Hijab: ಇರಾನ್ ಹಿಜಾಬ್ ನೀತಿಗೆ ಮತ್ತೊಂದು ಬಲಿ
Team Udayavani, Oct 28, 2023, 6:57 PM IST
ಟೆಹ್ರಾನ್: ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಮೆಟ್ರೋ ರೈಲಿನಲ್ಲಿ ಕಳೆದ ವಾರ ಹಿಜಾಬ್ ಧರಿಸದ ಕಾರಣ ಯುವತಿಯನ್ನು ಥಳಿಸಿ, ಗಾಯಗೊಳಿಸಲಾಗಿತ್ತು. ಶನಿವಾರ ಆಕೆ ಅಸುನೀಗಿದ್ದಾಳೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಅರ್ಮಿತಾ ಗೆರಾವಂಡ್ ಮೃತ ದುರ್ದೈವಿ.
ಹಿಜಾಬ್ ಧರಿಸದ ಕಾರಣ ನೈತಿಕ ಪೊಲೀಸ್ಗಿರಿಗೆ ಒಳಗಾಗಿ ಪೊಲೀಸ್ ವಶದಲ್ಲಿ ಮಹ್ಸಾ ಅಮಿನಿ ಮೃತಪಟ್ಟು ಒಂದು ವರ್ಷ ಘಟಿಸುವ ವೇಳೆಗೆ ಹಿಜಾಬ್ ಸಂಬಂಧ ಮತ್ತೂಂದು ಬಲಿಯಾದಂತಾಗಿದೆ. ಮಹ್ಸಾ ಸಾವು ಖಂಡಿಸಿ ಇರಾನ್ನಾದ್ಯಂತ ದಿನಗಟ್ಟಲೇ ನಾಗರಿಕರು ಬೀದಿಗಿಳಿದು ಉಗ್ರ ಹೋರಾಟ ನಡೆಸಿದ್ದರು. ಅ.1ರಂದು ಅರ್ಮಿತಾ ಮೆಟ್ರೋ ರೈಲಿನ ಒಳಗೆ ಪ್ರವೇಶಿಸಿದರು. ಹಿಜಾಬ್ ಧರಿಸದ ಕಾರಣ ಆಕೆಯನ್ನು ಹಿಗಾಮುಗ್ಗಾ ಥಳಿಸಲಾಗಿತ್ತು. ಪ್ರಜ್ಞೆ ಕಳೆದುಕೊಂಡ ಆಕೆ ಸ್ಥಳೀಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ