ಒಂದು ಅತ್ಯಮೂಲ್ಯ ಇರುವೆಯ ಅಂತ್ಯ


Team Udayavani, Mar 10, 2021, 6:00 AM IST

ಒಂದು ಅತ್ಯಮೂಲ್ಯ ಇರುವೆಯ ಅಂತ್ಯ

ಒಂದು ಘಟನೆ, ಸನ್ನಿವೇಶಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ನಮ್ಮ “ಪೂರ್ವಾಗ್ರಹ’ವನ್ನು ಆಧರಿಸಿರುತ್ತದೆ. ಕೆಂಪು ಕಣ್ಣುಗಳಿರುವ ವ್ಯಕ್ತಿಯನ್ನು ಕಂಡ ಕೂಡಲೇ ನಮ್ಮ ಮನಸ್ಸಿನಲ್ಲಿ ಮೂಡುವ ಅನಿಸಿಕೆ “ಈತ ಕ್ರೂರಿಯಿರಬಹುದು’. ಇದಕ್ಕೆ ಕಾರಣ, ಕ್ರೂರಿಗಳ ಕಣ್ಣುಗಳು ಕೆಂಪಾಗಿರುತ್ತವೆ ಎಂಬ “ಮಾಹಿತಿ’ ಸಣ್ಣಂದಿನಿಂದಲೂ ನಮ್ಮ ಮನಸ್ಸಿನಲ್ಲಿ ತುಂಬಿರುವುದು. ಪ್ರತಿಯೊಂದರ ಬಗೆಗೂ ನಮ್ಮ ಸ್ಮತಿಕೋಶದಲ್ಲಿ ಮಾಹಿತಿ ಗಳು, ಅನುಭವಗಳು ಈಗಾಗಲೇ ತುಂಬಿರುತ್ತವೆ; ಅವುಗಳ ಆಧಾರದಲ್ಲಿ ಪ್ರತಿಕ್ರಿಯಿ ಸುತ್ತ ಹೋಗುತ್ತೇವೆ. ಹೆಣ್ಣು ಅಂದರೆ ಅಬಲೆ, ಗಂಡು ಅಳಬಾರದು, ಬಸ್‌ ನಿಲ್ದಾಣದಲ್ಲಿ ಗಹ ಗಹಿಸಿ ನಗಬಾರದು, ಚಹಾ ಕುಡಿಯುವಾಗ “ಸೊರ್‌’ ಸದ್ದು ಹೊರಡಿ ಸಬಾರದು… ಇವೆಲ್ಲವೂ ಇಂತಹ ಪೂರ್ವಾನುಭವ ಪ್ರೇರಿತ ನಿಲುವು- ಗ್ರಹಿಕೆಗಳೇ.

ಯಾವುದೇ ಸನ್ನಿವೇಶ, ಘಟನೆ, ವಿದ್ಯ ಮಾನ, ವಿಚಾರವನ್ನು ಅರ್ಥ ಮಾಡಿ ಕೊಳ್ಳುವುದಕ್ಕೆ ನಮಗೆ ಅಡ್ಡಿಯಾಗಿ ನಿಲ್ಲುವುದು ಈ ಗ್ರಹಿಕೆಗಳೇ. ಒಂದರ್ಥ ದಲ್ಲಿ ಇದು ನಾವು ಬಣ್ಣದ ಕನ್ನಡಕ ಧರಿಸಿ ಜಗತ್ತನ್ನು ನೋಡಿದ ಹಾಗೆ. ಬಣ್ಣದ ಕನ್ನಡಕ ತೆಗೆದಾಗ ಮಾತ್ರ ಲೋಕದ ನೈಜ ಬಣ್ಣ ಕಾಣಿಸುತ್ತದೆ. ಆದರೆ ನಾವು ಪ್ರತಿ ಯೊಂದನ್ನೂ ನಮ್ಮದೇ ಪೂರ್ವಾಗ್ರಹ ಗಳ ಆಧಾರದಲ್ಲಿ ವ್ಯಾಖ್ಯಾನಿಸುತ್ತೇವೆ, ಅರ್ಥ ಮಾಡಿಕೊಳ್ಳುತ್ತೇವೆ.

ಒಬ್ಟಾತನಿಗೆ ಇಪ್ಪತ್ತು ವರ್ಷಗಳ ಜೈಲು ಸಜೆಯಾಗಿತ್ತು. ನಿಜವಾಗಿ ಆತ ಘೋರ ಅಪರಾಧಿಯೇನಲ್ಲ; ಸನ್ನಿವೇಶದ ಪ್ರಮಾ ದದಿಂದಾಗಿ ಸಿಕ್ಕಿಬಿದ್ದಿದ್ದ.

ಜೈಲಿನ ಆತನ ಕೋಣೆಯಲ್ಲಿ ಒಂದು ಇರುವೆ ಕೂಡ ಇತ್ತು. ತನ್ನ ಒಂಟಿತನಕ್ಕೆ ಪರಿಹಾರವಾಗಿ ಈ ವ್ಯಕ್ತಿ ಇರುವೆಯ ಸ್ನೇಹ ಬೆಳೆಸಿದ. ಪ್ರತೀದಿನದ ತನ್ನ ಆಹಾರದಲ್ಲಿ ಅದಕ್ಕೂ ಪಾಲು ಕೊಡು ತ್ತಿದ್ದ. ಇದು ಅಭ್ಯಾಸವಾಗಿ ಕ್ರಮೇಣ ಇರುವೆಗೆ ಆತನ ಬಗೆಗಿನ ಭಯ ದೂರ ವಾಯಿತು. ತನಗೆ ಸಿಕ್ಕಿದ ಒಂದು ಬೆಂಕಿ ಪೊಟ್ಟಣ ಬಳಸಿ ಆತ ಇರುವೆಗೆ ಒಂದು ಮನೆ ಮಾಡಿಕೊಟ್ಟ. ಇರುವೆ ಮತ್ತು ಆತನ ಸ್ನೇಹ ಗಾಢವಾಯಿತು.

ಇಷ್ಟಾಗುವಾಗ ಹತ್ತು ವರ್ಷಗಳು ಸರಿದಿದ್ದವು. ಸ್ವಲ್ಪ ಸಮಯದ ಬಳಿಕ ಆತ ಸಮಯ ಕೊಲ್ಲುವುದಕ್ಕಾಗಿ ಹೆಂಚಿಕಡ್ಡಿ ಗಳನ್ನು ಉಪಯೋಗಿಸಿ ಒಂದು ಪುಟಾಣಿ ಗಿಟಾರ್‌ ತಯಾರಿಸಿದ. ಮುಂದಿನ ಐದು ವರ್ಷಗಳಲ್ಲಿ ಆತ ಇರುವೆಗೆ ಆ ಪುಟಾಣಿ ಗಿಟಾರ್‌ ನುಡಿಸಲು ಕಲಿಸಿದ. ಚಳಿ ಗಾಲದ ದೀರ್ಘ‌ ರಾತ್ರಿಗಳಲ್ಲಿ ಇರುವೆ ಗಿಟಾರ್‌ ನುಡಿಸುತ್ತ ಅವನ ಏಕಾಕಿ ತನವನ್ನು ನೀಗುತ್ತಿತ್ತು.
ಹದಿನೈದು ವರ್ಷ ಗಳು ಸಂದವು. ಹದಿ ನಾರನೆಯ ವರ್ಷದಿಂದ ಆತ ಇರುವೆಗೆ ನೃತ್ಯ ಮಾಡುವುದನ್ನು ಕಲಿ ಸಲು ಆರಂಭಿಸಿದ. ಕಾಲ ಕ್ರಮೇಣ ಅದು ಗಿಟಾರ್‌ ನುಡಿಸುತ್ತ, ನರ್ತಿಸುವು ದನ್ನು ಕಲಿತಿತು.

ಬಿಡುಗಡೆಯ ದಿನ ಹತ್ತಿರ ಬಂತು. ಜೈಲಿನಿಂದ ಹೊರಹೋದ ಮೇಲೆ ಹೊಟ್ಟೆ ಗೇನು ಮಾಡುವುದು ಎಂದು ಆಲೋಚಿ ಸುತ್ತಿದ್ದವನಿಗೆ ಇರುವೆಯ ಪ್ರದರ್ಶನ ಏರ್ಪಡಿಸಿದರೆ ಲಕ್ಷಾಂತರ ರೂಪಾಯಿ ಹರಿದುಬರುವುದರಲ್ಲಿ ಸಂಶಯವೇ ಇಲ್ಲ ಎಂದು ಹೊಳೆದುಬಿಟ್ಟಿತು.

ಬಿಡುಗಡೆಯ ದಿನ ಸಂತಸ ಆಚರಣೆ ಗಾಗಿ ಆತ ಹತ್ತಿರದ ಪಾನ ಕೇಂದ್ರಕ್ಕೆ ಹೋದ. ಅಲ್ಲಿ ಬೇಕಾದುದನ್ನು ತರಿಸಿದ ಬಳಿಕ ಇರುವೆಯನ್ನು ಮೇಜಿನ ಮೇಲೆ ಕೂರಿಸಿ ನರ್ತಿಸಲು ಹೇಳಿದ. ಪಾನ ಕೇಂದ್ರದ ಸಿಬಂದಿಯನ್ನು ಕರೆದು, “ಹೇಗನಿಸುತ್ತದೆ’ ಎಂದು ಕೇಳಿದ.

ಸಿಬಂದಿ “ಫ‌ಟ್‌’ ಎಂಬ ಸಪ್ಪಳ ಸಹಿತ ಇರುವೆಯನ್ನು ಕೊಂದು ಹಾಕಿದ. “ಕ್ಷಮಿಸಿ ಸರ್‌, ಮುಂದಿನ ಬಾರಿ ಹೀಗಾಗದು; ಮೇಜನ್ನು ಚೆನ್ನಾಗಿ ಒರೆಸಿ ಇಡುತ್ತೇನೆ’ ಎಂದ.

ಆ ಸಿಬಂದಿಯದು ತನ್ನದೇ ಆದ ಪೂರ್ವಾನುಭವ – “ಮೇಜಿನ ಮೇಲೆ ನೊಣ, ಇರುವೆ ಇರಬಾರದು.’ ಪ್ರಾಯಃ ಹಿಂದೆ ಕೆಲವು ಗ್ರಾಹಕರು ಹೀಗಾಗಿದ್ದಕ್ಕೆ ಆತನಿಗೆ ಬೈದಿರಬಹುದು. ಈಗ ಆತ ಜಗತ್ತಿನ ಅತ್ಯಂತ ಅಮೂಲ್ಯವಾದ ಇರುವೆಯನ್ನು ಕೊಂದುಹಾಕಿದ್ದ.

ವಿವೇಚನೆಯನ್ನು ಉಪಯೋಗಿಸದೆ ಪೂರ್ವಗ್ರಹಿಕೆಗಳ ಆಧಾರದಲ್ಲಿ ಕೆಲಸ ಮಾಡಿದರೆ ನಮ್ಮ ಕಥೆಯೂ ಇದೇ.

( ಸಾರ ಸಂಗ್ರಹ)

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.