“ಸಮಾಜ ಬಾಂಧವರಿಗೆ ಅಸೋಸಿಯೇಶನ್‌ ವಿವಿಧ ರೀತಿಯಲಿ ಸಹಕರಿಸುತ್ತದೆ’

ಇದಕ್ಕೆ ಸರ್ವ ಸಮಾಜ ಬಾಂಧವರ ಸಹಕಾರ ದೊರಕುತ್ತಿದೆ ಎಂದು ಹೇಳಿ ಅಭಿನಂದಿಸಿದರು.

Team Udayavani, Jul 14, 2021, 3:28 PM IST

Billava

ಮುಂಬಯಿ, ಜು. 13: ಬಿಲ್ಲವರ ಅಸೋಸಿಯೇಶನ್‌ ಕೊರೊನಾ ಮಹಾಮಾರಿಯಿಂದ ಅತೀವ ತೊಂದರೆಗೊಳಗಾಗಿದ್ದ ಕುಟುಂಬಗಳಿಗೆ ಆರಂಭದಿಂದಲೇ ವಿವಿಧ ರೂಪದಲ್ಲಿ ಸಹಕರಿಸಿದೆ. ಲಸಿಕೆ ಅಭಿಯಾನ, ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ ನಡೆಸಿ ಇದೀಗ ಪ್ರಸ್ತುತ ದಿನಬಳಕೆಯ ವಸ್ತುಗಳನ್ನು ಆರ್ಥಿಕವಾಗಿ ತೊಂದರೆಯಲ್ಲಿರುವ ಕುಟುಂಬಗಳನ್ನು ಗುರುತಿಸಿ ಅಸೋಸಿಯೇಶನ್‌ನ ಎಲ್ಲ ಕಚೇರಿಗಳಲ್ಲೂ ನೀಡಲು ಆರಂಭಿಸಿದೆ. ಈ ಅಭಿಯಾನಕ್ಕೆ ಸಮುದಾಯದ ಉದ್ಯಮಿಗಳ, ದಾನಿಗಳ, ಸ್ಥಳೀಯ ಕಛೇರಿಗಳ ಹಾಗೂ ಭಾರತ್‌ ಬ್ಯಾಂಕ್‌ ನೌಕರ ವೃಂದದ ಅಪಾರ ಸಹಕಾರ ದೊರಕಿದೆ.

ಮುಂದಿನ ದಿನಗಳಲ್ಲಿ ಸಂಸ್ಥೆಯ ಮುಖಾಂತರ ಹಲವಾರು ಸಮಾಜ ಪರ ಸೇವೆಗಳಿಗೆ ಅಡಿಪಾಯ ಹಾಕಲು ಯೋಜನೆ ತಯಾರಾಗುತ್ತಿದೆ. ದಾನಿಗಳು ಈ ಎಲ್ಲ ಯೋಜನೆಗಳಿಗೆ ಸಹಕರಿಸಬೇಕು ಎಂದು ಬಿಲ್ಲವರ ಅಸೋಸಿಯೇಶನಿನ ಅಧ್ಯಕ್ಷ ಹರೀಶ್‌. ಅಮೀನ್‌ ಹೇಳಿದರು.

ಅವರು ಜು. 11ರಂದು ಮೀರಾರೋಡ್‌ ಬಿಲ್ಲವರ ಸ್ಥಳೀಯ ಕಛೇರಿಯಲ್ಲಿ ಗುರು ಪ್ರಸಾದ ಆಹಾರದ ಕಿಟ್‌ ವಿತರಿಸಿ ಮಾತನಾಡಿ, ಸಮಾಜ ಬಾಂಧವರು ತೊಂದರೆಯಲ್ಲಿದ್ದರೆ ಯಾವುದೇ ಮುಜುಗರ ಮಾಡದೆ ತಕ್ಷಣ ಸ್ಥಳೀಯ ಕಛೇರಿ ಅಥವಾ ಕೇಂದ್ರ ಕಛೇರಿಯನ್ನು ಸಂಪರ್ಕಿಸಿ ಸಹಾಯ ಪಡಕೊಳ್ಳಬೇಕು ಎಂದರು.

ಅಸೋಸಿಯೇಶನ್‌ನ ಉಪಾಧ್ಯಕ್ಷ ಶ್ರೀನಿವಾಸ ಕರ್ಕೇರ ಅವರು ಮಾತನಾಡಿ, ದಿ| ಜಯ ಸಿ. ಸುವರ್ಣರ ಆಶಯದಂತೆ ಸಮಾಜದ ಸ್ಥಿತಿಗತಿಯನ್ನು ಅರಗಿಸಿಕೊಂಡಂತ ಯುವ ಅದ್ಯಕ್ಷರು ಸಮಾಜಕ್ಕೆ ದೊರಕಿದ್ದಾರೆ. ಗುರುಗಳ ಆಶೀರ್ವಾದದಿಂದ ಹರೀಶ್‌ ಜಿ. ಅಮೀನ್‌ ನೇತೃತ್ವದಲ್ಲಿ ಉತ್ತಮ ಸಮಾಜಪರ ಸೇವೆಗಳ ಅಡಿಪಾಯ ಹಾಕಲಾಗಿದೆ. ಇದಕ್ಕೆ ಸರ್ವ ಸಮಾಜ ಬಾಂಧವರ ಸಹಕಾರ ದೊರಕುತ್ತಿದೆ ಎಂದು ಹೇಳಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಮೀರಾರೋಡ್‌ ಭಾರತ್‌ ಬ್ಯಾಂಕಿನ ಸಹ ಪ್ರಬಂಧಕಿ ಉಮಾ ಬಿ. ಬಂಗೇರ, ಸಮಾಜ ಸೇವಕ ಶೇಖರ್‌ ಜಿ. ಪೂಜಾರಿ ಹಾಗೂ ಸ್ಥಳೀಯ ಕಚೇರಿಯ ಉಪಾಧ್ಯಕ್ಷ ಸುಭಾಷ್‌ ಕರ್ಕೇರ ಅವರು ಸಂಧಬೋìಚಿತವಾಗಿ ಮಾತನಾಡಿ ಶುಭಹಾರೈಸಿದರು. ಆರಂಭದಲ್ಲಿ ಭುವಾಜಿ ಶ್ಯಾಮ್‌ ಅಮೀನ್‌ ಅವರಿಂದ ಗುರು ಪ್ರಾರ್ಥನೆ ಹಾಗೂ ಆರತಿ ನಡೆಯಿತು. ನೂತನ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಅವರನ್ನು ಪದಾಧಿಕಾರಿಗಳು ಶಾಲು ಹೊದಿಸಿ ಹೂಗುತ್ಛ ನೀಡಿ ಅಭಿನಂದಿಸಿದರು.

ಆಗಮಿಸಿದ್ದ ಅತಿಥಿಗಳು, ದಾನಿಗಳನ್ನು ಹೂಗುಚ್ಛ ನೀಡಿ ಸತ್ಕರಿಸಲಾಯಿತು. ಸ್ಥಳೀಯ ಕಚೇರಿಯ ಗೌರವ ಕಾರ್ಯದರ್ಶಿ ಎನ್‌. ಪಿ. ಕೋಟ್ಯಾನ್‌ ಕಾರ್ಯಕ್ರಮ ನಿರೂಪಿಸಿದರು. ಗುರುಪ್ರಸಾದ ಕಿಟ್‌ ಪಡೆದುಕೊಂಡವರ ಯಾದಿಯನ್ನು ಸ್ಥಳೀಯ ಕೋಶಾಧಿಕಾರಿ ಎಚ್‌. ಎಮ್ ಪೂಜಾರಿ ಓದಿದರು. ಅಧ್ಯಕ್ಷರು ಹಾಗೂ ಅತಿಥಿಗಳು ಆಹಾರ ಕಿಟ್‌ ವಿತರಿಸಿದರು.

ವೇದಿಕೆಯಲ್ಲಿ ಕೇಂದ್ರ ಕಚೇರಿಯ ಜತೆ ಕಾರ್ಯದರ್ಶಿ ಹರೀಶ್‌ ಜಿ. ಸಾಲ್ಯಾನ್‌, ಕೇಂದ್ರ ಕಛೇರಿಯ ಪ್ರತಿನಿಧಿ ಮೋಹನ್‌ ಡಿ. ಪೂಜಾರಿ, ಸ್ಥಳೀಯ ಸಮಿತಿಯ ಗೌರವಾಧ್ಯಕ್ಷ ಭೋಜ ಬಿ. ಸಾಲ್ಯಾನ್‌, ಜಿಓಸಿ ಗಣೇಶ್‌ ಪೂಜಾರಿ, ಕೇಂದ್ರ ಸಮಿತಿಯ ಸದಸ್ಯ ನೀಲೇಶ್‌ ಪಲಿಮಾರ್‌, ಅಂಧೇರಿ
ಸ್ಥಳೀಯ ಸಮಿತಿಯ ಕಾರ್ಯದರ್ಶಿ ಹರೀಶ್‌ ಶಾಂತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ಥಳೀಯ ಸಮಿತಿಯ ಜತೆ ಕೋಶಾಧಿಕಾರಿ ವಿಜಯ ಅಮೀನ್‌, ಸದಸ್ಯರಾದ ವಿಶ್ವನಾಥ ಮಾಬಿಯಾನ್‌, ಲೀಲಾಧರ್‌ ಸನಿಲ್, ಜಿ. ಕೆ. ಕೆಂಚನಕೆರೆ, ದಿನೇಶ್‌ ಸುವರ್ಣ, ಸುಂದರಿ ಆರ್‌. ಕೋಟ್ಯಾನ್‌, ಶೋಭಾ ಎಚ್‌. ಪೂಜಾರಿ, ಸಂಜೀವಿ ಎಸ್‌. ಪೂಜಾರಿ, ಶಾಂಭವಿ ಜಿ. ಸಾಲ್ಯಾನ್‌, ಸುಲೋಚನಾ ಮಾಬಿಯಾನ್‌, ಭಾರತಿ ಅಂಚನ್‌, ಇಂದಿರಾ ಸುವರ್ಣ, ರಾಧಾ ಎಸ್‌. ಕೋಟ್ಯಾನ್‌, ಗಣೇಶ್‌ ಬಂಗೇರ ಹಾಗೂ ಶಂಕರ್‌ ಎಲ್‌. ಪೂಜಾರಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.