Udayavni Special

ಕೊಂಚ ಹೆಚ್ಚೆನಿಸಿದರೆ ಅಡ್ಜೆಸ್ಟ್‌ ಮಾಡ್ಕೋ…


Team Udayavani, May 26, 2020, 5:22 AM IST

lov adjust

ಹೇ ಹುಡುಗಿ, ನಿನ್ನನ್ನು ಮೊದಲಸಲ ನೋಡಿದಾಗ, ಮುಂದೆ ನೀ ನನಗೆ ಇಷ್ಟು ಹತ್ತಿರ ಆಗುತ್ತೀಯ ಎಂಬ ಅಂದಾಜೂ ನನಗಿರಲಿಲ್ಲ. ಸ್ನೇಹದ ನೌಕೆಯಲ್ಲಿ ಆರಂಭವಾದ ನಮ್ಮಿಬ್ಬರ ಪಯಣ, ಇದೀಗ “ಪ್ರೀತಿ’ ಎಂಬ ದಡಕ್ಕೆ ಬಂದು  ನಿಂತಿದೆ. ನೀನೇ ಮುಂದಾಗಿ ಪ್ರೀತಿಯ ಪ್ರಸ್ತಾಪ ಮಾಡಿದೆಯಲ್ಲ, ಅವತ್ತು ನಿನ್ನನ್ನು ಒಂದಿಷ್ಟು ಆಟ ಆಡಿಸಬೇಕು ಅನ್ನಿಸಿತು. ಹಾಗೆಂದೇ- “ನನಗೆ ಅಂಥಾ ಫೀಲಿಂಗ್ಸ್ ಇಲ್ಲ. ಮುಂದೆ ನೋಡೋಣ’ ಎಂದು ಹೇಳಿ ಹೋಗಿಬಿಟ್ಟಿದ್ದೆ.

ನಾ  ಹೇಳಿದ್ದು ನಿಜವಲ್ಲ ಎಂದು ನಿನಗೂ ಗೊತ್ತಿತ್ತು ಅನಿಸ್ತದೆ. ಹಾಗಾಗಿಯೇ ನೀನು ನಿರ್ಲಿಪ್ತಳಾಗಿ “ಸರಿ’, ಅಂದಿದ್ದೆ. ನಿಜ ಹೇಳಬೇಕೆಂದರೆ, ನಿನ್ನನ್ನು ಮೊದಲ ಬಾರಿ ಕಂಡಾಗಲೇ, ದೇವತೆ ಏನಾದರೂ ಅಡ್ರೆಸ್‌ ಮಿಸ್ಸಾಗಿ ಭೂಲೋಕಕ್ಕೆ  ಬಂದುಬಿಟ್ಟಳಾ? ಅಂದುಕೊಂಡಿದ್ದೆ. ನಕ್ಷತ್ರಗಳನ್ನು ಮೀರಿಸುವಂಥ ಅ ನಿನ್ನ ಚೆಲುವಿಗೆ ಯಾರೇ ಆದರೂ ಸೋಲಲೇಬೇಕು, ಹಾಗೆ ಕಾಣಿಸಿದ್ದೆ ನೀನು.

ಆದರೆ, ಹೀಗೆಲ್ಲಾ ಹುಡುಗಿಯರ ಮುಂದೆ ಮುಕ್ತವಾಗಿ ಹೇಳುವಂಥ  ಧೈರ್ಯ,  ಹುಡುಗರಿಗೆ ಇಲ್ಲವಲ್ಲ..! ಈ ಕಾರಣದಿಂದ, ನಾನೂ ಸುಮ್ಮನೇ ಉಳಿದುಬಿಟ್ಟೆ… ಎಲ್ಲಾ ಪ್ರೇಮಿಗಳಂತೆ ನಾನೂ ನೂರಾರು ಕನಸು ಕಂಡಿರುವೆ. ಅವನ್ನೆಲ್ಲಾ ಈ ಪತ್ರದಲ್ಲಿ ಹೇಳುತ್ತಿರುವೆ. ಕೊಂಚ ಹೆಚ್ಚೆನಿಸಿದರೆ ಅಡ್ಜೆಸ್ಟ್‌ ಮಾಡ್ಕೋ.  ನಿನ್ನೊಂದಿಗೆ ಕಾಫಿ ಡೇಯ ಕಪ್ಪುಗಳಿಗೆ ಮುತ್ತಿಕ್ಕುತ್ತ, ಕಣ್ಣಲ್ಲಿ ಕಣೂಡಿಸುವಾಸೆ. ತೀಡುವ ತಂಗಾಳಿಯೊಂದಿಗೆ ಕಿರುಬೆರಳ ಹಿಡಿದು, ಕಡಲ ತೀರದಲ್ಲಿ ನಡೆಯುವಾಸೆ. ಮಾಗಿ ಚಳಿಯಲ್ಲಿ ಜಗವ ಮರೆತು, ಕೊಡಚಾದ್ರಿ ಬೆಟ್ಟವ ಏರಿ ಕೂರುವಾಸೆ.

ಬೈಕಿನಲ್ಲಿ ನಿನ್ನೊಂದಿಗೆ ಊರೆಲ್ಲಾ  ಸುತ್ತುವಾಸೆ. ಹೀಗೇ… ಆಸೆಗಳೇನೋ ನೂರಾರು ಇವೆ. ಆದರೆ, ಅದ್ಯಾಕೋ ಕಾಣೆ; ನಿನ್ನ ಎದುರು ನಿಂತರೆ, ಮಾತಾಡುವುದೇ ಮರೆತುಹೋಗುತ್ತದೆ. ಇನ್ನು ನಿನ್ನನ್ನು ಕಾಯಿಸಲ್ಲ.. ಈ  ಸಂಕಷ್ಟದ ದಿನಗಳು ಮುಗಿದ ನಂತರ, ಎಂದಿನಂತೆ ನಮ್ಮ  ಅಡ್ಡಾದಲ್ಲಿ ಭೇಟಿಯಾ ಗುವ. ಎದೆಗೂಡಲ್ಲಿ ಬಚ್ಚಿಟ್ಟು ಬಟವಾಡೆ ಗೊಂಡ ನೂರಾರು ಮಾತುಗಳೊಂದಿಗೆ, ಆಂತರ್ಯದಲ್ಲಿ ಹುದುಗಿಟ್ಟ ಹತ್ತಾರು ಬಾವಗಳೊಂದಿಗೆ ಅಂದು  ಎದುರಾಗುವೆ. ಇಂತಿ ನಿನ್ನವ.

* ಸುಮ್ಮನೆ ರೂಪೇಶ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

abhijna

ಉಡುಪಿ ದ್ವಿತೀಯ ಪಿಯುಸಿ ಫಲಿತಾಂಶ: 6 ಪ್ರಮುಖ ರ‌್ಯಾಂಕ್, ವಿಜ್ಞಾನದಲ್ಲಿ ಅಭಿಜ್ಞಾ ಪ್ರಥಮ

ಸಚಿವ ಈಶ್ವರಪ್ಪ ಹಾಗೂ ಕುಟುಂಬಸ್ಥರ ಕೋವಿಡ್ ವರದಿ ನೆಗೆಟಿವ್

ಸಚಿವ ಈಶ್ವರಪ್ಪ ಹಾಗೂ ಕುಟುಂಬಸ್ಥರ ಕೋವಿಡ್ ವರದಿ ನೆಗೆಟಿವ್

sachin

ರಾಜಸ್ಥಾನ ರಾಜಕೀಯ ಬಿಕ್ಕಟ್ಟು; ಉಪ ಮುಖ್ಯಮಂತ್ರಿ ಸ್ಥಾನದಿಂದ ಸಚಿನ್ ಪೈಲಟ್‌ ವಜಾ

ಸಂಪುಟದಲ್ಲಿ ಯಾವುದೇ ಗೊಂದಲ ಇಲ್ಲ; ಸಚಿವ ಎಸ್ ಟಿ ಸೋಮಶೇಖರ್

ಸಂಪುಟದಲ್ಲಿ ಯಾವುದೇ ಗೊಂದಲ ಇಲ್ಲ; ಸಚಿವ ಎಸ್ ಟಿ ಸೋಮಶೇಖರ್

ಉಡುಪಿ: ಸಾಲಿಗ್ರಾಮ ಬ್ಯಾಂಕ್ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್

ಉಡುಪಿ: ಸಾಲಿಗ್ರಾಮ ಬ್ಯಾಂಕ್ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್

eshwarappa

ಸಿಬ್ಬಂದಿಗೆ ಸೋಂಕು: ಕ್ವಾರಂಟೈನ್ ಆದ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿ

udupi

ಉಡುಪಿ ಜಿಲ್ಲೆಯ ಎಲ್ಲಾ ಗಡಿಗಳು ನಾಳೆ ರಾತ್ರಿಯಿಂದ 14 ದಿನ ಸೀಲ್ ಡೌನ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫೇಲಾಗೋದು ಪಾರ್ಟ್‌ ಆಫ್ ಲೈಫ್

ಫೇಲಾಗೋದು ಪಾರ್ಟ್‌ ಆಫ್ ಲೈಫ್

ಲಾಕ್‌ಡೌನ್‌ ಕತೆಗಳು… ಸೀಲ್‌ ಡೌನ್‌ ಆದಾಗಲೂ ಕೆಲಸ ಮಾಡಬೇಕಾಯಿತು…

ಲಾಕ್‌ಡೌನ್‌ ಕತೆಗಳು… ಸೀಲ್‌ ಡೌನ್‌ ಆದಾಗಲೂ ಕೆಲಸ ಮಾಡಬೇಕಾಯಿತು…

ಇಷ್ಟು ನೋವಿರುತ್ತೆ ಎಂದು ಗೊತ್ತಿರಲಿಲ್ಲ…

ಇಷ್ಟು ನೋವಿರುತ್ತೆ ಎಂದು ಗೊತ್ತಿರಲಿಲ್ಲ…

ಮಂಡಿ ನೋವಿಂದ ಮುಕ್ತಿ ಪಡೆಯಲು…ಪದ್ಮಾಸನ

ಮಂಡಿ ನೋವಿಂದ ಮುಕ್ತಿ ಪಡೆಯಲು…ಪದ್ಮಾಸನ

ಬಾರೋ ಸಾಧಕರ ಕೇರಿಗೆ : ಶಾಶ್ವತ ನೆನಪು

ಬಾರೋ ಸಾಧಕರ ಕೇರಿಗೆ : ಶಾಶ್ವತ ನೆನಪು

MUST WATCH

udayavani youtube

ಆಧಾರ್ ಕಾರ್ಡ್ ತೋರಿಸಿ COVID ಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk


ಹೊಸ ಸೇರ್ಪಡೆ

abhijna

ಉಡುಪಿ ದ್ವಿತೀಯ ಪಿಯುಸಿ ಫಲಿತಾಂಶ: 6 ಪ್ರಮುಖ ರ‌್ಯಾಂಕ್, ವಿಜ್ಞಾನದಲ್ಲಿ ಅಭಿಜ್ಞಾ ಪ್ರಥಮ

ಇನ್‌ಲ್ಯಾಂಡ್‌ ಲೆಟರ್‌: ಏಕೋ ಅಜ್ಜಿ ನೆನಪಾಗುತ್ತಿದ್ದಾಳೆ…

ಇನ್‌ಲ್ಯಾಂಡ್‌ ಲೆಟರ್‌: ಏಕೋ ಅಜ್ಜಿ ನೆನಪಾಗುತ್ತಿದ್ದಾಳೆ…

ಸಚಿವ ಈಶ್ವರಪ್ಪ ಹಾಗೂ ಕುಟುಂಬಸ್ಥರ ಕೋವಿಡ್ ವರದಿ ನೆಗೆಟಿವ್

ಸಚಿವ ಈಶ್ವರಪ್ಪ ಹಾಗೂ ಕುಟುಂಬಸ್ಥರ ಕೋವಿಡ್ ವರದಿ ನೆಗೆಟಿವ್

ಫೇಲಾಗೋದು ಪಾರ್ಟ್‌ ಆಫ್ ಲೈಫ್

ಫೇಲಾಗೋದು ಪಾರ್ಟ್‌ ಆಫ್ ಲೈಫ್

ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸಲು ಆಗ್ರಹ

ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸಲು ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.