಾಯ್‌ ಕಾಟ್ ಬಿಸಿ

ಆಮಿರ್‌, ಹೃತಿಕ್‌ ಆಯ್ತು ಈಗ ಶಾರುಖ್‌ ಖಾನ್ ʼಪಠಾಣ್‌ʼಗೂ ತಟ್ಟಿತು boycott ಬಿಸಿ

ಸಿದ್ದರಾಮಯ್ಯ ಸಿಎಂ ಆಗಲೆಂದು ಆಸೆ ಪಡುವವರಲ್ಲಿ ನಾನೂ ಒಬ್ಬ: ಸಚಿವ ರಾಮುಲು

ಸಿದ್ದರಾಮಯ್ಯ ಸಿಎಂ ಆಗಲೆಂದು ಆಸೆ ಪಡುವವರಲ್ಲಿ ನಾನೂ ಒಬ್ಬ: ಸಚಿವ ರಾಮುಲು

washington sundar ruled out of zimbabwe series

ಜಿಂಬಾಬ್ವೆ ಸರಣಿಯಿಂದ ಹೊರಬಿದ್ದ ವಾಷಿಂಗ್ಟನ್ ಸುಂದರ್: ತಂಡ ಸೇರಿದ ಆರ್ ಸಿಬಿ ಸ್ಟಾರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಳ್ಳೇಗಾಲ : ನಾಲೆಯಲ್ಲಿ ಈಜಲು ಹೋಗಿ ಇಬ್ಬರು ಸಾವು, ದೇವರ ಹರಕೆ ಪೂಜೆಗೆ ಬಂದವರು ನಿರುಪಾಲು

ನಾಲೆಯಲ್ಲಿ ಈಜಲು ಹೋಗಿ ಇಬ್ಬರು ನೀರುಪಾಲು, ದೇವರ ಹರಕೆ ಪೂಜೆಗೆಂದು ಬಂದವರು ಮಸಣ ಸೇರಿದರು

tdy-7

ದಕ್ಷಿಣ ಕಾಶಿಯ ಶಾಸಕನಾಗಿದ್ದೇ ನನಗೆ ಹೆಮ್ಮೆ: ಶಾಸಕ ಬಿ.ಹರ್ಷವರ್ಧನ್‌

ವಾರದಲ್ಲಿ ತಾಲೂಕಿನ 104 ದೇಗುಲ ಸಚ್ಛತೆ

ವಾರದಲ್ಲಿ ತಾಲೂಕಿನ 104 ದೇಗುಲ ಸಚ್ಛತೆ

ರವಿ ಬೋಪಣ್ಣ ಚಿತ್ರ ಯಶಸ್ಸಿಗೆ ದೇವಾಲಯಗಳಲ್ಲಿ ವಿಶೇಷ ಪೂಜೆ

ರವಿ ಬೋಪಣ್ಣ ಚಿತ್ರ ಯಶಸ್ಸಿಗೆ ದೇವಾಲಯಗಳಲ್ಲಿ ವಿಶೇಷ ಪೂಜೆ

ಬೀದಿಬದಿ ವ್ಯಾಪಾರಿಗಳ ಅಂಗಡಿ ತೆರವು 

ಬೀದಿಬದಿ ವ್ಯಾಪಾರಿಗಳ ಅಂಗಡಿ ತೆರವು 

MUST WATCH

udayavani youtube

ಆಳವಾದ ಕಂದಕಕ್ಕೆ ಬಸ್ ಉರುಳಿ ಬಿದ್ದು, ಐಟಿಬಿಪಿಯ 6 ಯೋಧರು ಸಾವು

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಜನಸ್ತೋಮ

udayavani youtube

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ

udayavani youtube

ಸಾವರ್ಕರ್, ಟಿಪ್ಪು ಫೋಟೋ ವಿಚಾರದಲ್ಲಿ ಹೊಡೆದಾಟ : ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್‌ ಜಾರಿ

ಹೊಸ ಸೇರ್ಪಡೆ

14water

30ರೊಳಗೆ ಕಾಲುವೆಗಳಿಗೆ ನೀರು: ಸಚಿವ ಕತ್ತಿ

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

ಸಂವಿಧಾನದ ಮೌಲ್ಯದಡಿ ಪ್ರಜಾಪ್ರಭುತ್ವ ಮುನ್ನಡೆ

ಸಂವಿಧಾನದ ಮೌಲ್ಯದಡಿ ಪ್ರಜಾಪ್ರಭುತ್ವ ಮುನ್ನಡೆ

13-fam

ವಿಜಯಪುರ ಜಿಲ್ಲೆಯ ಏಕೈಕ ಬಲಿದಾನ ಕುಟುಂಬದ ಕಡೆಗಣನೆ

tdy-15

ಹಳೆ ಚಿನ್ನವನ್ನು ಬದಲಾಯಿಸುವ ನೆಪದಲ್ಲಿ ನಕಲಿ ಚಿನ್ನಾಭರಣ ಕೊಟ್ಟು ವಂಚನೆ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.