ಒಂದೇ ದಿನ 46,426 ಕೋವಿಡ್ ಸೋಂಕು ದೃಢ: 32 ಸಾವು
ಕೋವಿಡ್ ಪರೀಕ್ಷೆ 1.40ಲಕ್ಷಕ್ಕೆ ಇಳಿಕೆ: ಪಾಸಿಟಿವಿಟಿ ದರ ಏರಿಕೆ
Team Udayavani, Jan 24, 2022, 9:30 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಸೋಮವಾರ 46,426 ಮಂದಿಗೆ ಸೋಂಕು ದೃಢಗೊಂಡಿದ್ದು, 32ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ಸೋಂಕಿನ ದರ ಶೇ.32.95ಕ್ಕೆ ಹಾಗೂ ಮರಣ ಪ್ರಕರಣ ಶೇ.0.6ಕ್ಕೆ ಏರಿಕೆಯಾಗಿದೆ.
ಐಸಿಎಂಆರ್ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಕೇವಲ ಲಕ್ಷಣಗಳಿರುವವರಿಗೆ ಸ್ವಾéಬ್‌ಗಳ ಪರೀಕ್ಷೆ ನಡೆಸುವಂತೆ ಆದೇಶಿಸಿದ್ದು,ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೊನಾ ಮಾದರಿ ಪರೀಕ್ಷೆ 2.50 ಲಕ್ಷದಿಂದ 1.40ಲಕ್ಷಕ್ಕೆ ಇಳಿಕೆ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಏರಿಳಿತಗಳು ಕಂಡು ಬರುತ್ತಿವೆ. ಜ.23ರಂದು 26,299 ಪ್ರಕರಣ ದಾಖಲಾದರೆ ಜ.24ರಂದು 21,569 ಮಂದಿ ಸೋಂಕಿಗೆ ತುತ್ತಾಗುವ ಮೂಲಕ 24ಗಂಟೆಯಲ್ಲಿ 6,000 ಪ್ರಕರಣಗಳು ಕಡಿಮೆಯಾಗಿದೆ. ನಗರದಲ್ಲಿ ಸಕ್ರಿಯ ಪ್ರಕರಣ 2,26385 ಇದೆ. ರಾಜ್ಯದಲ್ಲಿ 41,703ಮಂದಿ ಗುಣಮುಖರಾಗಿದ್ದಾರೆ.
ಮೈಸೂರು 4105, ತುಮಕೂರು 2960,ಹಾಸನ 1908, ಮಂಡ್ಯ 1837, ಬೆಂಗಳೂರು ಗ್ರಾಮಾಂತರ 1607,ಧಾರವಾಡ 1407, ಚಿಕ್ಕಬಳ್ಳಾಪುರ 905,ಬಳ್ಳಾರಿ 817, ಉಡುಪಿ 677, ಕೋಲಾರ 661,ಕೊಡಗು 657, ದಕ್ಷಿಣ ಕನ್ನಡ 655,ಚಾಮರಾಜನಗರ 656, ಚಿತ್ರದುರ್ಗ 642, ಉತ್ತರ ಕನ್ನಡ 626, ಬೆಳಗಾವಿ 625, ಕೊಪ್ಪಳ 525, ಶಿವಮೊಗ್ಗ 537, ದಾವಣಗೆರೆ 467,ಕಲಬುರಗಿ 379,ಹಾವೇರಿ 304 , ಬಾಗಲಕೋಟೆ 291,ಬೀದರ್ 284,ರಾಮನಗರ 288,ರಾಯಚೂರು 281, ವಿಜಯಪುರ 270, ಗದಗ 257, ಚಿಕ್ಕಮಗಳೂರು 144, ಯಾದಗಿರಿ ಜಿಲ್ಲೆಯಲ್ಲಿ 85 ಪಾಸಿಟಿವ್ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಕೊರೊನಾದಿಂದ ಬಳಲುತ್ತಿದ್ದ 9, ಮೈಸೂರು, ತುಮಕೂರು ಹಾಗೂ ದ.ಕ. ತಲಾ 3, ಹಾವೇರಿ, ಕಲಬುರಗಿ ಜಿಲ್ಲೆಯಲ್ಲಿ ತಲಾ 2 , ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಗದಗ, ಹಾಸನ, ಮಂಡ್ಯ, ರಾಯಚೂರು, ಉಡುಪಿ ಜಿಲ್ಲೆಯಲ್ಲಿ ತಲಾ 1ರಂತೆ 32 ಮರಣ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಳೆಗೆ ಮತ್ತೆ ನಾಲ್ವರು ಸಾವು; ಸಿಎಂ ತವರು ಹಾವೇರಿಯಲ್ಲಿ ಒಂದೇ ದಿನ 87 ಮನೆ ಕುಸಿತ
28 ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ
ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ : ಐದು ಮಂದಿ ಪ್ರಾಣಾಪಾಯದಿಂದ ಪಾರು
MUST WATCH
ಹೊಸ ಸೇರ್ಪಡೆ
ಮಳೆಗೆ ಮತ್ತೆ ನಾಲ್ವರು ಸಾವು; ಸಿಎಂ ತವರು ಹಾವೇರಿಯಲ್ಲಿ ಒಂದೇ ದಿನ 87 ಮನೆ ಕುಸಿತ
28 ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ
ರಾಜ್ಯಸಭೆ, ಪರಿಷತ್ ಅಭ್ಯರ್ಥಿ ಆಯ್ಕೆಗೆ ಇಂದು ದಿಲ್ಲಿಗೆ: ಸಿದ್ದರಾಮಯ್ಯ
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ