Railway: ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ಹೊಸ ಮೈಲುಗಲ್ಲು
ಪಣಂಬೂರು ಯಾರ್ಡ್ನಲ್ಲಿ 50.01 ಕೋ.ರೂ. ಆದಾಯ
Team Udayavani, Jan 5, 2024, 1:03 AM IST
ಮಂಗಳೂರು: ಪಾಲಕ್ಕಾಡ್ ರೈಲ್ವೇ ವಿಭಾಗ ಮಂಗಳೂರಿನ ಪಣಂಬೂರು ಯಾರ್ಡ್ನಲ್ಲಿ 2023ರ ಡಿಸೆಂಬರ್ ತಿಂಗಳಲ್ಲಿ 50,01,53,651 ರೂ. ಆದಾಯ ಪಡೆಯುವ ಮೂಲಕ ಇಲಾಖೆ ಹೊಸ ಮೈಲುಗಲ್ಲು ಸಾಧಿಸಿದೆ.
ಒಟ್ಟು 204 ಗೂಡ್ಸ್ ರೈಲುಗಳ 10,670 ವ್ಯಾಗನ್ಗಳ ಮೂಲಕ 6,97,426.4 ಮೆಟ್ರಿಕ್ ಟನ್ ಸರಕು ನಿರ್ವಹಣೆ ಮಾಡಲಾಗಿದೆ. ಕಲ್ಲಿದ್ದಲು, ಪೆಟ್ರೋಲಿಯಂ ಕೋಕ್, ರಸಗೊಬ್ಬರ, ಖಾದ್ಯ ತೈಲಗಳನ್ನು ಸಾಗಿಸಲಾಗಿದೆ. ವಿಭಾಗದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹದೊಂದು ಗಮನಾರ್ಹ ಸಾಧನೆ ದಾಖಲಾಗಿದೆ.
ವಿಭಾಗದ ಸಾಧನೆ ಕುರಿತು ಪಾಲಕ್ಕಾಡ್ ವಿಭಾಗೀಯ ರೈಲ್ವೇ ಪ್ರಬಂಧಕ ಅರುಣ್ ಕುಮಾರ್ ಚತುರ್ವೇದಿ ಪ್ರತಿಕ್ರಿಯೆ ನೀಡಿ, ಸಮರ್ಥ ಕಾರ್ಯಾಚರಣೆ, ಕಾರ್ಯತಂತ್ರ, ಗ್ರಾಹಕ ಸಂತೃಪ್ತಿಯ ಕಡೆಗೆ ಹೆಚ್ಚಿನ ಗಮನ ಹರಿಸಿದ ಹಿನ್ನೆಲೆಯಲ್ಲಿ ಗುರಿಮೀರಿದ ಸಾಧನೆ ದಾಖಲಾಗಿದೆ. ಇದು ಕೇವಲ ಸಾಂಖೀಕ ದಾಖಲೆಯಾಗಿರದೆ ಉತ್ತರ ಕೇರಳ, ಕರ್ನಾಟಕ, ತಮಿಳುನಾಡು ಭಾಗದ ಆರ್ಥಿಕ ಅಭಿವೃದ್ಧಿ, ಇಂಧನ ಭದ್ರತೆ, ಕೃಷಿ ಮತ್ತು ಮೂಲಸೌಕರ್ಯದ ಅಭಿವೃದ್ಧಿಗೂ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ