ಗೋವಾದ ಆತಿಥ್ಯದಲ್ಲಿ 37ನೇ ರಾಷ್ಟ್ರೀಯ ಗೇಮ್ಸ್
Team Udayavani, Oct 9, 2022, 10:31 PM IST
ನವದೆಹಲಿ: ಮುಂದಿನ ವರ್ಷದ ಅಕ್ಟೋಬರ್‌ನಲ್ಲಿ ನಡೆಯುವ 37ನೇ ರಾಷ್ಟ್ರೀಯ ಗೇಮ್ಸ್ ಗೋವಾದ ಆತಿಥ್ಯದಲ್ಲಿ ನಡೆಯಲಿದೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಶನಿವಾರ ದೃಢಪಡಿಸಿದೆ.
ಗೇಮ್ಸ್‌ನ ಆತಿಥ್ಯ ವಹಿಸುವ ಬಗ್ಗೆ ಗೋವಾ ಸರಕಾರವು ಐಒಎಗೆ ತನ್ನ ಒಪ್ಪಿಗೆ ಸೂಚಿಸಿದೆ. ಈ ಮೊದಲು ಗೋವಾ ಸರಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿ ಅಜಿತ್ ರಾಯ್ ಅವರಿಗೆ ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ¤ ಅವರು ಬರೆದ ಪತ್ರದಲ್ಲಿ 2023ರ ಗೇಮ್ಸ್‌ನ ಆತಿಥ್ಯ ವಹಿಸುವ ಗೋವಾ ಸರಕಾರದ ಬೆಂಬಲದಿಂದ ಐಒಎಗೆ ಖುಷಿ ತಂದಿದೆ ಮತ್ತು ಐಒಎ ಗೋವಾದಲ್ಲಿ ಗೇಮ್ಸ್ ಆಯೋಜಿಸಲು ತನ್ನ ಒಪ್ಪಿಗೆ ಸೂಚಿಸುತ್ತದೆ ಎಂದು ಬರೆದಿದ್ದರು.
ಗುಜರಾತ್‌ನ ಸೂರತ್‌ನಲ್ಲಿ ಅ.12ರಂದು ನಡೆಯುವ 36ನೇ ರಾಷ್ಟ್ರೀಯ ಗೇಮ್ಸ್‌ನ ಸಮಾರೋಪ ಸಮಾರಂಭದಲ್ಲಿ ಗೋವಾ ನಿಯೋಗವು ಐಒಎಯ ಧ್ವಜವನ್ನು ಸ್ವೀಕರಿಸುವ ಸಾಧ್ಯತೆಯಿದೆ.