ವಿವಿಧ ಆಯಾಮದಲ್ಲಿ ಪ್ರಕಾಶಿಸುತ್ತಿದೆ ತುಳು ಲಿಪಿ

ಪೋಸ್ಟರ್‌ ಮೂಲಕ ಜಾಗೃತಿ, ಆ್ಯಪ್‌ ಮೂಲಕ ಲಿಪಿ ಕಲಿಕೆ

Team Udayavani, May 11, 2020, 5:49 AM IST

ವಿವಿಧ ಆಯಾಮದಲ್ಲಿ ಪ್ರಕಾಶಿಸುತ್ತಿದೆ ತುಳು ಲಿಪಿ

ಕೋವಿಡ್‌-19 ಬಗ್ಗೆ ತುಳು ಲಿಪಿಯಲ್ಲಿ ಜಾಗೃತಿ ಮೂಡಿಸುವ ಪೋಸ್ಟರ್‌.

ಉಡುಪಿ: ಸಾವಿರಾರು ವರ್ಷಗಳ ಇತಿಹಾಸ ಇರುವ ತುಳು ಲಿಪಿ ಬಳಕೆಯಲ್ಲಿ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ. ತುಳು ಲಿಪಿಯಲ್ಲಿ ಕೋವಿಡ್‌-19 ಬಗ್ಗೆ ಜಾಗೃತಿ ಮೂಡಿಸುವ ಪೋಸ್ಟರ್‌ಗಳು ಸದ್ಯ ಉಭಯ ಜಿಲ್ಲೆಯಾದ್ಯಂತ ಪ್ರಚಾರದಲ್ಲಿದೆ.

ಜನರಿಗೆ ಕೋವಿಡ್‌-19 ಬಗೆಗೆ ಜಾಗೃತಿ ಮೂಡಿಸುವ ಸಲುವಾಗಿ ಸಾರ್ವಜನಿಕ ಜಾಗಗಳಾದ ಅಂಗಡಿ, ಆಸ್ಪತ್ರೆ ಮೊದಲಾದ ಕಡೆಯಲ್ಲಿ ತುಳು ಲಿಪಿಯಲ್ಲಿ ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ. ಆ ಮೂಲಕ ಲಿಪಿಯ ಪ್ರಚಾರ, ಕೋವಿಡ್‌-19 ಬಗ್ಗೆ ಜಾಗ್ರತೆ ಮೂಡಿಸುವ ಎರಡೆರಡು ಕೆಲಸ ಆಗುತ್ತಿದೆ. ಉಡುಪಿಯ ಕಡಿಯಾಳಿ, ಕೃಷ್ಣಮಠ ಸೇರಿದಂತೆ ಕಾರ್ಕಳ, ಬಜಗೋಳಿ, ಹೊಸ್ಮಾರ್‌, ಪುತ್ತೂರು ಮಂಗಳೂರು ಭಾಗದಲ್ಲಿ ಈಗಾಗಲೇ ಪೋಸ್ಟರ್‌ ಹಾಕಲಾಗಿದ್ದು ಉಳಿದೆಡೆ ಪೋಸ್ಟರ್‌ ಹಚ್ಚುವ ಕೆಲಸ ನಡೆಯುತ್ತಿದೆ.

ಅಣ್ಣಾಮಲೈ ಬೆಂಬಲ
ಕಳೆದ ವಾರ ತುಳು ಲಿಪಿಯ ಜನಜಾಗ್ರತಿ ಮತ್ತು ತುಳು ಲಿಪಿಯ ಅಪಪ್ರಚಾರದ ವಿರುದ್ಧ ಟ್ವಿಟ್ಟರ್‌ನಲ್ಲಿ “ಟ್ವಿಟ್‌ ತುಳುನಾಡು’ ಹ್ಯಾಶ್‌ ಟ್ಯಾಗ್‌ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ತುಳು ಸಂಸ್ಕೃತಿ ಆಚಾರ ವಿಚಾರಗಳನ್ನು ಪ್ರಶಂಸಿಸಿ ತಮ್ಮ ಹೆಸರನ್ನು ತುಳು ಲಿಪಿಯಲ್ಲಿ ಬರೆದು ಪೋಸ್ಟ್‌ ಮಾಡುವ ಮೂಲಕ ತುಳುಭಾಷೆಗೆ ಪ್ರೋತ್ಸಾಹಿಸಿದ್ದಾರೆ.

ಪದ-ತುಳು ಆ್ಯಪ್‌
ತುಳು ಲಿಪಿ ಟೈಪ್‌ ಮಾಡಲು “ಪದ-ತುಳು’ ಎಂಬ ಹೊಸ ಆ್ಯಪ್‌ ಅನ್ನು ತಯಾರಿಸಲಾಗಿದೆ. ಗೂಗಲ್‌ ಆ್ಯಂಡ್ರೈಡ್‌ ಸ್ಟೋರ್‌ನಲ್ಲಿ ಈ ಆ್ಯಪ್‌ ಲಭ್ಯವಿದೆ.

ಕೆ.ಪಿ ರಾವ್‌ ಪ್ರೇರಣೆ
ತುಳು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾಗ ಕೆ.ಪಿ. ರಾವ್‌ ಅವರು ಭೇಟಿಯಾದಾಗ ಈ ಬಗ್ಗೆ ಅಭಿಪ್ರಾಯ ಮೂಡಿತ್ತು. ಇದರಿಂದ ತುಳು ಬರೆಯಲು ಸಹಕಾರವಾಗಬಹುದೆಂಬ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇವೆ. ಹಿಂದೆಯೂ ಕನ್ನಡ, ತಮಿಳು ಭಾಷೆಗೆ ಆ್ಯಪ್‌ ಮಾಡಿದ್ದೇವೆ. ತುಳುಸಿರಿ ಫಾಂಟ್‌ ಬಳಕೆ ಮಾಡಿಕೊಂಡು ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಇದೀಗ ಪದ-ತುಳು ಆ್ಯಪ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ.
-ಲೋಹಿತ್‌ ಶಿವಮೂರ್ತಿ. , ಪದ-ತುಳು ಆ್ಯಪ್‌ ಅಭಿವೃದ್ಧಿಪಡಿಸಿದವರು.

ತುಳು ಪೋಸ್ಟರ್‌
ಕೋವಿಡ್‌-19 ತಡೆಗೆ ಕರಾವಳಿ ಭಾಗದ ಜನರು ಉತ್ತಮ ಸ್ಪಂದಿಸುತ್ತಿದ್ದಾರೆ. ಇನ್ನು ಕೂಡ ಜಾಗರೂಕರಾಗಿರ ಬೇಕೆಂದು ಜೈ ತುಳುನಾಡು ಸಂಘಟನೆ ಮೂಲಕ ಈ ತುಳು ಲಿಪಿಯ ಪೋಸ್ಟ್‌ರ್‌ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ.
– ರವಿಚಂದ್ರ ಆಚಾರ್ಯ ದುರ್ಗಾನಗರ ,
ಪ್ರಧಾನ ಸಂಚಾಲಕರು, ಜೈ ತುಳುನಾಡು ಕಾರ್ಕಳ

ಟಾಪ್ ನ್ಯೂಸ್

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.