Bangladesh V/s New Zealand: ವಿಲಿಯಮ್ಸನ್ ಸೆಂಚುರಿ
Team Udayavani, Nov 29, 2023, 11:51 PM IST
ಸಿಲ್ಹೆಟ್ (ಬಾಂಗ್ಲಾದೇಶ): ನಾಯಕ ಕೇನ್ ವಿಲಿಯಮ್ಸನ್ ಅವರ 29ನೇ ಶತಕದ ನೆರವಿನಿಂದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಚೇತರಿಕೆ ಕಂಡಿದೆ. 2ನೇ ದಿನದಾಟದ ಅಂತ್ಯಕ್ಕೆ 8 ವಿಕೆಟಿಗೆ 266 ರನ್ ಗಳಿಸಿದೆ. ಬಾಂಗ್ಲಾ ಮೊದಲ ಇನ್ನಿಂಗ್ಸ್ನಲ್ಲಿ 310 ರನ್ ಮಾಡಿತ್ತು.
ಕಪ್ತಾನನ ಆಟದ ಮೂಲಕ ತಂಡದ ರಕ್ಷಣೆಗೆ ನಿಂತ ಕೇನ್ ವಿಲಿಯಮ್ಸನ್ 205 ಎಸೆತ ನಿಭಾಯಿಸಿ 104 ರನ್ ಹೊಡೆದರು (11 ಬೌಂಡರಿ). ಇದು ಅವರ 29ನೇ ಟೆಸ್ಟ್ ಶತಕ. ಇದರೊಂದಿಗೆ ಡಾನ್ ಬ್ರಾಡ್ಮನ್ ಮತ್ತು ವಿರಾಟ್ ಕೊಹ್ಲಿ ಅವರ ಶತಕದ ದಾಖಲೆಯನ್ನು ವಿಲಿಯಮ್ಸನ್ ಸರಿದೂಗಿಸಿದರು.
ಕಿವೀಸ್ ಸರದಿಯಲ್ಲಿ ಮಿಂಚಿದ ಇನ್ನಿಬ್ಬರೆಂದರೆ ಡ್ಯಾರಿಲ್ ಮಿಚೆಲ್ (41) ಮತ್ತು ಗ್ಲೆನ್ ಫಿಲಿಪ್ಸ್ (42). ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಮ್ 4 ವಿಕೆಟ್ ಉರುಳಿಸಿ ನ್ಯೂಜಿಲ್ಯಾಂಡ್ಗೆ ಕಡಿವಾಣ ಹಾಕಿದರು. 2 ವಿಕೆಟ್ ಹೊಂದಿರುವ ಕಿವೀಸ್ 44 ರನ್ ಹಿನ್ನಡೆಯಲ್ಲಿದೆ.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ- 310 (ಮಹ್ಮದುಲ್ ಹಸನ್ ಜಾಯ್ 86, ನಜ್ಮುಲ್ ಹುಸೇನ್ 37, ಮೊಮಿನುಲ್ ಹಕ್ 37, ಗ್ಲೆನ್ ಫಿಲಿಪ್ಸ್ 53ಕ್ಕೆ 4, ಕೈಲ್ ಜೇಮಿಸನ್ 52ಕ್ಕೆ 2, ಅಜಾಜ್ ಪಟೇಲ್ 76ಕ್ಕೆ 2). ನ್ಯೂಜಿಲ್ಯಾಂಡ್-8 ವಿಕೆಟಿಗೆ 266 (ಕೇನ್ ವಿಲಿಯಮ್ಸನ್ 104, ಗ್ಲೆನ್ ಫಿಲಿಪ್ಸ್ 42, ಡ್ಯಾರಿಲ್ ಮಿಚೆಲ್ 41, ತೈಜುಲ್ ಇಸ್ಲಾಮ್ 89ಕ್ಕೆ 4).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ