ವನಿತಾ ಟಿ20 ವಿಶ್ವಕಪ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಶುಭಾರಂಭ
Team Udayavani, Feb 12, 2023, 11:24 PM IST
ಪಾರ್ಲ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡವು ನ್ಯೂಜಿಲ್ಯಾಂಡ್ ತಂಡವನ್ನು 97 ರನ್ನುಗಳಿಂದ ಸೋಲಿಸುವ ಮೂಲಕ ವನಿತಾ ಟಿ20 ವಿಶ್ವಕಪ್ ಪ್ರಶಸ್ತಿ ಉಳಿಸಿಕೊಳ್ಳುವ ತನ್ನ ಅಭಿಯಾನವನ್ನು ಜಯದಿಂದಲೇ ಶುಭಾರಂಭ ಮಾಡಿದೆ.
ಅಲಿಸಾ ಹೀಲಿ, ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಎಲಿಸೆ ಪೆರ್ರಿ ಅವರ ಉಪಯುಕ್ತ ಆಟದಿಂದಾಗಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ತಂಡವು 9 ವಿಕೆಟಿಗೆ 173 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಆ್ಯಶ್ಲೇಗ್ ಗಾಡ್ನರ್ ಅವರ ಮಾರಕ ದಾಳಿಗೆ ತತ್ತರಿಸಿದ ನ್ಯೂಜಿಲ್ಯಾಂಡ್ ತಂಡವು ಕೇವಲ 14 ಓವರ್ಗಳಲ್ಲಿ 76 ರನ್ನಿಗೆ ಆಲೌಟಾಗಿ ಶರಣಾಯಿತು.
ನ್ಯೂಜಿಲ್ಯಾಂಡಿನ ಕುಸಿತಕ್ಕೆ ಕಾರಣರಾದ ಗಾಡ್ನರ್ ಕೇವಲ 12 ರನ್ನಿಗೆ 5 ವಿಕೆಟ್ ಹಾರಿಸಿದ್ದರು. ಇದು ಟಿ 20 ಕ್ರಿಕೆಟ್ನಲ್ಲಿ ಅವರ ಶ್ರೇಷ್ಠ ಬೌಲಿಂಗ್ ನಿರ್ವಹಣೆಯಾಗಿದೆ.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯ 9 ವಿಕೆಟಿಗೆ 173 (ಹೀಲಿ 55, ಲ್ಯಾನಿಂಗ್ 41, ಪೆರ್ರಿ 40, ಅಮೆಲಿಯಾ ಕೆರ್ರ 23ಕ್ಕೆ 3, ಲಿಯಾ ತಹುಹು 37ಕ್ಕೆ 3); ನ್ಯೂಜಿಲ್ಯಾಂಡ್ 14 ಓವರ್ಗಳಲ್ಲಿ 76 (ಅಮೆಲಿಯಾ ಕೆರ್ರ 21, ಆ್ಯಶ್ಲೇಗ್ ಗಾಡ್ನìರ್ 12ಕ್ಕೆ 5, ಮೆಗನ್ ಷಟ್ 8ಕ್ಕೆ 2).