ಕಾಲೇಜು ಮಕ್ಕಳಿಗೆ ಸಿಗದ ಟ್ಯಾಬ್‌: ಮುಕ್ತಾಯ ಹಂತದಲ್ಲಿ ಶೈಕ್ಷಣಿಕ ವರ್ಷ

1.43 ಲಕ್ಷ ಟ್ಯಾಬ್‌ಗೆ ಪ್ರಸ್ತಾವನೆ

Team Udayavani, Feb 7, 2023, 7:15 AM IST

ಕಾಲೇಜು ಮಕ್ಕಳಿಗೆ ಸಿಗದ ಟ್ಯಾಬ್‌: ಮುಕ್ತಾಯ ಹಂತದಲ್ಲಿ ಶೈಕ್ಷಣಿಕ ವರ್ಷ

ಉಡುಪಿ: ಪದವಿ ಕಾಲೇಜು ವಿದ್ಯಾರ್ಥಿಗಳ 2022-23ನೇ ಸಾಲಿನ ಶೈಕ್ಷಣಿಕ ತರಗತಿಗಳು ಕೊನೆಯ ಘಟ್ಟಕ್ಕೆ ತಲು ಪಿದರೂ ವಿದ್ಯಾರ್ಥಿಗಳಿಗೆ ಟ್ಯಾಬ್‌ ನೀಡುವ ಪ್ರಸ್ತಾವನೆಗೆ ಸರಕಾರದಿಂದ ಅನುಮೋದನೆ ಸಿಕ್ಕಿಲ್ಲ.

ಉಡುಪಿಯ 12 ಹಾಗೂ ದಕ್ಷಿಣ ಕನ್ನಡದ 21 ಸಹಿತ ರಾಜ್ಯದಲ್ಲಿ 430 ಸರಕಾರಿ ಪದವಿ ಕಾಲೇಜುಗಳಿವೆ. ಸುಮಾರು 3.5 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕರಾವಳಿಯ ಉಭಯ ಜಿಲ್ಲೆಯಲ್ಲಿ 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ವಿವಿಧ ಸರಕಾರಿ ಪದವಿ ಕಾಲೇಜುಗಳ 5 ಸಾವಿರಕ್ಕೂ ಅಧಿಕ ತರಗತಿ ಕೊಠಡಿಗಳನ್ನು ಸ್ಮಾರ್ಟ್‌ ಆಗಿ ಪರಿವರ್ತಿಸಲಾಗಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಈ ಹಿಂದೆ ಲ್ಯಾಪ್‌ಟಾಪ್‌ ವಿತರಿಸಲಾಗಿತ್ತು. ಆರ್ಥಿಕ ಹೊರೆಯಾಗುವುದರಿಂದ ಲ್ಯಾಪ್‌ ಟಾಪ್‌ ಬದಲಿಗೆ ಟ್ಯಾಬ್‌ ವಿತರಣೆಗೆ ಸರಕಾರ ನಿರ್ಧರಿಸಿತ್ತು. ಆದರೆ ಎರಡು ವರ್ಷಗಳಿಂದ ಟ್ಯಾಬ್‌ ಕೂಡ ಸರಿಯಾಗಿ ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ.

ಕಾಲೇಜು ಶಿಕ್ಷಣ ಇಲಾಖೆಯಿಂದ ನವಯುಗದ ಸಮಗ್ರ ಕಲಿಕಾ ನಿರ್ವಹಣೆ ವ್ಯವಸ್ಥೆ (ಕರ್ನಾಟಕ ಎಲ್‌ಎಂಎಸ್‌) ಸಿದ್ಧಪಡಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳ ಆನ್‌ಲೈನ್‌ ಮೂಲಕ ಕಲಿಕೆಗೆ ಬೇಕಾದ ಕಂಟೆಂಟ್‌ ಗಳನ್ನು ಅಪ್‌ಡೇಟ್‌ ಮಾಡಲಾಗುತ್ತದೆ. ಕಲಿಕೆಯನ್ನು ಇನ್ನಷ್ಟು ಸರಳಗೊಳಿಸಲು ಟ್ಯಾಬ್‌ ಒದಗಿಸಿದರೆ ಉತ್ತಮ ಎಂಬ ನೆಲೆಯಲ್ಲಿ ಸುಮಾರು 1.43 ಲಕ್ಷಕ್ಕೂ ಅಧಿಕ ಟ್ಯಾಬ್‌ ಆವಶ್ಯಕತೆಯಿದೆ ಎಂಬ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದೆ.

ಶೈಕ್ಷಣಿಕ ವರ್ಷದ ಅಂತಿಮ ಹಂತ
2022-23ನೇ ಸಾಲಿನಲ್ಲಿ ಪ್ರಥಮ ವರ್ಷದ ಪದವಿ ಕೋರ್ಸ್‌ಗೆ ಸೇರಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ಟ್ಯಾಬ್‌ (ಕುಟುಂಬದ ನಿರ್ದಿಷ್ಟ ಆದಾಯದ ಆಧಾರದಲ್ಲಿ) ವಿತರಣೆ ಮಾಡುವ ಮೂಲಕ ಕಲಿಕೆ ಹಾಗೂ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಸರಕಾರ ಯೋಜನೆ ರೂಪಿಸಿತ್ತು. ಪ್ರಸಕ್ತ ಸಾಲಿನ ಪದವಿ ಕಾಲೇಜುಗಳ ಮೊದಲ ವರ್ಷ ವಿದ್ಯಾರ್ಥಿಗಳ ಎರಡನೇ ಸೆಮಿಸ್ಟರ್‌ ನಡೆಯುತ್ತಿದೆ. ಈಗಾಗಲೇ ಟ್ಯಾಬ್‌ ವಿದ್ಯಾರ್ಥಿಗಳ ಕೈ ಸೇರಿದ್ದರೆ ಶೈಕ್ಷಣಿಕವಾಗಿ ಅನು ಕೂಲವಾಗುತ್ತಿತ್ತು. ಇನ್ನು ಎರಡು ಮೂರು ತಿಂಗಳಲ್ಲಿ ಶೈಕ್ಷಣಿಕ ವರ್ಷವೂ ಮುಗಿಯುತ್ತದೆ. ಅಷ್ಟರೊಳಗೆ ಸರಕಾರ ಟ್ಯಾಬ್‌ ನೀಡಬೇಕು ಎಂಬುದು ವಿದ್ಯಾರ್ಥಿಗಳು, ಪ್ರಾಧ್ಯಾಪಕರ ಆಗ್ರಹ.

ವಿತರಿಸದಿರಲು ಕಾರಣ ಏನು?
ಸರಕಾರಿ ಪದವಿ ಕಾಲೇಜುಗಳ ಸುಮಾರು ಅರ್ಹ 1.43 ಲಕ್ಷ ವಿದ್ಯಾರ್ಥಿಗಳಿಗೆ ತಲಾ 10 ಸಾ. ರೂ.ಗಳಿಂದ 11 ಸಾ. ರೂ.  ಮೌಲ್ಯದ ಟ್ಯಾಬ್‌ ವಿತರಣೆಗೆ ಇಲಾಖೆ ಪ್ರಸ್ತಾ ವನೆ ಸಿದ್ಧಪಡಿಸಿದೆ. ಈ ಟ್ಯಾಬ್‌ನಲ್ಲಿ ವಿದ್ಯಾರ್ಥಿ ಗಳ ಕಲಿಕೆಗೆ ಪೂಕರವಾದ ಮಾಹಿತಿ ಯನ್ನು ಮೊದಲೇ ಅಪ್‌ಲೋಡ್‌ ಮಾಡಲಾಗುತ್ತದೆ. 1.43 ಲಕ್ಷ ಟ್ಯಾಬ್‌ಗಳಿಗೆ ಕೋಟ್ಯಂತರ ರೂ. ಬೇಕಾಗುವುದರಿಂದ ಆರ್ಥಿಕ ಇಲಾಖೆ ಇನ್ನೂ ಅನುಮತಿ ನೀಡಿಲ್ಲ. ಬಜೆಟ್‌ನಲ್ಲಿ ಟ್ಯಾಬ್‌ ಜತೆಗೆ ಇನ್ನು ಕೆಲವು ಘೋಷಣೆಗಳ ನಿರೀಕ್ಷೆಯಲ್ಲಿ ಶಿಕ್ಷಣ ಇಲಾಖೆಯಿದೆ.

ಸರಕಾರಿ ಪದವಿ ಕಾಲೇಜಿನ ಅರ್ಹ ವಿದ್ಯಾರ್ಥಿಗಳಿಗೆ ಟ್ಯಾಬ್‌ ಒದಗಿಸುವ ಸಂಬಂಧ ಈಗಾಗಲೇ ಪ್ರಸ್ತಾವನೆ ಸಲ್ಲಿಸಿ ದ್ದೇವೆ. ಸರಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಬಜೆಟ್‌ ನಲ್ಲಿ ಪ್ರತ್ಯೇಕ ಅನುದಾನದ ಬಗ್ಗೆಯೂ ಮಾಹಿತಿ ಯಿಲ್ಲ.
– ಪಿ. ಪ್ರದೀಪ್‌, ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ

-ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

ಮೋದಿಯನ್ನೇ ಟೀಕಿಸಿದ ರಾಯಚೂರು ನಗರ ಬಿಜೆಪಿ ಶಾಸಕ: ಆಡಿಯೊ ವೈರಲ್

ಮೋದಿಯನ್ನೇ ಟೀಕಿಸಿದ ರಾಯಚೂರು ನಗರ ಬಿಜೆಪಿ ಶಾಸಕ: ಆಡಿಯೊ ವೈರಲ್

ದಕ್ಷಿಣ ಆಗ್ನೇಯ ರೈಲ್ವೆ…ಒಂದು ವರ್ಷದಲ್ಲಿ 1ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದ ಟಿಕೆಟ್ ಪರೀಕ್ಷಕ

ದಕ್ಷಿಣ ಆಗ್ನೇಯ ರೈಲ್ವೆ…ಒಂದು ವರ್ಷದಲ್ಲಿ 1ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದ ಟಿಕೆಟ್ ಪರೀಕ್ಷಕ

After gathering the opinion of the activists, the candidate was selected: Nalin Kumar Kateel

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ: ನಳಿನ್ ಕುಮಾರ್ ಕಟೀಲ್

5–sirsi

ಇಬ್ಬರು ಶಾಸಕರ ರಾಜೀನಾಮೆ? ಶಿರಸಿಯತ್ತ ಎಲ್ಲರ ಚಿತ್ತ!

IPL: Michael Vaughan Makes Bold Title Prediction

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

elephant

ಕಾಡಾನೆಯ ಹನಿಟ್ರ್ಯಾಪ್: ತೀರ್ಥಹಳ್ಳಿ ಪಟ್ಟಣಕ್ಕೆ ನುಗ್ಗಿದ್ದ ಕಾಡಾನೆಯ ಸೆರೆಯಾಗಿಸಿದ ಭಾನುಮತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾಲಾರಂಭಕ್ಕೂ ಮುನ್ನವೇ ಕೈಸೇರಲಿದೆ ಸಮವಸ್ತ್ರ, ಪುಸ್ತಕ

ಶಾಲಾರಂಭಕ್ಕೂ ಮುನ್ನವೇ ಕೈಸೇರಲಿದೆ ಸಮವಸ್ತ್ರ, ಪುಸ್ತಕ

ಇಂದು ಹೊಸದಿಲ್ಲಿಯಲ್ಲಿ ರಾಷ್ಟ್ರಪತಿಗಳ ಜತೆ ಸಂವಾದ : ಬಂಟ್ವಾಳ, ಉಡುಪಿಯ ಆರು ಮಂದಿ ಭಾಗಿ

ಇಂದು ಹೊಸದಿಲ್ಲಿಯಲ್ಲಿ ರಾಷ್ಟ್ರಪತಿಗಳ ಜತೆ ಸಂವಾದ : ಬಂಟ್ವಾಳ, ಉಡುಪಿಯ ಆರು ಮಂದಿ ಭಾಗಿ

ಮೀಸಲಾತಿ ಹಂಚಿಕೆಯಿಂದ ಯಾವುದೇ ಸಮುದಾಯಕ್ಕೂ ಅನ್ಯಾಯವಾಗಿಲ್ಲ: ಕೋಟ

ಮೀಸಲಾತಿ ಹಂಚಿಕೆಯಿಂದ ಯಾವುದೇ ಸಮುದಾಯಕ್ಕೂ ಅನ್ಯಾಯವಾಗಿಲ್ಲ: ಕೋಟ

ಇಂದಿನಿಂದ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ

ಇಂದಿನಿಂದ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ

arrest 3

ಮಟ್ಕಾ ಹಣ ಸಂಗ್ರಹ: ಬಂಧನ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ