ರಾಷ್ಟ್ರಪ್ರಶಸ್ತಿ ವಿಜೇತ ದಿ. ಸಂಚಾರಿ ವಿಜಯ್‌ಗೆ ವಿಶೇಷ ಗೌರವ ನೀಡಿದ ಅಮೆರಿಕಾ ಚಿತ್ರಮಂದಿರ
Team Udayavani, Jun 29, 2021, 8:34 PM IST

ಬೆಂಗಳೂರು : ಬೈಕ್ ಅಪಘಾತದಲ್ಲಿ ಮಡಿದ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರಿಗೆ ಅಮೆರಿಕದಲ್ಲಿ ವಿಶೇಷ ಗೌರವ ಸಿಕ್ಕಿದೆ. ಅಲ್ಲಿನ ಫ್ರಾಂಕ್ಲಿನ್ ಚಿತ್ರಮಂದಿರ ತನ್ನ ಥಿಯೇಟರ್ ಬೋರ್ಡ್ ಮೇಲೆ ವಿಜಯ್ ಕುರಿತಾದ ಭಾವುಕ ಸಂದೇಶವೊಂದನ್ನು ಪ್ರಕಟಿಸಿದೆ.
ಜೂನ್ 15 ರಂದು ಬೈಕ್ ಅಪಘಾತದಲ್ಲಿ ಸಂಚಾರಿ ವಿಜಯ್ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದರು. ಇವರು ನಟಿಸಿದ್ದು ಬೆರಳೆಣಕೆಯಷ್ಟು ಸಿನಿಮಾಗಳಾದರೂ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದರು. ಇಂತಹ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಕಂಬಿನಿ ಮಿಡಿಯಿತು. ಇದೀಗ ಕನ್ನಡದ ಈ ನಟನಿಗೆ ಅಮೆರಿಕದ ಚಿತ್ರಮಂದಿರವೊಂದು ವಿಶೇಷ ಗೌರವ ನೀಡಿದೆ.
‘ಅಮೇರಿಕಾದ ಫ್ರಾಂಕ್ಲಿನ್ ಥಿಯೇಟರ್ ಡಿಜಿಟಲ್ ಬೋರ್ಡಿನಲ್ಲಿ ‘Always in our Heart , Sanchari Vijay, Gone Yet Not Forgotten’ ಎಂಬ ಸಂದೇಶ ಪ್ರಕಟಿಸಿದೆ. ಅಗಲಿದ ಕನ್ನಡದ ಕಲಾವಿದನನ್ನು ಗುರುತಿಸಿದ ಫ್ರಾಂಕ್ಲಿನ್ ಥಿಯೇಟರ್ ಮತ್ತು ಕಾರಣಕರ್ತರಾದ ರವಿ ಕಶ್ಯಪ್ ರವರಿಗೆ ವಂದನೆಗಳು” ಎಂದು ಲಿಂಗದೇವರು ಪೋಸ್ಟ್ ಹಾಕಿದ್ದಾರೆ.ಇನ್ನು 24 ಗಂಟೆಗಳ ಕಾಲ ಈ ಸಂದೇಶವನ್ನು ಥಿಯೇಟರ್ ಬೋರ್ಡ್‌ನಲ್ಲಿ ಪ್ರದರ್ಶಿಸಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bahrain: ನೂತನ ನಿಯೋಜಿತ ರಾಯಭಾರಿ ಭೇಟಿ

Holalkere: ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಗರಿಮೆ ಪುರಸಭೆಯ ಪೌರಕಾರ್ಮಿಕರಿಗೆ ಸಲ್ಲಬೇಕು

Raichur: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣು

iPhone 15ಗಾಗಿ ಮೊಬೈಲ್ ಅಂಗಡಿ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾವಾಗಿ ಥಳಿಸಿದ ಗ್ರಾಹಕರು.!

Nijjar: ಕೆನಡಾದಲ್ಲಿ ಇದ್ದುಕೊಂಡೇ ಭಾರತದಲ್ಲಿ ದಾಳಿಗೆ ಧನಸಹಾಯ ಮಾಡುತ್ತಿದ್ದ ನಿಜ್ಜರ್
MUST WATCH
ಹೊಸ ಸೇರ್ಪಡೆ