ಕೈ ಸಂಸದನಲ್ಲಿ 220 ಕೋ.ರೂ. ನೋಟು ಕಂತೆ!

156 ಚೀಲಗಳಲ್ಲಿ ಪೇರಿಸಿಟ್ಟಿತ್ತು ರಾಶಿ ರಾಶಿ ಕರೆನ್ಸಿ

Team Udayavani, Dec 9, 2023, 1:00 AM IST

jharkhand mon

ಹೊಸದಿಲ್ಲಿ: ಒಂದಲ್ಲ ಎರಡಲ್ಲ, ಬರೋಬ್ಬರಿ 220 ಕೋಟಿ ರೂ.! ಇದು ಝಾರ್ಖಂಡ್‌ನಿಂದ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಮತ್ತು ಅಬಕಾರಿ ಉದ್ಯಮಿ ಧೀರಜ್‌ ಪ್ರಸಾದ್‌ ಸಾಹೂ ನಿವಾಸ ಮತ್ತು ಅವರಿಗೆ ಸೇರಿದ ಸ್ಥಳಗಳಲ್ಲಿ ಪತ್ತೆಯಾದ ನೋಟಿನ ಕಂತೆಗಳ ಮೌಲ್ಯ.

ಒಡಿಶಾದಲ್ಲಿ ಅವರಿಗೆ ಸೇರಿದ ಬೋಧ್‌ ಡಿಸ್ಟಿಲರಿ ಪ್ರೈ.ಲಿ. (ಬಿಡಿಪಿಎಲ್‌)ಯ ಕಚೇರಿ ಮತ್ತು ಇತರ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರದಿಂದ ನಿರಂತರವಾಗಿ ದಾಳಿ ನಡೆಸಿ ಶೋಧ ನಡೆಸುತ್ತಿದ್ದ ವೇಳೆ ರಾಶಿ ರಾಶಿ ನೋಟುಗಳು ಪತ್ತೆಯಾಗಿವೆ. ಅವರ ನಿವಾಸದಲ್ಲಿ 500 ರೂ., 200 ರೂ., 100 ರೂ. ನೋಟುಗಳನ್ನು ವಿಶೇಷವಾಗಿ ನಿರ್ಮಿಸಲಾಗಿರುವ ಕಬ್ಬಿಣದ

ರ್ಯಾಕ್‌ನಲ್ಲಿ 156 ಬ್ಯಾಗ್‌ಗಳಲ್ಲಿ ಸಾಲಾಗಿ ಪೇರಿಸಿ ಇರಿಸಲಾಗಿತ್ತು. ರಾಶಿ ನೋಟು ಎಣಿಸುವುದಕ್ಕಾಗಿ ಹಲವು ನೋಟು ಎಣಿಕೆ ಯಂತ್ರಗಳನ್ನು ಅಧಿಕಾರಿಗಳು ಬಳಸಬೇಕಾಯಿತು.

ಗುರುವಾರ ವಂತೂ ನೋಟು ಎಣಿಸಿ ದಣಿದ ಒಂದು ಯಂತ್ರ ಕೆಟ್ಟು ಹೋಗಿ ಬೇರೊಂದನ್ನು ತರಿಸಬೇಕಾಯಿತು. ಪಶ್ಚಿಮ ಬಂಗಾಲ, ಒಡಿಶಾ, ಜಾರ್ಖಂಡ್‌ಗಳಲ್ಲಿ ಸಂಸದ ಸಾಹು ಅವರ ಕುಟುಂಬ ಸದಸ್ಯರಿಗೆ ಸೇರಿದ ಇತರ ಉದ್ಯಮಗಳ ಮೇಲೆ ಕೂಡ ದಾಳಿ ನಡೆಸಿ ಶೋಧಿಸಲಾಗಿದೆ.

ಸಿಬಿಐ ತನಿಖೆಗೆ ಒತ್ತಾಯ
ರಾಶಿ ರಾಶಿ ನೋಟಿನ ಕಂತೆಗಳು ಕಂಡುಬಂದಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒಡಿಶಾದ ಬಿಜೆಪಿ ನಾಯಕ ಮನೋಜ್‌ ಮಹಾಪಾತ್ರ ಒತ್ತಾಯಿಸಿದ್ದಾರೆ. ಒಡಿಶಾದಲ್ಲಿ ಬಿಜೆಡಿ ಸರಕಾರದ ಸಚಿವೆಯೊಬ್ಬರು ಸಂಸದ ಧೀರಜ್‌ ಪ್ರಸಾದ್‌ ಸಾಹೂಗೆ ಸೇರಿದ ಕಂಪೆನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಅವರು ಪ್ರದರ್ಶಿಸಿದ್ದಾರೆ. ಒಡಿಶಾದ ಅಬಕಾರಿ, ವಿಚಕ್ಷಣಾ ದಳ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಯಾರಿದು ಧೀರಜ್‌ ಪ್ರಸಾದ್‌ ಸಾಹೂ?
ಸತತ ಮೂರನೇ ಬಾರಿಗೆ ಕಾಂಗ್ರೆಸ್‌ನಿಂದ ರಾಜ್ಯಸಭಾ ಸದಸ್ಯರಾಗಿರುವ ಧೀರಜ್‌ ಪ್ರಸಾದ್‌ ಸಾಹೂ ಜಾರ್ಖಂಡ್‌ನ‌ವರು. ರಾಜಕೀಯವಾಗಿ ಮತ್ತು ಅಬಕಾರಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಕಾಲದಿಂದಲೂ ಅವರ ಕುಟುಂಬ ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿದೆ. 2009ರ ಜೂನ್‌ನಿಂದ ಅವರು ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಅವರ ಸಹೋದರ ಶಿವಪ್ರಸಾದ್‌ ಸಾಹೂ ಕೂಡ ಒಂದು ಬಾರಿ ಸಂಸದರಾಗಿದ್ದರು.

ಟಾಪ್ ನ್ಯೂಸ್

ಬಸನಗೌಡ ಪಾಟೀಲ ಯತ್ನಾಳ

Vijayapura; ಪಾಕ್ ಘೋಷಣೆ ಕೂಗಿದವರನ್ನು ಭಾರತದಿಂದ ಹೊಡೆದೋಡಿಸಬೇಕು: ಯತ್ನಾಳ್ ಆಗ್ರಹ

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

ಗಂಡನ ಜೊತೆ ಪ್ರವಾಸ ಹೊರಟ ಸ್ಪ್ಯಾನಿಷ್ ಮಹಿಳೆ ಮೇಲೆ ಜಾರ್ಖಂಡ್ ನಲ್ಲಿ ಸಾಮೂಹಿಕ ಅತ್ಯಾಚಾರ

Shocking: ಗಂಡನ ಜೊತೆ ಭಾರತ ಪ್ರವಾಸ ಕೈಗೊಂಡ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಪ್ರಹ್ಲಾದ ಜೋಶಿ

Hubli; ಕಟ್ಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ರಾಜ್ಯ ಸರಕಾರ ಸಹಕಾರ: ಪ್ರಹ್ಲಾದ ಜೋಶಿ

CT Ravi

Bengaluru blast; ಕರ್ನಾಟಕ ಭಯೋತ್ಪಾದಕರ ಟ್ರೈನಿಂಗ್ ಸೆಂಟರ್ ಆಗಿದೆ: ಸಿ.ಟಿ ರವಿ

JDS to BJP; ಬಿಜೆಪಿಯತ್ತ ಮುಖ ಮಾಡಿದ ಮಾಜಿ ಸಚಿವ ಮನೋಹರ್ ತಹಶಿಲ್ದಾರ

JDS to BJP; ಬಿಜೆಪಿಯತ್ತ ಮುಖ ಮಾಡಿದ ಮಾಜಿ ಸಚಿವ ಮನೋಹರ್ ತಹಶಿಲ್ದಾರ

ಪದೇ, ಪದೇ ವಾಗ್ದಾಳಿ ನಡೆಸುವ ಮಮತಾ ಪ್ರಧಾನಿ ಮೋದಿ ಭೇಟಿಗೆ ಹಾತೊರೆಯುವುದೇಕೆ? ಬಿಜೆಪಿ

ಪದೇ, ಪದೇ ವಾಗ್ದಾಳಿ ನಡೆಸುವ ಮಮತಾ ಪ್ರಧಾನಿ ಮೋದಿ ಭೇಟಿಗೆ ಹಾತೊರೆಯುವುದೇಕೆ? ಬಿಜೆಪಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಂಡನ ಜೊತೆ ಪ್ರವಾಸ ಹೊರಟ ಸ್ಪ್ಯಾನಿಷ್ ಮಹಿಳೆ ಮೇಲೆ ಜಾರ್ಖಂಡ್ ನಲ್ಲಿ ಸಾಮೂಹಿಕ ಅತ್ಯಾಚಾರ

Shocking: ಗಂಡನ ಜೊತೆ ಭಾರತ ಪ್ರವಾಸ ಕೈಗೊಂಡ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಪದೇ, ಪದೇ ವಾಗ್ದಾಳಿ ನಡೆಸುವ ಮಮತಾ ಪ್ರಧಾನಿ ಮೋದಿ ಭೇಟಿಗೆ ಹಾತೊರೆಯುವುದೇಕೆ? ಬಿಜೆಪಿ

ಪದೇ, ಪದೇ ವಾಗ್ದಾಳಿ ನಡೆಸುವ ಮಮತಾ ಪ್ರಧಾನಿ ಮೋದಿ ಭೇಟಿಗೆ ಹಾತೊರೆಯುವುದೇಕೆ? ಬಿಜೆಪಿ

ಟಿಕೆಟ್ ನೀಡಿದರೆ ಪಕ್ಷಕ್ಕೆ ಸೇರುವೆ… BJP ಸೇರುವ ಸುಳಿವು ನೀಡಿದ ಕಾಂಗ್ರೆಸ್ ಶಾಸಕಿ

Bihar: ಟಿಕೆಟ್ ನೀಡಿದರೆ ಪಕ್ಷಕ್ಕೆ ಸೇರುವೆ… BJP ಸೇರುವ ಸುಳಿವು ನೀಡಿದ ಕಾಂಗ್ರೆಸ್ ಶಾಸಕಿ

Azam Cheema: 26/11 ಮುಂಬೈ ದಾಳಿಯ ಪ್ರಮುಖ ಸಂಚುಕೋರ ಪಾಕ್‌ನಲ್ಲಿ ಸಾವು… ಮೂಲಗಳು

Azam Cheema: 26/11 ಮುಂಬೈ ದಾಳಿಯ ಪ್ರಮುಖ ಸಂಚುಕೋರ ಪಾಕ್‌ನಲ್ಲಿ ನಿಧನ… ಮೂಲಗಳು

Indian Matrimony apps

Indian Matrimony; ಆ್ಯಪ್ ಸ್ಟೋರ್ ನಿಂದ ಮ್ಯಾಟ್ರಿಮೊನಿ ಆ್ಯಪ್ ಗಳನ್ನು ಅಳಿಸಿದ ಗೂಗಲ್

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

ಬಸನಗೌಡ ಪಾಟೀಲ ಯತ್ನಾಳ

Vijayapura; ಪಾಕ್ ಘೋಷಣೆ ಕೂಗಿದವರನ್ನು ಭಾರತದಿಂದ ಹೊಡೆದೋಡಿಸಬೇಕು: ಯತ್ನಾಳ್ ಆಗ್ರಹ

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

Do Any Type Of Casinos Accept Bitcoin?

ಗಂಡನ ಜೊತೆ ಪ್ರವಾಸ ಹೊರಟ ಸ್ಪ್ಯಾನಿಷ್ ಮಹಿಳೆ ಮೇಲೆ ಜಾರ್ಖಂಡ್ ನಲ್ಲಿ ಸಾಮೂಹಿಕ ಅತ್ಯಾಚಾರ

Shocking: ಗಂಡನ ಜೊತೆ ಭಾರತ ಪ್ರವಾಸ ಕೈಗೊಂಡ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಪ್ರಹ್ಲಾದ ಜೋಶಿ

Hubli; ಕಟ್ಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ರಾಜ್ಯ ಸರಕಾರ ಸಹಕಾರ: ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.