
Assam-Meghalaya: ಗಡಿ ಸಂಘರ್ಷ ಬಿಲ್ಲು-ಬಾಣದ ದಾಳಿ, ವ್ಯಕ್ತಿಗೆ ಗಾಯ
Team Udayavani, Sep 27, 2023, 11:37 PM IST

ಶಿಲ್ಲಾಂಗ್: ಈಶಾನ್ಯ ಭಾಗದಲ್ಲಿ ಮಣಿಪುರದಲ್ಲಿ ಹಿಂಸೆ ಮತ್ತೆ ಸ್ಫೋಟಗೊಂಡಿರು ವಂತೆಯೇ, ಅಸ್ಸಾಂ-ಮೇಘಾಲಯ ಅಂತರರಾಜ್ಯ ಗಡಿ ವಿವಾದದ ಕಿಡಿ ಮತ್ತೆ ಹೊತ್ತಿಕೊಂಡಿದೆ. ಗಡಿ ಪ್ರದೇಶದಲ್ಲಿರುವ ಸ್ಥಳೀಯರು ಒಬ್ಬರ ಮೇಲೊಬ್ಬರು ಬಿಲ್ಲುಬಾಣಗಳಿಂದ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ. ಮೇಘಾಲಯದ ಲಪಂಗಾಪ್ ಗ್ರಾಮ ಹಾಗೂ ಅಸ್ಸಾಂನ ತಪತ್ ಪ್ರದೇಶದ ಗಡಿ ಭಾಗದ ನಿವಾಸಿಗಳ ನಡುವೆ ಘರ್ಷಣೆ ಏರ್ಪಟ್ಟಿದೆ.
ಲಪಂಗಾಪ್ ಗ್ರಾಮದ ರೈತರು ಹೊಲದಲ್ಲಿ ಕೆಲಸ ಮಾಡುವಾಗ ಅಲ್ಲಿಯೇ ಅಡಗಿಕೊಂಡಿದ್ದ ಅಸ್ಸಾಂನ ನಿವಾಸಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆಂದು ರೈತರು ಆರೋಪಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಲಪಂಗಾಪ್‌ನ 200ಕ್ಕೂ ಅಧಿಕ ಮಂದಿ ಅಸ್ಸಾಂನ ನಿವಾಸಿಗಳ ಮೇಲೆ ದಾಳಿ ನಡೆಸಿದ್ದಾರೆ. ಇತ್ತ ತಪತ್ ನಿವಾಸಿಗಳು ತಾವೇನೂ ಮಾಡೇ ಇಲ್ಲ. ಇದಕ್ಕಿದ್ದಂತೆ 200ಕ್ಕೂ ಅಧಿಕ ಮಂದಿ ಬಿಲ್ಲು-ಬಾಣಗಳಿಂದ ನಮ್ಮ ಮೇಲೆ ದಾಳಿ ನಡೆಸಿದರು ಎಂದು ಆರೋಪಿಸಿದ್ದಾರೆ. ಎರಡೂ ಕಡೆಯವರು ಹಲವಾರು ಗುಡಿಸಲುಗಳಿಗೆ ಬೆಂಕಿ ಇಟ್ಟಿದ್ದಾರೆ. ಇದೇ ವೇಳೆ ಕಲ್ಲು ತೂರಾಟ ನಡೆದು, ತಪತ್‌ನ ವ್ಯಕ್ತಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿರುವುದಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chhattisgarh: ಕಾರು – ಟ್ರಕ್ ನಡುವೆ ಭೀಕರ ಅಪಘಾತ; ವಧು – ವರ ಸೇರಿ ಐವರು ಮೃತ್ಯು

Chhattisgarh: ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಆಯ್ಕೆ ಮಾಡಿದ ಬಿಜೆಪಿ

I-T raids;ಬಿಜೆಪಿಯವರ ಮೇಲೇಕೆ ದಾಳಿಗಳಾಗುತ್ತಿಲ್ಲ:ಸಿದ್ದರಾಮಯ್ಯ ಪ್ರಶ್ನೆ

Hyderabad; ಆಸ್ಪತ್ರೆಗೆ ಭೇಟಿ ನೀಡಿ ಕೆಸಿಆರ್ ಯೋಗಕ್ಷೇಮ ವಿಚಾರಿಸಿದ ಸಿಎಂ ರೇವಂತ್ ರೆಡ್ಡಿ

BSP;ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಉತ್ತರಾಧಿಕಾರಿಯನ್ನು ನೇಮಿಸಿದ ಮಾಯಾವತಿ
MUST WATCH
ಹೊಸ ಸೇರ್ಪಡೆ

Chhattisgarh: ಕಾರು – ಟ್ರಕ್ ನಡುವೆ ಭೀಕರ ಅಪಘಾತ; ವಧು – ವರ ಸೇರಿ ಐವರು ಮೃತ್ಯು

Chhattisgarh: ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಆಯ್ಕೆ ಮಾಡಿದ ಬಿಜೆಪಿ

ಹುಟ್ಟುಹಬ್ಬದಂದು ಹಿಮಾಲಯದ ತಪ್ಪಲಿನಲ್ಲಿ ಬೆತ್ತಲಾದ ನಟ ವಿದ್ಯುತ್; ಹಂಚಿಕೊಂಡ ಫೋಟೋ ವೈರಲ್

Mudalagi:ಯುವಕರು ಗರಡಿ ಮನೆಗಳತ್ತ ಹೆಜ್ಜೆ ಹಾಕಿದ್ರೆ ಕುಸ್ತಿಯ ಗತವೈಭವ ಮತ್ತೆ ಮರುಕಳಿಸುತ್ತೆ

I-T raids;ಬಿಜೆಪಿಯವರ ಮೇಲೇಕೆ ದಾಳಿಗಳಾಗುತ್ತಿಲ್ಲ:ಸಿದ್ದರಾಮಯ್ಯ ಪ್ರಶ್ನೆ