
Karnataka: ಒಂದೇ ದಿನ 26,000 ಆಸ್ತಿ ನೋಂದಣಿ- ಸರಕಾರಕ್ಕೆ 311 ಕೋಟಿ ರೂ. ಆದಾಯ
Team Udayavani, Sep 28, 2023, 12:10 AM IST

ಬೆಂಗಳೂರು: ರಾಜ್ಯದ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಬುಧವಾರ ಒಂದೇ ದಿನ ಆಸ್ತಿ ನೋಂದಣಿ ಸಹಿತ 26,058 ದಸ್ತಾವೇಜು ಪ್ರಕ್ರಿಯೆ ನಡೆದಿದ್ದು, 311 ಕೋ. ರೂ. ಆದಾಯ ಸಂಗ್ರಹವಾಗಿದೆ. ಅ.1ರಿಂದ ಮಾರ್ಗಸೂಚಿ ದರ ಹೆಚ್ಚಾಗಲಿರುವ ಕಾರಣ ಈಗ ಹೆಚ್ಚೆಚ್ಚು ಆಸ್ತಿ ನೋಂದಣಿಯಾಗುತ್ತಿದೆ.
ಸೆ.22ರಂದು 12,955 ಆಸ್ತಿ ನೋಂದಣಿ, ದಸ್ತಾವೇಜು ಪ್ರಕ್ರಿಯೆ ಮೂಲಕ 130.87 ಕೋಟಿ ರೂ. ಹಾಗೂ ಸೆ.25ರಂದು 15,936 ನೋಂದಣಿ ದಸ್ತಾವೇಜು ಪ್ರಕ್ರಿಯೆ ನಡೆದಿದ್ದು, 158.28 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಈಗ ಎರಡೇ ದಿನದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚುತ್ತಲೇ ಇದ್ದು ಕಂದಾಯ-ನೋಂದಣಿ ಇಲಾಖೆ ಮತ್ತೂಂದು ಮೈಲುಗಲ್ಲು ಮುಟ್ಟಿದಂತಾಗಿದೆ.
ನೋಂದಣಿ ಸಹಿತ ಇತರ ಪ್ರಕ್ರಿಯೆಗಳಿಗೆ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯಿಲ್ಲದೆ ಆಸ್ತಿದಾರರೇ ಬಯಸಿದ ದಿನ ಮತ್ತು ಸಮಯಕ್ಕೆ ಆಸ್ತಿ ನೋಂದಣಿ ಮಾಡಿಕೊಳ್ಳುವ, ಆನ್‌ಲೈನ್‌ನಲ್ಲೇ ಶುಲ್ಕ ಪಾವತಿ ವ್ಯವಸ್ಥೆಯಿರುವ ಕಾವೇರಿ- 2 ತಂತ್ರಾಂಶವು ಈಗಾಗಲೇ ಅಳವಡಿಕೆಯಾಗಿದೆ. ಇದೇ ಕಾರಣಕ್ಕೆ ಆಸ್ತಿ ನೋಂದಣಿ ಸಂಖ್ಯೆಯೂ ಹೆಚ್ಚುತ್ತಿದೆ.
ರಾಜ್ಯದ 256 ಉಪನೋಂದಣಿ ಕಚೇರಿಗಳಲ್ಲಿ ಜೂ.25ರಿಂದ ಪೂರ್ಣ ಪ್ರಮಾಣದಲ್ಲಿ ಸುಧಾರಿತ ತಂತ್ರಾಂಶದಡಿಯೇ ನೋಂದಣಿ, ದಸ್ತಾವೇಜು ಕಾರ್ಯ ನಡೆದಿವೆ. ಒಂದೇ ದಿನದಲ್ಲಿ ಗರಿಷ್ಠ ನೋಂದಣಿ, ದಸ್ತಾವೇಜು ಪ್ರಕ್ರಿಯೆಯನ್ನು ಕಾವೇರಿ-2 ತಂತ್ರಾಂಶವು ಯಶಸ್ವಿಯಾಗಿ ನಿರ್ವಹಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Congress ಸರಕಾರ ಪತನವಾಗಲಿದೆ ಎಂಬ ಭ್ರಮೆಯಲ್ಲಿ ಬಿಜೆಪಿ:ಜಗದೀಶ್ ಶೆಟ್ಟರ್

Dalit; ದಲಿತ ಸಮ್ಮಾನ್ ಸಮಾರೋಹ್ ದಲ್ಲಿ ಪಾಲ್ಗೊಂಡ ರಾಜ್ ನಾಥ್ ಸಿಂಗ್

Chhattisgarh: ಕಾರು – ಟ್ರಕ್ ನಡುವೆ ಭೀಕರ ಅಪಘಾತ; ವಧು – ವರ ಸೇರಿ ಐವರು ಮೃತ್ಯು

Chhattisgarh: ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಆಯ್ಕೆ ಮಾಡಿದ ಬಿಜೆಪಿ

ಹುಟ್ಟುಹಬ್ಬದಂದು ಹಿಮಾಲಯದ ತಪ್ಪಲಿನಲ್ಲಿ ಬೆತ್ತಲಾದ ನಟ ವಿದ್ಯುತ್; ಹಂಚಿಕೊಂಡ ಫೋಟೋ ವೈರಲ್