ಈಶ್ವರಪ್ಪಗೆ ದಣಿವಾಗಿದೆ, ಇನ್ನು ನಾನು ಕಾರು ಡ್ರೈವ್ ಮಾಡುತ್ತೇನೆ
Team Udayavani, Feb 7, 2023, 9:39 PM IST
ಶಿವಮೊಗ್ಗ: ಕ್ಷೇತ್ರದ ಜನರ ಸೇವೆ ಮಾಡಲು ನನಗೂ ಒಂದು ಅವಕಾಶ ಕೊಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡಬಹುದು ಎಂಬ ಆತ್ಮವಿಶ್ವಾಸವಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಲಭೆಗಳು ನಡೆಯುತ್ತಿರುವುದು ನಿಜ. ಶಾಸಕ ಕೆ.ಎಸ್. ಈಶ್ವರಪ್ಪ ಅದನ್ನು ಹತೋಟಿಗೆ ತಂದಿರುವುದೂ ನಿಜ. ಈಶ್ವರಪ್ಪ ಮತ್ತು ನಾನು ಒಂದೇ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದೇವೆ. ಈಶ್ವರಪ್ಪ ಡ್ರೈವಿಂಗ್ ಮಾಡುತ್ತಿದ್ದು, ಅವರಿಗೆ ದಣಿವಾದಾಗ ನಾನೂ ಸ್ವಲ್ಪ ದೂರ ಡ್ರೈವಿಂಗ್ ಮಾಡಬೇಕೆಂಬ ಬಯಕೆ ಇದೆ. ಅವರು ಅವಕಾಶ ಕೊಟ್ಟರೆ ಡ್ರೈವ್ ಮಾಡುತ್ತೇನೆ. ಇಲ್ಲ ಅವರ ಪಕ್ಕದಲ್ಲಿಯೇ ಕುಳಿತುಕೊಳ್ಳುತ್ತೇನೆ ಎಂದರು.