ಡಚ್, ಜರ್ಮನ್ ಜೂ. ಕೂಟ: ಮನ್‌ರಾಜ್, ರಕ್ಷಿತಾಶ್ರೀ ನೇತೃತ್ವ
Team Udayavani, Feb 6, 2023, 11:30 PM IST
ಹೊಸದಿಲ್ಲಿ: ಮುಂಬರುವ ಡಚ್ ಮತ್ತು ಜರ್ಮನ್ ಜೂನಿಯರ್ ಬ್ಯಾಡ್ಮಿಂಟನ್ ಕೂಟದಲ್ಲಿ ಭಾಗವಹಿಸುವ 19 ಸದಸ್ಯರ ಭಾರತೀಯ ತಂಡವನ್ನು ಮನ್‌ರಾಜ್ ಸಿಂಗ್ ಮತ್ತು ರಕ್ಷಿತಾಶ್ರೀ ಅವರು ಮುನ್ನಡೆಸಲಿದ್ದಾರೆ.
ಈ ಕೂಟಗಳು ಮಾ. 1ರಿಂದ 12ರ ವರೆಗೆ ನಡೆಯಲಿವೆ. ಡಚ್ ಕೂಟವು ಮಾ. 1ರಿಂದ ಹಾರ್ಲೆಮ್ ಹಾಗೂ ಜರ್ಮನ್ ಜೂನಿಯರ್ ಕೂಟವು ಮಾ. 8ರಿಂದ ಬರ್ಲಿನ್‌ನಲ್ಲಿ ಆರಂಭವಾಗಲಿದೆ.
ವರ್ಷಾರಂಭದ ಈ ಮಹತ್ವದ ಎರಡು ಕೂಟಗಳಿಗಾಗಿ ಭಾರತೀಯ ಜೂನಿಯರ್ ತಂಡದ ಆಯ್ಕೆಗಾಗಿ ಭಾರತೀಯ ಬ್ಯಾಡ್ಮಿಂಟನ್ ಅಸೋಸಿ ಯೇಶನ್ ಗ್ರೇಟರ್ ನೋಯ್ಡಾದಲ್ಲಿ ನಾಲ್ಕು ದಿನ ತರಬೇತಿ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರದಲ್ಲಿ ಆಟಗಾರರ ನಿರ್ವಹಣೆಯ ಆಧಾರದಲ್ಲಿ ತಂಡವನ್ನು ಆಯ್ಕೆ ಮಾಡಲಾಗಿತ್ತು.
ಪುರುಷರ ತಂಡದಲ್ಲಿ ಮನ್‌ರಾಜ್ ಸಿಂಗ್ ಅಗ್ರಸ್ಥಾನ ಪಡೆದಿದ್ದಾರೆ. ಆಯುಷ್ ಶೆಟ್ಟಿ, ಲೋಕೇಶ್ ರೆಡ್ಡಿ ಕೆ. ಮತ್ತು ಗಗನ್ ಅನಂತರದ ಸ್ಥಾನದಲ್ಲಿದ್ದಾರೆ. ಉದಯೋನ್ಮುಖ ಶಟ್ಲರ್ ರಕ್ಷಿತಾಶ್ರೀ ವನಿತಾ ತಂಡದ ನೇತೃತ್ವ ವಹಿಸಲಿದ್ದಾರೆ. ಶ್ರೇಯಾ ಲೀಲೆ, ಜಿಯಾ ರಾವತ್ ಮತ್ತು ಅಲಿಶಾ ನಾಯಕ್ ಅನಂತರದ ಸ್ಥಾನದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…
ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು
ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪ; ಐವರು ವಿದ್ಯಾರ್ಥಿಗಳು ವಶಕ್ಕೆ
ಕನಸಿನಲ್ಲಿ ʼಶ್ರೀಕೃಷ್ಣʼ ದೇವರನ್ನು ಕಂಡು ನಿದ್ದೆಯಿಂದ ಎಚ್ಚೆದ್ದ ಸಚಿವ.!
Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್