Narendra Modi: ಮಕ್ಕಳೊಂದಿಗೆ ಮಗುವಾದ ಪ್ರಧಾನಿ
Team Udayavani, Nov 16, 2023, 11:37 PM IST
ಹೊಸದಿಲ್ಲಿ: ಮಕ್ಕಳನ್ನು ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಅವರು ಮಗುವೇ ಆಗಿಬಿಡುತ್ತಾರೆ. ಅವರೊಂದಿಗೆ ತಾವು ಮಕ್ಕಳಾಗಿ ಆಡಿ, ನಲಿಯುತ್ತಾರೆ. ಇತ್ತೀಚೆಗೆ ಇಬ್ಬರು ಮಕ್ಕಳೊಂದಿಗೆ ಪ್ರಧಾನಿ ಮೋದಿ ಅವರು ಖುಷಿಯಿಂದ ಆಟವಾಡುತ್ತಿರುವ ವೀಡಿಯೋ ಅನ್ನು ಟ್ವಿಟರ್(ಎಕ್ಸ್)ನಲ್ಲಿ ಬಿಜೆಪಿ ಹಂಚಿಕೊಂಡಿದೆ.
ವೀಡಿಯೋದಲ್ಲಿ ಅವರು, ಇಬ್ಬರು ಮಕ್ಕಳೊಂದಿಗೆ ನಾಣ್ಯ ಬಳಸಿಕೊಂಡು ಉಪಾಯವಾಗಿ ಆಡುವ ಆಟವನ್ನು ಆಡಿದ್ದಾರೆ. ಅಲ್ಲದೇ ಈ ಆಟವನ್ನು ಹೇಗೆ ಆಡುವುದು ಎಂದು ಅವರಿಗೆ ಕಲಿಸುತ್ತಾರೆ. ಸ್ವತಃ ಹಣೆಗೆ ನಾಣ್ಯ ಅಂಟಿಸಿಕೊಂಡು ಮಗುವಿನಂತೆ ಆಟ ಆಡುತ್ತಾರೆ. ವೀಡಿಯೋ ಹಂಚಿಕೊಂಡಿರುವ ಬಿಜೆಪಿ, “ಮೋದಿ ಅವರು ಮಕ್ಕಳೊಂದಿಗೆ ಮಗುವೇ ಆಗಿ ಬಿಡುತ್ತಾರೆ’ ಎಂದು ಬರೆದುಕೊಂಡಿದೆ. ಜುಲೈನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) 2020ರ ಮೂರನೇ ವಾರ್ಷಿಕ ಸಮಾರಂಭದಲ್ಲೂ ಅವರು ಮಕ್ಕಳೊಂದಿಗೆ ಬೆರೆತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ