
AI News; ಇನ್‌ಸ್ಟಾಗ್ರಾಂನಲ್ಲೂ ಎಐ ಎಡಿಟಿಂಗ್
Team Udayavani, Oct 1, 2023, 8:55 PM IST

ಜಾಲತಾಣ ವೇದಿಕೆ ಇನ್‌ಸ್ಟಾಗ್ರಾಂ ತನ್ನ ವಿನೂತನ ಫೀಚರ್‌ಗಳಿಂದಲೇ ಬಳಕೆದಾರರಿಂದ ಮೆಚ್ಚುಗೆ ಗಳಿಸಿತ್ತು. ಈಗ ಇನ್‌ಸ್ಟಾಗೆ ಕೃತಕ ಬುದ್ಧಿಮತ್ತೆ ಕೂಡ ಸಾಥ್ ನೀಡಲಿದ್ದು, ಇನ್‌ಸ್ಟಾ ಬಳಕೆದಾರರಿಗೆ ಎಐ ಮೂಲಕ ಫೋಟೋ ಎಡಿಟ್ ಮಾಡಿಕೊಳ್ಳುವ ಆಯ್ಕೆ ದೊರೆಯುತ್ತಿದೆ. ಹೌದು, “ರೀಸ್ಟೈಲ್’ ಹೆಸರಿನ ಎಐ ಆಧಾರಿತ ತಂತ್ರಜ್ಞಾನವನ್ನು ಇನ್‌ಸ್ಟಾಗ್ರಾಂ ಪರಿಚಯಿಸುತ್ತಿದೆ. ಈ ಫಿಲ್ಟರ್ ಬಳಕೆ ಮಾಡುವ ಮೂಲಕ ಬಳಕೆದಾರರು ತಮ್ಮ ಫೋಟೋಗಳನ್ನು ವಿವಿಧ ರೀತಿಯಲ್ಲಿ ಅಂದರೆ ವಿನ್ಯಾಸವನ್ನೇ ಬದಲಿಸಿ ತಮಗೆ ಬೇಕಾದಂತೆ ಚಿತ್ರಿಸಿಕೊಳ್ಳಲು, ಸ್ಟಿಕ್ಕರಿಂಗ್ ಮಾಡಲು ಸಹಾಯಕವಾಗಲಿದೆ.
“ಬ್ಯಾಕ್‌ಡ್ರಾಪ್’ ಎನ್ನುವ ಮತ್ತೂಂದು ಎಐ ಚಾಲಿತ ಫಿಲ್ಟರ್ ಅನ್ನೂ ವಿನ್ಯಾಸಗೊಳಿಸಲಾಗಿದ್ದು, ಇದು ವರ್ಚುವೆಲ್ ಗ್ರೀನ್ ಸ್ಕ್ರೀನ್ ಎಫೆಕ್ಟ್ ನೀಡಲಿದೆ. ಶೀಘ್ರವೇ ಈ ಎರಡೂ ಫೀಚರ್‌ಗಳನ್ನೂ ಇನ್‌ಸ್ಟಾಗ್ರಾಂ ಲಭ್ಯಗೊಳಿಸಲಿದೆ.
ಟಾಪ್ ನ್ಯೂಸ್
