IT Returns: ಅಕ್ಟೋಬರ್ ಅಂತ್ಯದವರೆಗೆ 7.85 ಕೋಟಿ ಐಟಿ ರಿಟರ್ನ್ಸ್ ಸಲ್ಲಿಕೆ
ಇದು ಸಾರ್ವಕಾಲಿಕ ದಾಖಲೆ: ಐ.ಟಿ. ಇಲಾಖೆ
Team Udayavani, Nov 2, 2023, 12:23 AM IST
ಹೊಸದಿಲ್ಲಿ: 2023-24ನೇ ಆರ್ಥಿಕ ವರ್ಷದ ಅಕ್ಟೋಬರ್ 31ರ ವರೆಗೆ 7.85 ಕೋಟಿ ವರೆಗಿನ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಯಾಗಿದ್ದು, ಇದು ಸಾರ್ವಕಾಲಿಕ ಏರಿಕೆಯಾಗಿದೆ. ಅಲ್ಲದೇ ಈ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ ಎಂದು ಆದಾಯ ತೆರಿಗೆ (ಐಟಿ) ಇಲಾಖೆ ಹೇಳಿದೆ. ಜತೆಗೆ ಸರಿಯಾದ ಸಮಯಕ್ಕೆ ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ತೆರಿಗೆ ದಾರರು ಮತ್ತು ತೆರಿಗೆ ವೃತ್ತಿಪರರನ್ನು ಶ್ಲಾ ಸಿದೆ.
ಇಲಾಖೆಯ ಮಾಹಿತಿಗಳ ಪ್ರಕಾರ, 2023-24ರ ಅಕ್ಟೋಬರ್ 31ರ ಒಳಗೆ ಸಲ್ಲಿಕೆಯಾಗಿರುವ ಐಟಿಆರ್ 7.65 ಕೋಟಿ. ಅಂದರೆ ಇದು 2022-23ರ ನವೆಂಬರ್ 7ರ ವರೆಗೆ ಸಲ್ಲಿಕೆಯಾಗಿದ್ದ 6.85 ಕೋಟಿಗಿಂತಲೂ ಹೆಚ್ಚಿನದಾಗಿದ್ದು, ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.11.7ರಷ್ಟು ಹೆಚ್ಚಳವನ್ನು ದಾಖಲಿ ಸಿದೆ. ಇದಲ್ಲದೇ ಅಕ್ಟೋಬರ್ 31ರ ವರೆಗೆ ಸಲ್ಲಿಕೆಯಾಗಿರುವ ಐಟಿಆರ್ಗಳ ಪೈಕಿ 7.51 ಕೋಟಿಗೂ ಅಧಿಕ ಐಟಿಆರ್ಗಳನ್ನು ಈಗಾಗಲೇ ಪರಿಶೀಲಿಸಲಾಗಿದ್ದು, ಶೇ.96 ಐಟಿಆರ್ಗಳು ಪರಿಶೀಲನೆ ಗೊಳಪಟ್ಟು ಪ್ರಕ್ರಿಯೆ ಗೊಂಡಿವೆ.