
Internet: ಒಂದು ಸೆಕೆಂಡ್‌ಗೆ 150 ಎಚ್‌ಡಿ ಸಿನೆಮಾ ಡೌನ್‌ಲೋಡ್!
ಜಗತ್ತಿನ ಅತ್ಯಂತ ವೇಗದ ಇಂಟರ್‌ನೆಟ್ ಪರಿಚಯಿಸಿದ ಚೀನ
Team Udayavani, Nov 16, 2023, 12:05 AM IST

ಬೀಜಿಂಗ್: ಜಗತ್ತಿನ ಅತ್ಯಂತ ವೇಗದ ಇಂಟರ್‌ನೆಟ್ ಜಾಲವನ್ನು ಚೀನ ಅನಾವರ ಣ ಗೊಳಿಸಿದೆ. ಇದರ ವೇಗ ಎಷ್ಟಿದೆ ಎಂದರೆ ಕೇವಲ ಒಂದು ಸೆಕೆಂಡ್‌ನಲ್ಲಿ 150 ಎಚ್‌ಡಿ ಸಿನೆಮಾಗಳನ್ನು ಡೌನ್‌ಲೋಡ್ ಮಾಡ ಬಹುದಾಗಿದೆ. ಅಂದರೆ ಪ್ರತೀ ಸೆಕೆಂಡ್‌ಗೆ 1,200 ಜಿಬಿ(1.2 ಟಿಬಿ) ಡೇಟಾ ವರ್ಗಾಯಿ ಸಬಹುದಾಗಿದೆ.
ಸಿಂಘುವಾ ವಿಶ್ವವಿದ್ಯಾನಿಲಯ, ಚೀನ ಮೊಬೈಲ್, ಹುವಾಯಿ ಟೆಕ್ನಾಲಜಿಸ್ ಹಾಗೂ ಸರ್ನೆಟ್ ಕಾರ್ಪೊರೇಶನ್ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಬೀಜಿಂಗ್, ವುಹಾನ್ ಮತ್ತು ಗುವಾಂಗ್‌ಝೌ ನಗರಗಳ 3,000ಕ್ಕೂ ಹೆಚ್ಚು ಕಿ.ಮೀ. ವಾಪ್ತಿಗೆ ಆಪ್ಟಿಕಲ್ ಫೈಬರ್ ಕೇಬಲಿಂಗ್ ವ್ಯವಸ್ಥೆ ಅಳವಡಿಸಲಾಗಿದೆ.
ಬಹುತೇಕ ಇಂಟರ್‌ನೆಟ್ ಜಾಲವು ಪ್ರತೀ ಸೆಕೆಂಡ್‌ಗೆ 100 ಜಿಬಿ ಡೇಟಾ ವರ್ಗಾವಣೆಯ ಸಾಮರ್ಥ್ಯ ಹೊಂದಿದೆ. ಇತ್ತೀಚೆಗೆ ಅಮೆರಿಕ ಪರಿಚಯಿಸಿದ ಐದನೇ ಪೀಳಿಗೆಯ ಇಂಟ ರ್‌ನೆಟ್ 2 ಪ್ರತೀ ಸೆಕೆಂಡ್‌ಗೆ 400 ಜಿಬಿ ಡೇಟಾ ವರ್ಗಾವಣೆಯ ಸಾಮರ್ಥ್ಯ ಹೊಂದಿದೆ. ಆದರೆ ಚೀನದ ಇಂಟರ್‌ನೆಟ್ ಕಂಪೆನಿಗಳು ಗಮನಾರ್ಹ ವಾಗಿ ಪ್ರತೀ ಸೆಕೆಂಡ್‌ಗೆ 1,200 ಜಿಬಿ ಡೇಟಾ ವರ್ಗಾವಣೆಯ ಸಾಮ ರ್ಥ್ಯ ಹೊಂದಿರುವ ಜಾಲವನ್ನು ಅಭಿವೃದ್ಧಿಪಡಿಸಿವೆ.
ಬೀಜಿಂಗ್-ವುವಾನ್-ಗುವಾಂಗ್‌ಝೌ ಇಂಟರ್‌ನೆಟ್ ಸಂಪರ್ಕವು ರಾಷ್ಟ್ರೀಯ ಚೀನ ಶಿಕ್ಷಣ ಮತ್ತು ಸಂಶೋಧನ ಜಾಲದ (ಸರ್ನೆಟ್) ಉಪಕ್ರಮವಾಗಿದೆ.
ಟಾಪ್ ನ್ಯೂಸ್
