
Bajaj: ಪಲ್ಸರ್ N 150- ಭಾರತದ ಮಾರುಕಟ್ಟೆಗೆ ಬಿಡುಗಡೆ
- ರೇಸಿಂಗ್ ರೆಡ್,ಪರ್ಲ್ ವೈಟ್,ಎಬೊನಿ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯ
Team Udayavani, Sep 26, 2023, 8:34 PM IST

ಬಜಾಜ್ ಆಟೊ ಕಂಪನಿಯು ಹೊಚ್ಚ ಹೊಸ ಪಲ್ಸರ್ ಎನ್150 ಬೈಕ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದು ನ್ಪೋರ್ಟ್ಸ್ ಅವತರಣಿಕೆಯ ಬೈಕ್ ಆಗಿದ್ದು, ಇದರ ಬೆಲೆ 1,17,677 ರೂ.(ಎಕ್ಸ್-ಶೋರೂಮ್) ಇದೆ. 149.68 ಸಿಸಿ, 4 ಸ್ಟ್ರೋಕ್ ಎಂಜಿನ್ ಹೊಂದಿದೆ.
ರೇಸಿಂಗ್ ರೆಡ್, ಪರ್ಲ್ ವೈಟ್ ಮತ್ತು ಎಬೊನಿ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಡಿಜಿಟಲ್ ಸ್ಪೀಡೋಮೀಟರ್, ಯುಎಸ್‌ಬಿ ಪೋರ್ಟ್, ಡಿಸ್ಕ್ ಬ್ರೇಕ್ ಹೊಂದಿದೆ. ಒಂದು ಲೀಟರ್ ಪೆಟ್ರೋಲ್‌ಗೆ 45-50 ಕಿ.ಮೀ. ಮೈಲೇಜ್ ಬರಲಿದೆ ಎಂದು ಕಂಪನಿ ತಿಳಿಸಿದೆ.
ಟಾಪ್ ನ್ಯೂಸ್
