
Literate: 92ನೇ ವಯಸ್ಸಿನಲ್ಲಿ ಅಕ್ಷರಸ್ತರಾದ ಅಜ್ಜಿ !
ಉ.ಪ್ರ.ದ ಬುಲಂದ್‌ಶಹರ್‌ನ ಸಲೀಮಾ ಖಾನ್ ಸಾಧನೆ
Team Udayavani, Sep 27, 2023, 9:50 PM IST

ಲಕ್ನೋ: ಕಲಿಕೆಗೆ ಹುಮ್ಮಸ್ಸಷ್ಟೇ ಮುಖ್ಯ, ವಯಸ್ಸಲ್ಲ ಎನ್ನುವ ಮಾತು ಅಕ್ಷರಶಃ ಸತ್ಯ. 92ನೇ ವಯಸ್ಸಿನಲ್ಲೂ ಅಕ್ಷರದ ಮೇಲೆ ಅಕ್ಕರೆ ಇಟ್ಟು ಅಕ್ಷರಸ್ತರಾಗಿರುವ ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಛಾವಲಿ ಗ್ರಾಮದ ನಿವಾಸಿ ಸಲೀಮಾ ಖಾನ್ ಇದಕ್ಕೆ ನೈಜ ನಿದರ್ಶನ.
ಮಕ್ಕಳು, ಮೊಮ್ಮಕ್ಕಳು ಮಾತ್ರವಲ್ಲದೇ ಮುಮ್ಮಕ್ಕಳನ್ನೂ ಕಂಡಿರುವ ಸಲೀಮಾ ಮನೆಯ ಮುಂದಿರುವ ಶಾಲೆಯ ಕಪ್ಪು ಬೋರ್ಡ್ ಕಾಣಲು ಮಾತ್ರ ತೆಗೆದುಕೊಂಡಿದ್ದ ಬರೋಬ್ಬರಿ 92 ವರ್ಷ! 14 ವರ್ಷಕ್ಕೆ ಮದುವೆಯಾಗಿ ಗಂಡನ ಮನೆ ಸೇರಿದ ಸಲೀಮಾಗೆ ಅಂದಿಗೆ ಕಲಿಯುವ ಅವಕಾಶವೂ ಇರಲಿಲ್ಲ, ಶಾಲೆಯೂ ಇರಲಿಲ್ಲ. ಆದರೀಗ ಅವರ ನಿವಾಸದ ಮುಂದೆಯೇ ಇರುವ ಸರ್ಕಾರಿ ಪ್ರಾಥಮಿಕ ಶಾಲೆ ಸಲೀಮಾರ ಒಳಗಿನ ಓದಿನ ಹಸಿವನ್ನು ಹೆಚ್ಚಿಸಿದೆ.
ದಿನ ಬೆಳದಾರೆ ಮಕ್ಕಳ ನಗು, ಆಟ-ಪಾಠಗಳನ್ನು ನೋಡುತ್ತಿದ್ದ ಸಲೀಮಾರಿಗೆ ತಾನೂ ಕಲಿಯಬೇಕೆಂಬ ಆಸೆ ಮೂಡಿದೆ. ನೇರ ಶಾಲೆಗೆ ತೆರಳಿ ಶಿಕ್ಷಕರಿಗೆ ಮನವಿ ಮಾಡಿ, ಕ್ಲಾಸ್ ರೂಂನಲ್ಲಿ ಕುಳಿತು ಅಕ್ಷರ ಕಲಿತಿದ್ದಾರೆ. 8 ತಿಂಗಳ ಕಲಿಕೆಯ ಬಳಿಕ ಇದೀಗ ಸಾಕ್ಷರ ಭಾರತ ಅಭಿಯಾನದ ಪರೀಕ್ಷೆ ಬರೆದು ಅಕ್ಷರಸ್ತೆ ಎಂದು ಗುರುತಿಸಿಕೊಂಡಿದ್ದಾರೆ. ಇಳಿ ವಯಸ್ಸಿನಲ್ಲಿ ನಡೆಯಲೂ ಮಕ್ಕಳ ನೆರವು ಪಡೆಯುವ ಸಲೀಮಾ, ಓದಿನ ವಿಚಾರದಲ್ಲಿ ತೋರಿದ ಆಸಕ್ತಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇನ್ಸ್ಟಾಗ್ರಾಮ್‌ನಲ್ಲಿ ‘RIP’ ಫೋಟೋ ಪೋಸ್ಟ್ ಮಾಡಿ ಆತ್ಮಹತ್ಯೆಗೆ ಶರಣಾದ ಯುವಕ

Varanasi; ಕಾಶಿ ವಿಶ್ವನಾಥ ಧಾಮಕ್ಕೆ 2 ವರ್ಷಗಳಲ್ಲಿ ದಾಖಲೆಯ 12.9 ಕೋಟಿ ಭಕ್ತರ ಭೇಟಿ

Indore: ಪ್ರೇಯಸಿಯನ್ನು ಮದುವೆಯಾಗಲು ಲಿಂಗ ಬದಲಾಯಿಸಿ ಗಂಡಾಗಿ ಬದಲಾದ ಮಹಿಳೆ.!

Bhojipura; ಟ್ರಕ್ ಗೆ ಡಿಕ್ಕಿ ಹೊಡೆದ ಕಾರು; ಸುಟ್ಟು ಕರಕಲಾದ ಮಗು ಸೇರಿ ಎಂಟು ಜನರು

Chandigarh; ತಡರಾತ್ರಿ ಕಾರ್ಯಾಚರಣೆ: ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ ಆರೋಪಿಗಳ ಬಂಧನ