
22 ದಿನಗಳ ಪೊಲೀಸ್ ಕಾರ್ಯಾಚರಣೆ; 1.17 ಕೋಟಿ ರೂ.ಮೌಲ್ಯದ ಕಳವಾದ ಅಡಿಕೆ ವಶ
Team Udayavani, Nov 23, 2022, 9:39 PM IST

ಸಾಗರ: ಗುಜರಾತ್‌ನ ಅಹಮದಾಬಾದ್‌ಗೆ ಕಳುಹಿಸಿದ 1.17 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಅಡಿಕೆ ಲೋಡ್‌ನ್ನು ವಿಳಾಸದಾರರಿಗೆ ತಲುಪಿಸದೆ ಮಾಲೀಕರಿಗೆ ವಂಚಿಸಿ ಬೇರೆಡೆಗೆ ಕದ್ದೊಯ್ದಿದ್ದ ವಂಚಕರ ತಂಡವನ್ನು ಬೇಧಿಸಿದ ಸಾಗರದ ಪೊಲೀಸರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ ಘಟನೆ ನಡೆದಿದೆ.
ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಬಳಸಗೋಡು ಗ್ರಾಮದ ಮಧುಕರ್ ಅವರ ಗೋಡೌನ್‌ನಿಂದ ದೋಲರಾಮ್ ಹರಿಸಿಂಗ್ ಅವರಿಗೆ ಸೇರಿದ 350 ಚೀಲ ಕೆಂಪಡಿಕೆಯನ್ನು ಅಹಮದಾಬಾದ್‌ಗೆ ರವಾನಿಸಲು ಲೋಡ್ ಮಾಡಿ ಕಳುಹಿಸಲಾಗಿತ್ತು.24.5 ಕ್ವಿಂಟಾಲ್ ಕೆಂಪಡಿಕೆಯ ಮೌಲ್ಯ 1,17,60,000 ರೂ. ಎಂದು ಹೇಳಲಾಗಿತ್ತು. ಆರೋಪಿಗಳು ಮಾಲನ್ನು ಅಹಮದಾಬಾದ್‌ಗೆ ತೆಗೆದುಕೊಂಡು ಹೋಗದೆ ಕಳವು ಮಾಡಿರುವುದು ಗೊತ್ತಾಗುತ್ತಿದ್ದಂತೆ ದೂರು ದಾಖಲಾಗಿತ್ತು.
ಪ್ರಕರಣವನ್ನು ಬೆನ್ನು ಹತ್ತಿದ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿ 22 ದಿನಗಳ ಕಾಲ ಕಾರ್ಯಾಚರಣೆ ನಡೆಸಿದರು. ತಾಂತ್ರಿಕತೆ ಹಾಗೂ ಬಾತ್ಮೀದಾರರ ಮಾಹಿತಿಗಳನ್ನು ಬಳಸಿ ನ. 18 ರಂದು ಮಧ್ಯಪ್ರದೇಶದ ಸಾರಂಗಪುರದಲ್ಲಿ ಪ್ರಕರಣದ ಆರೋಪಿಗಳಾದ ಲಾರಿ ಚಾಲಕ ಇಂದೋರ್‌ನ ರಜಾಕ್‌ಖಾನ್, ಅಹಮದಾಬಾದ್‌ನ ಫಾಟಬಿಲೋದ್‌ನ ಲಾರಿ ಚಾಲಕ ಥೇಜು ಸಿಂಗ್, ಮಧ್ಯಪ್ರದೇಶದ ಶಹಜಾಪುರದ ಅನೀಶ್ ಅಬ್ಬಾಸಿ ಅವರನ್ನು 25 ಲಕ್ಷ ರೂ. ಮೌಲ್ಯದ ಅಶೋಕ ಲೈಲ್ಯಾಂಡ್ ಲಾರಿ ಸಮೇತ ವಶಪಡಿಸಿಕೊಂಡಿದ್ದು, ಗುರುವಾರ ಸಾಗರದಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಅಂತರರಾಜ್ಯ ಕಳ್ಳತನದ ಇತಿಹಾಸ ಹೊಂದಿದ್ದು, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಾಸ್ತಾನ ರಾಜ್ಯಗಳಲ್ಲೂ ಅಪರಾಧ ಎಸಗಿದ್ದಾರೆ.
ಕಾರ್ಯಾಚರಣೆಯಲ್ಲಿ ಸಾಗರ ಗ್ರಾಮಾಂತರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ವಿ.ಪ್ರವೀಣ್‌ಕುಮಾರ್, ಕಾರ್ಗಲ್‌ನ ಎಸ್‌ಐ ತಿರುಮಲೇಶ್ ನಾಯ್ಕ, ಠಾಣಾ ಸಿಬ್ಬಂದಿಗಳಾದ ಸನಾವುಲ್ಲಾ, ಶ್ರೀಧರ, ತಾರಾನಾಥ, ರವಿಕುಮಾರ್, ಹನುಮಂತಪ್ಪ ಜಂಬೂರ, ಪ್ರವೀಣಕುಮಾರ್, ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿ ಇಂದ್ರೇಶ್, ವಿಜಯಕುಮಾರ, ಗುರು ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರಿಗೆ ಎಸ್‌ಪಿ ಮಿಥುನ್‌ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ವಿಕ್ರಂ ಅಮಾತೆ, ಎಸ್‌ಎಸ್‌ಪಿ ರೋಹನ್ ಜಗದೀಶ್ ಅಭಿನಂದನೆ ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವುದಿಲ್ಲ: ರಾಘವೇಂದ್ರ

ಅಳಿಯನೇ ಪಕ್ಷದ ಅಭ್ಯರ್ಥಿಯಾಗಿರುವಾಗ ಭಿನ್ನಮತದ ಮಾತೆಲ್ಲಿ: ಕಾಗೋಡು ಪ್ರಶ್ನೆ

ಚಕ್ರತೀರ್ಥ ನದಿಯಲ್ಲಿ ಗೋವಿನ ತಲೆ ಪತ್ತೆ ಪ್ರಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಮನವಿ

ತೀರ್ಥಹಳ್ಳಿ ಪೊಲೀಸ್ ಪೇದೆಯ ಹತ್ಯೆ ಪ್ರಕರಣ: ಓರ್ವ ಆರೋಪಿಯ ಬಂಧನ

ಶಿಕಾರಿಪುರದ ಗಲಭೆ ಹಿಂದೆ ರಾಜಕೀಯ ವಾಸನೆ: ಗೃಹ ಸಚಿವ ಆರಗ ಜ್ಞಾನೇಂದ್ರ
MUST WATCH
ಹೊಸ ಸೇರ್ಪಡೆ

ಐಪಿಎಲ್ 2023: ಆರ್ ಸಿಬಿಯ ಮೊದಲ ಪಂದ್ಯಕ್ಕೆ ಲಭ್ಯವಿಲ್ಲ ಹೇಜಲ್ವುಡ್, ಮ್ಯಾಕ್ಸವೆಲ್

ರಾಮನ ಅವತಾರ ತಾಳಿದ ರಿಷಿ; ಫಸ್ಟ್ ಲುಕ್ ಪೋಸ್ಟರ್ ಬಂತು

ಟ್ಯೂಷನ್ ಗೆ ತೆರಳಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಕುಮಾರಧಾರ ನದಿಯಲ್ಲಿ ಪತ್ತೆ

ಬಳ್ಳಾರಿ: ತವರು ಮನೆ ಸೇರಿದ್ದ ಪತ್ನಿಯ ಕೊಲೆಗೆ ಯತ್ನಿಸಿದ ಕುಡುಕ ಗಂಡ

ನಟ ನವಾಜುದ್ದೀನ್,ಮಾಜಿ ಪತ್ನಿಗೆ ಮಕ್ಕಳ ಸಲುವಾಗಿ ಹಾಜರಾಗಲು ಹೇಳಿದ ಹೈಕೋರ್ಟ್