ಕಲಬುರಗಿ: ಐವರು ಮಕ್ಕಳ ಸೇರಿ ಮತ್ತೆ 11 ಜನರಿಗೆ ಕೋವಿಡ್-19 ಸೋಂಕು ದೃಢ
Team Udayavani, Jun 10, 2020, 8:26 PM IST
ಕಲಬುರಗಿ: ಜಿಲ್ಲೆಯಲ್ಲಿ ಬುಧವಾರ ಐವರು ಮಕ್ಕಳು ಸೇರಿದಂತೆ ಮತ್ತೆ 11 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದ 10 ಜನ ಮತ್ತು ದೆಹಲಿ ಪ್ರವಾಸ ಹಿನ್ನೆಲೆಯ ಓರ್ವ ಯುವತಿಗೆ ಮಹಾಮಾರಿ ಪತ್ತೆಯಾಗಿದೆ. ಇದರೊಂದಿಗೆ ಕೋವಿಡ್-19 ಸೋಂಕಿತರ ಸಂಖ್ಯೆ 780ಕ್ಕೆ ಏರಿಕೆಯಾಗಿದೆ.
ದೆಹಲಿದಿಂದ ವಾಪಸ್ ಆಗಿರುವ ಕಲಬುರಗಿ ನಗರದ ಗಣೇಶ ನಗರದ ಬಳಿಯ ಬಾರೆಹಿಲ್ಸ್ ಪ್ರದೇಶದ 24 ವರ್ಷದ ಯುವತಿ (ಪಿ 5963) ಕೋವಿಡ್-19 ಸೋಂಕು ಅಂಟಿಕೊಂಡಿದೆ. ಉಳಿದಂತೆ ಮಹಾರಾಷ್ಟ್ರದಿಂದ ಬಂದವರಿಗೆ ಸೋಂಕು ವಕ್ಕರಿಸಿದೆ.
ಕಾಳಗಿ ಪಟ್ಟಣದ 5 ವರ್ಷದ ಹೆಣ್ಣು ಮಗು (ಪಿ 5958) ಮತ್ತು 13 ವರ್ಷದ ಬಾಲಕಿ (ಪಿ 5961), ಕಲಬುರಗಿಯ ಬಾಪುನಗರ ಪ್ರದೇಶದ 35 ವರ್ಷದ ಯುವಕ (ಪಿ 5959), ಆಶ್ರಯ ಕಾಲೋನಿ ಸುಲ್ತಾನಪುರ ರಸ್ತೆ ಪ್ರದೇಶದ 15 ವರ್ಷದ ಬಾಲಕಿ (ಪಿ 5987) ಮತ್ತು 23 ವರ್ಷದ ಯುವತಿ (ಪಿ 5988)ಗೆ ಮಹಾಮಾರಿ ಸೋಂಕು ಕಾಣಿಸಿಕೊಂಡಿದೆ.
ಚಿಂಚೋಳಿ ತಾಲೂಕಿನ ಲಚ್ಚುನಾಯಕ ತಾಂಡಾದ 7 ವರ್ಷದ ಬಾಲಕ (ಪಿ 5960) ಮತ್ತು 35 ವರ್ಷದ ಯುವಕ (ಪಿ 5962), ಯಡ್ರಾಮಿಯ 13 ವರ್ಷದ ಬಾಲಕ (ಪಿ 5964), ಕಲಬುರಗಿ ತಾಲೂಕಿನ ಬಬಲಾದ ಗ್ರಾಮದ 7 ವರ್ಷದ ಬಾಲಕ (ಪಿ 5985), ಅಫಜಲಪುರ ತಾಲೂಕಿನ ಮದರಾ (ಬಿ) ಗ್ರಾಮದ 25 ವರ್ಷದ ಯುವತಿ(ಪಿ 5986)ಗೆ ಕೋವಿಡ್-19 ಸೋಂಕು ತಗುಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
Lok Sabha Election; ಇಂದಿನಿಂದ 14 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು