
AI News: ಮದ್ಯ ಸಂಸ್ಥೆಗೆ ಎಐ CEO
Team Udayavani, Sep 24, 2023, 10:21 PM IST

ತಾಂತ್ರಿಕ ಕ್ಷೇತ್ರದಿಂದ ಹಿಡಿದು ಶಿಕ್ಷಣ ಕ್ಷೇತ್ರದವರೆಗೆ ಹಲವಾರು ಉದ್ಯೋಗಿಗಳ ಸ್ಥಾನ ತುಂಬಲು ಮುಂದಾಗಿರುವ ಕೃತಕ ಬುದ್ಧಿಮತ್ತೆ (ಎಐ) ಬರೀ ಉದ್ಯೋಗಿಯಾಗಿ ಮಾತ್ರವಲ್ಲ, ಮಾಲೀಕನಾಗಿಯೂ ಸಂಸ್ಥೆಗಳ ಮುನ್ನಡೆಸಲು ಸಜ್ಜುಗೊಂಡಿದೆ.
ಪೋಲೆಂಡ್‌ನ ಖ್ಯಾತ ಮದ್ಯಸಂಸ್ಥೆ ತನ್ನ ಪ್ರಾಯೋಗಿಕ ಸಿಇಒ(ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ) ಆಗಿ ಎಐ ಆಧಾರಿತ ರೊಬೋಟ್ ಅನ್ನು ನೇಮಿಸಿಕೊಂಡಿದೆ. ಹೌದು, ಡಿಕ್ಟಡಾರ್ ಸಂಸ್ಥೆಯಲ್ಲಿ “ಮಿಕ’ ಹೆಸರಿನ ರೋಬೋ ಈಗ ಸಿಇಒ ಆಗಿದ್ದು, ಚಂದನೆಯ ಬಾಟಲಿಗಳ ಡಿಸೈನ್ ಹೇಗಿರಬೇಕು ಎಂಬ ನಿರ್ಣಯದಿಂದ ಹಿಡಿದು, ಉದ್ಯೋಗಿಗಳ ನೇಮಕಾತಿ, ವಜಾ ಸೇರಿದಂತೆ ಪ್ರಮುಖ ಕಾರ್ಯತಂತ್ರವನ್ನೂ ಈ ರೋಬೋ ಮೇಲ್ವಿಚಾರಣೆ ನಡೆಸುತ್ತಿದೆ.
ಟಾಪ್ ನ್ಯೂಸ್
